'ಬ್ಲೂ ವೇಲ್' ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುತ್ತಿರುವ ಮಂಗಳೂರಿನ ಶಾಲೆ

ಮಂಗಳೂರು, ಆಗಸ್ಟ್ 31: ರಷ್ಯಾದಲ್ಲಿ ಆರಂಭಗೊಂಡ ಬ್ಲೂ ವೇಲ್ ಆಟವು ಸದ್ಯ ವಿಶ್ವದಾದ್ಯಂತ ವ್ಯಾಪಿಸಿದ್ದು, ಈವರೆಗೆ ಸುಮಾರು 200ಕ್ಕಿಂತ ಹೆಚ್ಚಿನ ಹದಿಹರೆಯದ ಯುವಕ ಯುವತಿಯರು ಈ ಆಟಕ್ಕೆ ಬಲಿಯಾಗಿದ್ದಾರೆ.

ಸದ್ಯ ಭಾರತದಲ್ಲೀಗ ಈ ಆಟ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕ ಸೇರಿ ಹಲವೆಡೆ ಮಕ್ಕಳು ಈ ಗೇಮ್ ಗೆ ಬಲಿಯಾಗಿದ್ದಾರೆ. ಹೀಗಾಗಿ ಇದರಿಂದ ಎಚ್ಚೆತ್ತುಕೊಂಡಿರುವ ಮಂಗಳೂರಿನ ಶಿಕ್ಷಣ ಸಂಸ್ಥೆಯೊಂದು ಮಕ್ಕಳ ಪೋಷಕರಿಗೆ ಪತ್ರದ ಮೂಲಕ ಎಚ್ಚರಿಕೆ ನೀಡುವ ಕೆಲಸ ಮಾಡಿದೆ.

ಬ್ಲೂವೇಲ್ ಗೇಮ್ ಗೆ ಮಕ್ಕಳು ಬಲಿಯಾಗುತ್ತಿರುವುದನ್ನು ಮನಗಂಡ ಮೇರಿಹಿಲ್ ನ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಹೀಗಾಗಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಿಗೆ ಈ ಸಂಬಂಧ ಪತ್ರವೊಂದನ್ನು ರವಾನಿಸಿದೆ.

ಹೆತ್ತವರಿಗೆ ಎಚ್ಚರಿಕೆ

ಹೆತ್ತವರಿಗೆ ಎಚ್ಚರಿಕೆ

ಪತ್ರದಲ್ಲಿ ಬ್ಲೂ ವೇಲ್ ಆಟದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಜತೆಗೆ ಮಕ್ಕಳಿಗೆ ಈ ಆಟ ಆಡಲು ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಮಕ್ಕಳ ಹೆತ್ತವರಿಗೆ ಎಚ್ಚರಿಕೆ ನೀಡಲಾಗಿದೆ.

ಗೇಮ್ ನ ಕೆಡಕುಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವಂತೆಯೂ ಪತ್ರದ ಮೂಲಕ ಪೋಷಕರಿಗೆ ತಿಳಿಸಲಾಗಿದೆ.

ಶ್ಲಾಘನೀಯ ನಡೆ

ಶ್ಲಾಘನೀಯ ನಡೆ

ಒಟ್ಟಾರೆ ಬ್ಲೂವೇಲ್ ಮರಣ ಮೃದಂಗದ ಮಧ್ಯೆ ಹೆತ್ತವರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಹೀಗಾಗಿ ಹೆತ್ತವರು ಕೂಡ ಈ ಬಗ್ಗೆ ಗಮನ ಹರಿಸಿ ಮಕ್ಕಳ ಚಲನವಲನಗಳ ಕಡೆಗೆ ಗಮನ ಕೊಡಬೇಕಿದೆ.

ಅಲ್ಲದೇ ಮಕ್ಕಳಿಗೆ ಕಲಿಕೆಯ ಉದ್ದೇಶಕ್ಕೆ ತೆಗೆದುಕೊಟ್ಟಿರುವ ಕಂಪ್ಯೂಟರ್ ಗಳಲ್ಲೂ ಈ ಗೇಮ್ ಡೌನ್ ಲೋಡ್ ಆಗಿದೆಯೋ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುವ ಅಗತ್ಯವಿದೆ.

ಸರಣಿ ಬಲಿ

ಸರಣಿ ಬಲಿ

ಭಾರತದಲ್ಲಿ ಬ್ಲೂ ವೇಲ್ ಗೇಮ್ ಗೆ ಸಂಬಂಧಿಸಿದ ಮೊತ್ತ ಮೊದಲ ಆತ್ಮಹತ್ಯೆ ಪ್ರಕರಣ ಜುಲೈ 30 ರಂದು ಮುಂಬೈನಲ್ಲಿ ವರದಿಯಾಗಿತ್ತು. 14 ರ ಹರೆಯದ ಬಾಲಕನೊಬ್ಬ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಬ್ಲೂವೆಲ್ಲ್ ಎಂಬ ಮಾರಣಾಂತಿಕ ಗೇಮ್ ಭಾರತದಲ್ಲಿ ತನ್ನ ಮೊದಲ ಬಲಿ ಪಡೆದುಕೊಂಡಿತ್ತು.

ನಂತರ ಹಲವು ವಿದ್ಯಾರ್ಥಿಗಳು ಈ ಆಟಕ್ಕೆ ಬಲಿಯಾಗಿದ್ದರು.

ಸರಕಾರದಿಂದಲೂ ನಿಯಂತ್ರಣ ಕ್ರಮ

ಸರಕಾರದಿಂದಲೂ ನಿಯಂತ್ರಣ ಕ್ರಮ

ಬ್ಲೂ ವೇಲ್ ಗೇಮ್ ನ ಬಗ್ಗೆ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಕಾರ್ಯಕ್ಕೆ ಸದ್ಯ ಸರ್ಕಾರವೇ ಮುಂದಾಗಿದೆ. ಇತ್ತೀಚೆಗೆ ಭಾರತ ಸರ್ಕಾರ ಗೇಮ್ ನ ಲಿಂಕ್ ಸೋರ್ಸ್ ಅಳಿಸಿ ಹಾಕುವಂತೆ ಇಂಟರ್ನೆಟ್ ಸೇವಾ ಕಂಪೆನಿಗಳಿಗೆ ಸೂಚಿಸಿತ್ತು.

ಬ್ಲೂ ವೇಲ್ ಆಟದ ಬಗ್ಗೆ ಎಚ್ಚರ ವಹಿಸುವುದರಲ್ಲಿ ವಿದ್ಯಾರ್ಥಿಗಳ ಪೋಷಕರ ಕಾರ್ಯ ಕೂಡ ಇಲ್ಲಿ ಮಹತ್ತರವಾಗಿದೆ.ತಮ್ಮ ಮಕ್ಕಳು ಶಾಲೆಯಿಂದ ಬಂದ ನಂತರ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಟ್ಯಾಬ್ ನಿಂದ ಯಾವ ರೀತಿಯ ಗೇಮ್ ಗಳನ್ನು ಆಡುತ್ತಾರೆ ಎಂಬುದರ ಬಗ್ಗೆ ತೀವ್ರ ನಿಗಾ ವಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+