ಅಗಲಿದ ಕಾರ್ಯಕರ್ತನ ಕುಟುಂಬಕ್ಕೆ ಶಕ್ತಿ ತುಂಬಿದ ಬಿಜೆಪಿ ನಾಯಕರು

ಅಕಾಲಿಕ ಮರಣವನ್ನಪ್ಪಿದ ಕುರ್ನಾಡು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ್ ಪೂಜಾರಿಯವರ ಬಡ ಕುಟುಂಬಕ್ಕೆ ಇಲ್ಲಿನ ಬಿಜೆಪಿ ಶಕ್ತಿ ಕೇಂದ್ರದ ಸದಸ್ಯರು ಶಕ್ತಿ ತುಂಬಿದ್ದಾರೆ. 1 ಲಕ್ಷ ರೂ. ಸಹಾಯ ಧನದೊಂದಿಗೆ ಮನೆ ದುರುಸ್ಥಿ ನಡೆಸಿದ್ದಾರೆ.

ಮಂಗಳೂರು, ಮೇ 7: ಮಹಾಮಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅಕಾಲಿಕ ಮರಣವನ್ನಪ್ಪಿದ ಕುರ್ನಾಡು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ್ ಪೂಜಾರಿಯವರ ಬಡ ಕುಟುಂಬಕ್ಕೆ ಇಲ್ಲಿನ ಬಿಜೆಪಿ ಶಕ್ತಿ ಕೇಂದ್ರದ ಸದಸ್ಯರು ಶಕ್ತಿ ತುಂಬಿದ್ದಾರೆ. 1 ಲಕ್ಷ ರೂಪಾಯಿ ಸಹಾಯ ಧನದೊಂದಿಗೆ ಮನೆ ದುರುಸ್ಥಿಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಹಿರಿಯ ಮುಖಂಡ ಟಿ.ಜಿ ರಾಜಾರಾಂ ಭಟ್ ವಿಶ್ವನಾಥರ ಏಕೈಕ ಮಗಳಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತಿದ್ದಾರೆ.

ಕುರ್ನಾಡುವಿನ ಅಂಗಣೆಮಾರು ನಿವಾಸಿ ಸ್ಥಳೀಯ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ವಿಶ್ವನಾಥ ಪೂಜಾರಿಯವರು ಪಕ್ಷದ ಅತ್ಯಂತ ಪ್ರಾಮಾಣಿಕ ಕಾರ್ಯಕರ್ತರಾಗಿದ್ದರು. ಬದುಕು ಸಾಗಿಸಲು ಮುಡಿಪುವಿನಲ್ಲಿ ಸಣ್ಣದೊಂದು ಊಟದ ಕ್ಯಾಂಟೀನನ್ನು ಗೆಳೆಯನೊಂದಿಗೆ ಪಾಲುದಾರಿಕೆಯಲ್ಲಿ ನಿರ್ವಹಿಸುತ್ತಿದ್ದರು.

Mangaluru: BJP shakthi kendra helps Vishwanth family who were in great distress

ಬಿಜೆಪಿ ಪಕ್ಷದಲ್ಲಿದ್ದರೂ ಸ್ಥಳೀಯವಾಗಿ ಎಲ್ಲಾ ಪಕ್ಷ, ಜಾತಿ, ಸಂಘಟನೆಗಳೊಂದಿಗೆ ಉತ್ತಮ ಒಡನಾಟದಲ್ಲಿದ್ದರು. ಆರೋಗ್ಯವಾಗಿಯೇ ಲವಲವಿಕೆಯಿಂದಿದ್ದ ವಿಶ್ವನಾಥ್ ಅವರಿಗೆ ಕಳೆದ ಕೆಲ ತಿಂಗಳ ಹಿಂದಷ್ಟೇ ಹೊಟ್ಟೆನೋವು ಕಾಣಿಸಿದ್ದು ವೈದ್ಯರಲ್ಲಿ ತೋರಿಸಿದಾಗ ಕರುಳಲ್ಲಿ ಕ್ಯಾನ್ಸರ್ ಇರುವುದು ತಿಳಿದು ಬಂದಿತ್ತು.

ನಂತರ ಆಸ್ಪತ್ರೆಗೆ ದಾಖಲಾಗಿ ಅಪಾರ ಹಣ ವ್ಯಯಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಎಪ್ರಿಲ್ 25ನೇ ಮಂಗಳವಾರದಂದು ಸಾವನ್ನಪ್ಪಿದ್ದರು. ವಿಶ್ವನಾಥ್ ಅವರ ಪತ್ನಿ ಮನೆಯಲ್ಲೇ ಬೀಡಿ ಕಟ್ಟುತ್ತಿದ್ದು, ಏಕೈಕ ಪುತ್ರಿ ಎಂಟನೇ ತರಗತಿ ತೇರ್ಗಡೆ ಹೊಂದಿದ್ದಾಳೆ. ಇದ್ದ ಚಿನ್ನದ ಒಡವೆಗಳನ್ನು ಗಿರವಿ ಇಟ್ಟು ವಿಶ್ವನಾಥ್ ಪೂಜಾರಿ ಅವರಿಗೆ ಚಿಕಿತ್ಸೆ ನೀಡಿದ ಕುಟುಂಬವೀಗ ಬಡವಾಗಿ ಅಸಹಾಯಕ ಸ್ಥಿತಿಯಲ್ಲಿದೆ.

ಕುಟುಂಬಕ್ಕೆ ಶಕ್ತಿ ತುಂಬಿತು ಬಿಜೆಪಿ ಶಕ್ತಿಕೇಂದ್ರ
ತಮ್ಮ ಪಕ್ಷದ ತಳಮಟ್ಟದ ಬಡ ಕಾರ್ಯಕರ್ತ ವಿಶ್ವನಾಥ್ ಅವರು ಆಸ್ಪತ್ರೆಯಲ್ಲಿರುವಾಗಲೇ ರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಸದಸ್ಯರು ಸಹಾಯ ಹಸ್ತ ನೀಡುತ್ತಾ ಬಂದಿದ್ದರು. ಇದೀಗ ಇಲ್ಲಿನ ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ನೇತೃತ್ವದಲ್ಲಿ ಸ್ನೇಹಿತನ ಕುಟುಂಬಕ್ಕೆ ಶಕ್ತಿ ತುಂಬುವ ಕಾರ್ಯ ನಡೆಸಿದ್ದಾರೆ.

Mangaluru: BJP shakthi kendra helps Vishwanth family who were in great distress

ಕುರ್ನಾಡುವಿನ ಬಿಜೆಪಿ ಪಾಳಯದಲ್ಲಿ ಹೆಚ್ಚಿನ ಧನಿಕರಿಲ್ಲದಿದ್ದರೂ ಸಹ ಇದ್ದವರೆಲ್ಲರೂ ಸೇರಿ ತಮ್ಮ ಜೇಬಿನಿಂದಲೇ ಒಂದೂವರೆ ಲಕ್ಷ ರೂಪಾಯಿಗಳನ್ನು ಒಟ್ಟುಗೂಡಿಸಿ 1 ಲಕ್ಷ ರೂಪಾಯಿಯನ್ನು ವಿಶ್ವನಾಥರ ಮಗಳ ಭವಿಷ್ಯಕ್ಕಾಗಿ ಬ್ಯಾಂಕಿನಲ್ಲಿ ಎಫ್‍ಡಿಯನ್ನಾಗಿಸಿ ದಾಖಲೆ ಪತ್ರವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಉಳಿದ ಐವತ್ತು ಸಾವಿರ ರೂಪಾಯಿಗಳನ್ನು ಮನೆ ದುರಸ್ತಿಗಾಗಿ ಮೀಸಲಿಟ್ಟಿದ್ದಾರೆ.

ಹೆಣ್ಮಗಳ ಶಿಕ್ಷಣದ ಜವಬ್ದಾರಿ ಹೊತ್ತ ಟಿ.ಜಿ.ಆರ್. ಭಟ್
ವಿಶ್ವನಾಥ್ ಅವರ ಏಕೈಕ ಪುತ್ರಿ ಜೀವಿತಾ ಪೂಜಾರಿಯು ಪ್ರತಿಭಾನ್ವಿತೆಯಾಗಿದ್ದು ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಎಂಟನೇ ತರಗತಿ ಮುಗಿಸಿದ್ದಾಳೆ.

Mangaluru: BJP shakthi kendra helps Vishwanth family who were in great distress

ಮೃತಪಟ್ಟ ವಿಶ್ವನಾಥ್ ಅವರು ಪಕ್ಷಕ್ಕಾಗಿ ಹಗಲಿರುಳೆನ್ನದೆ ಅವಿರತವಾಗಿ ದುಡಿದ ಕಾರ್ಯಕರ್ತ. ಅಂತಹ ಕಾರ್ಯಕರ್ತನ ಮಗಳ ಮುಂದಿನ ಹೈಸ್ಕೂಲ್ ಹಾಗೂ ಪದವಿ ಶಿಕ್ಷಣವನ್ನು ತನ್ನ ಶಾಲೆಯಲ್ಲೇ ಉಚಿತವಾಗಿ ನೀಡಿ ಜೊತೆಗೆ ಸಮವಸ್ತ್ರ ಮತ್ತು ವಾಹನ ಸೌಲಭ್ಯವನ್ನೂ ನೀಡುವುದಾಗಿ ಕೈರಂಗಳದ ಶಾರದಾ ವಿದ್ಯಾಗಣಪತಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಹಿರಿಯರಾದ ಟಿ.ಜಿ.ರಾಜಾರಾಂ ಭಟ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+