ಮಂಗಳೂರು : 100 ರೂ. ಕೇಳಿದ್ರೆ 500 ಕೊಡುತ್ತೆ ಎಟಿಎಂ!

ಮಂಗಳೂರು, ಡಿ.12 : ನೀವು 100 ರೂ. ಕೇಳಿದರೆ ಎಟಿಎಂ 500 ರೂ. ಕೊಡುತ್ತದೆಯೇ?, ಖಂಡಿತ ಇಲ್ಲ ಎಂದು ನೀವು ಹೇಳಬಹುದು. ಆದರೆ, ಇಲ್ಲೊಂದು ಎಟಿಟಿಎಂ ಕೇಳಿದ್ದಕ್ಕಿಂತ ಹೆಚ್ಚು ಹಣವನ್ನು ಕೊಟ್ಟು ಬ್ಯಾಂಕ್‌ ಸಿಬ್ಬಂದಿಗೆ ತಲೆನೋವು ತಂದಿದೆ. ಕೊನೆಗೂ ಎಟಿಎಂನ ಈ ಧಾರಾಳತನಕ್ಕೆ ಸಿಬ್ಬಂದಿ ಬ್ರೇಕ್ ಹಾಕಿದ್ದಾರೆ.

ಮಂಗಳೂರಿನ ವಿಟ್ಲದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಎಟಿಎಂ ತನ್ನ ಬಳಿ ಬಂದವರಿಗೆ ಹೆಚ್ಚು ಹಣ ನೀಡಿ ಧನಲಕ್ಷ್ಮೀ ಯೋಗವನ್ನು ಒದಗಿಸಿದೆ. ಹೆಚ್ಚು ಹಣ ಪಡೆದವರು ಅದನ್ನು ಜೇಬಿಗಿಳಿಸಿಕೊಂಡು ಹೋಗಿದ್ದು, ಈಗ ಬ್ಯಾಂಕ್‌ ಸಿಬ್ಬಂದಿ ಅದನ್ನು ಮರಳಿ ಕೊಡಿ ಎಂದು ಮನವಿ ಮಾಡಿದ್ದಾರೆ. [ಎಟಿಎಂ ಭದ್ರತೆ ಡಿ.31 ಡೆಡ್‌ ಲೈನ್]

atm

ಆಗಸ್ಟ್‌ ತಿಂಗಳ 20ರಿಂದ ನವೆಂಬರ್‌ 17ರ ನಡುವೆ ಇಂತಹ ಘಟನೆ ಹಲವು ಬಾರಿ ನಡೆದಿದ್ದು, 100 ರೂ. ಕೇಳಿದವರ ಕೈಗೆ 500 ರೂ. ಗರಿಗರಿ ನೋಟು ಸೇರಿದೆ. ಹಣ ಸೋರಿಕೆಯಾಗುತ್ತಿರುವ ವಿಚಾರ ಬ್ಯಾಂಕ್‌ ಮುಖ್ಯಸ್ಥರ ಗಮನಕ್ಕೆ ಬಂದಿದ್ದರೂ, ಅದನ್ನು ಪತ್ತೆ ಹಚ್ಚಲು ಕೆಲವು ದಿನಗಳೇ ಬೇಕಾಗಿವೆ. [ಬ್ಯಾಂಕ್ ಬ್ಯಾಲೆನ್ಸ್ ಬೇಕಾ ಮಿಸ್ ಕಾಲ್ ಕೊಡಿ]

ಸಿಬ್ಬಂದಿ ಯಟವಟ್ಟು : ಎಟಿಎಂನ ಈ ಧಾರಾಳತನಕ್ಕೆ ಎಟಿಎಂಗೆ ಹಣ ತುಂಬಿಸುವ ಸಿಬ್ಬಂದಿಯ ಯಡವಟ್ಟು ಕಾರಣ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. 100 ರೂಪಾಯಿಗಳ ನೋಟುಗಳನ್ನು ಇಡಬೇಕಾದ ಸ್ಥಳದಲ್ಲಿ 500 ರೂ. ನೋಟುಗಳನ್ನು ಇಟ್ಟಿದ್ದರಿಂದ ಸುಮಾರು 1.20 ಲಕ್ಷ ರೂ. ಸೋರಿಕೆ ಆಗಿದೆ ಎಂಬುದು ಬಹಿರಂಗವಾಗಿದೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]

ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಅನೇಕರು ಈ ಎಟಿಎಂನಿಂದ ಹಣವನ್ನು ಪಡೆದಿದ್ದಾರೆ. ನಮ್ಮ ತಪ್ಪಿನಿಂದ ಹೀಗಾಗಿದೆ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ಹಿಂದುರುಗಿಸಿ ಎಂದು ಬ್ಯಾಂಕ್ ಸಿಬ್ಬಂದಿ ಜನರಿಗೆ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+