ನೇತ್ರಾವತಿ ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ನೀರು ಪಾಲು
ಮಂಗಳೂರು, ಏಪ್ರಿಲ್ 26: ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಯಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಮೃತಪಟ್ಟವರನ್ನು ಬೆಂಗಳೂರು ಮೂಲದ ಮುನಿಯಗೌಡ(28) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕೇಂದ್ರಗಳ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮುನಿಯಗೌಡ ಅವರ ಕುಟುಂಬ ಉಪ್ಪಿನಂಗಡಿಯ ನೇತ್ರಾವತಿ ನದಿಯ ತೀರಕ್ಕೆ ಗುರುವಾರ(ಏ.೨೫)ಸಂಜೆ ತೆರಳಿತ್ತು.ನೀರಾಟ ಆಡುವ ಸಂದರ್ಭದಲ್ಲಿ ನಾಲ್ವರೊಂದಿಗೆ ಮುನಿಯಗೌಡ ನದಿಗೆ ಸ್ನಾನಕ್ಕಿಳಿದಿದ್ದರು.

ಈ ಸಂದರ್ಭದಲ್ಲಿ ಈಜು ಬಾರದ ಮುನಿಯಗೌಡ(28)ನೀರು ಪಾಲಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ಈಜುಗಾರರಿಂದ ಶವ ಹೊರಕ್ಕೆ ತೆಗೆಯಲಾಗಿದ್ದು, ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications