Mangaluru blast case: ಕುಕ್ಕರ್ ಬಾಂಬ್ ಸ್ಫೋಟ ಸಂತ್ರಸ್ತನಿಗೆ ಮನೆ ನವೀಕರಿಸಿ ಯುಗಾದಿ ಗಿಫ್ಟ್ ನೀಡಿದ ಗುರುಬೆಳದಿಂಗಳು ಟ್ರಸ್ಟ್
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸ್ಫೋಟದಲ್ಲಿ ಗಾಯಗೊಂಡಿದ್ದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ ಇಂದಿನ ಯುಗಾದಿ ಭರವಸೆಯ ಬೆಳಕಿನ ಆಶಾಕಿರಣ ಮೂಡಿಸಿದೆ.
ಮಂಗಳೂರು, ಮಾರ್ಚ್, 22: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸ್ಫೋಟದಲ್ಲಿ ಗಾಯಗೊಂಡಿದ್ದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿಯವರಿಗೆ ಇಂದಿನ ಯುಗಾದಿ ಭರವಸೆಯ ಬೆಳಕಿನ ಆಶಾಕಿರಣ ಮೂಡಿಸಿದೆ.
ಕುಕ್ಕರ್ ಬಾಂಬ್ ಸ್ಪೋಟದಿಂದ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅವರಿಗೆ 'ಗುರುಬೆಳದಿಂಗಳು' ಟ್ರಸ್ಟ್ ಆಸರೆಯಾಗಿತ್ತು. ಹಾಗೆಯೇ ಈ ಸಂಸ್ಥೆ ನೀಡಿದ ಭರವಸೆಯಂತೆ ಸುಸಜ್ಜಿತವಾಗಿ ಮನೆಯನ್ನು ನವೀಕರಣ ಮಾಡಿ ಪುರುಷೋತ್ತಮ ಅವರಿಗೆ ಹಸ್ತಾಂತರ ಮಾಡಿದೆ.

ಪುರುಷೋತ್ತಮಗೆ ಆಸರೆಯಾದ ಟ್ರಸ್ಟ್
ಪುರುಷೋತ್ತಮ ಪೂಜಾರಿಯವರಿಗೆ ಕುಕ್ಕರ್ ಬಾಂಬ್ ಸ್ಫೋಟದಿಂದ ಆದ ಗಾಯದ ನೋವು ಒಂದೆಡೆಯಾದರೆ, ಮತ್ತೊಂದೆಡೆ ನಿಶ್ಚಿತಾರ್ಥಗೊಂಡ ಪುತ್ರಿಯ ವಿವಾಹ, ಮನೆ ನವೀಕರಣ ಚಿಂತೆಯೂ ತೀವ್ರವಾಗಿ ಕಾಡುತ್ತಿತ್ತು. ಸರ್ಕಾರ ಆಸ್ಪತ್ರೆಯ ಖರ್ಚುವೆಚ್ಚವನ್ನು ಭರಿಸುವ ಭರವಸೆ ನೀಡಿತ್ತು. ಆದರೆ ಸಚಿವರಿಬ್ಬರು ವೈಯುಕ್ತಿಕ ನೆಲೆಯಲ್ಲಿ ಹಣ ನೀಡಿದ್ದು, ಶಾಸಕ ವೇದವ್ಯಾಸ ಕಾಮತ್ ಅವರು ಆಟೋರಿಕ್ಷಾ ನೀಡಿದ್ದು ಬಿಟ್ಟರೆ ಈವರೆಗೆ ಸರ್ಕಾರದಿಂದ ಯಾವ ಪರಿಹಾರವೂ ದೊರಕಿಲ್ಲ. ಪುತ್ರಿಯ ಮದುವೆ, ಮನೆ ನವೀಕರಣ ವಿಚಾರದಲ್ಲಿ ಪುರುಷೋತ್ತಮ ತೀವ್ರ ಚಿಂತೆಗೊಳಗಾಗಿದ್ದರು.
ಮನೆ ನವೀಕರಣಗೊಳಿಸಿದ ಟ್ರಸ್ಟ್
ನಂತರ ಪುರುಷೋತ್ತಮ ಪೂಜಾರಿಯವರನ್ನು ಗುರುಬೆಳದಿಂಗಳು ಟ್ರಸ್ಟ್ ಕೈಹಿಡಿಯಿತು. ಈ ಟ್ರಸ್ಟ್ ಅಧ್ಯಕ್ಷ ಪದ್ಮರಾಜ್ ಆರ್. ಭರವಸೆಯ ಮಾತಿನಿಂದ ಪುರುಷೋತ್ತಮ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು. ಡಿಸೆಂಬರ್ ವೇಳೆಗೆ ಗುರುಬೆಳದಿಂಗಳು ಟ್ರಸ್ಟ್ ನೀಡಿದ ಭರವಸೆಯಂತೆ ಸುಮಾರು ಎರಡೂವರೆ ತಿಂಗಳಲ್ಲಿ ಮನೆಯನ್ನು ಸುಸಜ್ಜಿತವಾಗಿ ನವೀಕರಣಗೊಳಿಸಿದೆ.
ಹಾಗೆಯೇ ಇಂದು ಮನೆಯ ಹಸ್ತಾಂತರ ಕಾರ್ಯ ನಡೆದಿದೆ. ಅಲ್ಲದೆ ಮೇ 3ರಂದು ನಡೆಯುವ ಪುರುಷೋತ್ತಮ ಪೂಜಾರಿಯವರ ಪುತ್ರಿಯ ವಿವಾಹವನ್ನು ಮುಂದೆ ನಿಂತು ನೆರವೇರಿಸುವುದಾಗಿ ಪದ್ಮರಾಜ್ ಆರ್. ಭರವಸೆ ನೀಡಿದ್ದಾರೆ. ಇದು ಪುರುಷೋತ್ತಮ ಪೂಜಾರಿಯವರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ.
ಕುಕ್ಕರ್ ಬಾಂಬ್ ಸ್ಫೋಟದಿಂದ ನೊಂದಿದ್ದ ಪುರುಷೋತ್ತಮ ಪೂಜಾರಿಗೆ ಬದುಕುವ ಭರವಸೆಯೇ ಇರಲಿಲ್ಲ. ಸಚಿವರು, ಶಾಸಕರು ಪರಿಹಾರದ ಭರವಸೆಯನ್ನು ನೀಡಿದ್ದರು. ಆದರೆ ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದು ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್.
ಮಗಳ ಮದುವೆ ಮತ್ತು ಬೀಳುವ ಸ್ಥಿತಿಯಲ್ಲಿದ್ದ ಹಳೆ ಮನೆಯ ಕುರಿತು ಚಿಂತಿಸುತ್ತಾ ಪುರುಷೋತ್ತಮ ಪೂಜಾರಿ ಕುಸಿದು ಹೋಗಿದ್ದರು. ಆದರೆ, ನಾಲ್ಕೇ ತಿಂಗಳಲ್ಲಿ ಈ ಫೌಂಡೇಶನ್ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ನವೀಕರಣಗೊಳಿಸಿದೆ. ಯುಗಾದಿಯ ದಿನದಂದೇ ಪುರುಷೋತ್ತಮ ಪೂಜಾರಿಗೆ ಹೊಸ ಮನೆಯನ್ನು ಹಸ್ತಾಂತರಿಸಿದ್ದಾರೆ.

ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ
ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಚರ್ಚ್ ಧರ್ಮಗುರು ನೇತೃತ್ವದಲ್ಲಿ ಮನೆಯನ್ನು ಗುರು ಬೆಳದಿಂಗಳು ಹೆಸರಲ್ಲಿಯೇ ಅನಾವರಣ ಮಾಡಲಾಗಿದೆ. ಸರಳ ಕಾರ್ಯಕ್ರಮದಲ್ಲಿ ಪುರುಷೋತ್ತಮ ಪೂಜಾರಿಗೆ ಮನೆ ಹಸ್ತಾಂತರಗೊಂಡಿದೆ. ಚಿಕಿತ್ಸಾ ವೆಚ್ಚ ಎಂಟು ಲಕ್ಷ ರೂಪಾಯಿ ಆಗಿದ್ದು, ಅದನ್ನು ಮಗಳ ಇಎಸ್ಐ ಸೌಲಭ್ಯದಿಂದ ಭರಿಸಲಾಗಿದೆ. ಬಾಂಬ್ ಸ್ಫೋಟ ಸಂದರ್ಭದಲ್ಲಿ ಸರ್ಕಾರ ಪರಿಹಾರದ ಭರವಸೆ ನೀಡಿತ್ತು. ಆದರೆ ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಪುರುಷೋತ್ತಮ ಪೂಜಾರಿ ಅಳಲು ತೋಡಿಕೊಂಡರು.
ಪದ್ಮರಾಜ್ ರಾಮಯ್ಯ ಹೇಳಿದ್ದೇನು?
ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಅವರು ಕುಸಿಯುವ ಹಂತದಲ್ಲಿದ್ದ ಪುರುಷೋತ್ತಮ ಅವರ ಮನೆಯನ್ನು ನವೀಕರಣಗೊಳಿಸಲು ಮುಂದಾಗಿದ್ದರು. ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿರುವ ಪದ್ಮರಾಜ್ ಅವರ ಈ ಕಾರ್ಯವು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮೂರು ವರ್ಷದ ಹಿಂದೆ ಯುಗಾದಿಯಂದೇ ಸ್ಥಾಪನೆಯಾದ ಈ ಫೌಂಡೇಶನ್, ಇಂದು ಯುಗಾದಿಯಂದೇ ಮನೆ ಹಸ್ತಾಂತರಿಸಿದೆ. ಇದೇ ವೇಳೆ ಐದು ತಿಂಗಳು ಕಳೆದರೂ ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಪರಿಹಾರ ಸಿಗದೇ ಇರುವುದನ್ನು ಖಂಡಿಸಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಯುಗಾದಿ ದಿನದಂದೇ ಮನೆಯನ್ನು ನವೀಕರಣಗೊಳಿಸಿ ಹಸ್ತಾಂತರ ಮಾಡಿದರೆ, ಸಂತ್ರಸ್ತನಿಗೆ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಎದ್ದಿರುವುದು ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ಕಿವಿ ಹಿಂಡಿದಂತಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications