ಪ್ರಿಯಾ ವಾರಿಯರ್ ಕಣ್ಣೋಟಕ್ಕೆ ಜಾರಿ ಬಿದ್ದ ಮಂಗಳೂರು ಕಾರ್ಪೊರೇಟರ್
Recommended Video

ಮಂಗಳೂರು, ಫೆಬ್ರವರಿ 17: ಕೇರಳದ ಚೆಲುವೆ ಪ್ರಿಯಾ ಪ್ರಕಾಶ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದ್ದಾರೆ. ತನ್ನ ಕಣ್ಣೋಟದಿಂದ ಭಾರತದ ಉದ್ದಗಲಕ್ಕೂ ಸಂಚಲನ ಸೃಷ್ಠಿಸಿದ್ದಾರೆ ಪ್ರಿಯಾ.
ಈ ಮಲೆಯಾಳಿ ಬೆಡಗಿಯ ಕೆಣಕುವ ಕಣ್ಣೋಟಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಕೂಡ ಫಿದಾ ಆಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಕಾರ್ಪೊರೇಟರ್ ಒಬ್ಬರು ಪ್ರಿಯಾ ಪ್ರಕಾಶ್ ವಾರಿಯರ್ ಕುಡಿನೋಟಕ್ಕೆ ಮರುಳಾಗಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಡಿಬಿ ನೆರವಿನೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಸಾಧಕ ಬಾಧಕಗಳ ಕುರಿತ ಸಭೆ ಗುರುವಾರ ಮಂಗಳೂರು ಪಾಲಿಕೆ ಸಭಾಂಗಣದಲ್ಲಿ ನಡೆದಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಬಿಡಿ ಯೋಜನೆಯ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದಿನ್ ಬಾವಾ ಶಾಮೀಲಾಗಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ ಈ ಹಿನ್ನಲೆಯಲ್ಲಿ ಸಭೆಯಲ್ಲಿ ಕೋಲಾಹಲವೇ ನಡೆಯಿತು.

ಆದರೆ ಇಷ್ಟೆಲ್ಲಾ ವಾಗ್ವಾದ , ಆರೋಪ ಪ್ರತ್ಯಾರೋಪ ನಡೆಯುತ್ತಿದ್ದರೂ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೋರೇಟರ್ ಕಾಂಗ್ರೇಸಿನ ನವೀನ್ ಡಿಸೋಜಾ ಮಾತ್ರ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಕಣ್ಣೋಟದ ವಿಡಿಯೋ ನೋಡುವುದರಲ್ಲೇ ತಲ್ಲಿನರಾಗಿದ್ದರು.
ಪಾಲಿಕೆಯ ಸಭೆಯಲ್ಲಿ ಅಷ್ಟೆಲ್ಲಾ ರಾದ್ದಾಂತ ನಡೆದರೂ ನವೀನ್ ಡಿಸೋಜಾ ಮಾತ್ರ ಪ್ರಿಯಾ ಪ್ರಕಾಶ್ ಕಣ್ಣಿನ ಆಟಕ್ಕೆ ಮರಳಾಗಿ ಕ್ರಶ್ ಗೆ ಒಳಗಾಗಿದ್ದರು. ಪ್ರಿಯಾ ಕಣ್ಣೋಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಇನ್ನು ನವೀನ್ ಯಾವ ಲೆಕ್ಕ ಅಲ್ವಾ!












Click it and Unblock the Notifications