ಉಡುಪಿ: ತಲೆನೋವು ತಾಳಲಾರದೆ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
ಉಡುಪಿ, ಜುಲೈ 3: ಜೀವನದಲ್ಲಿ ಜಿಗುಪ್ಸೆಗೊಂಡು ಉಡುಪಿಯ ಮಣಿಪುರ ಸೇತುವೆಯಿಂದ ಹೊಳೆಗೆ ಹಾರಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಉಡುಪಿ ವಾದಿರಾಜ ರಸ್ತೆಯ ನಿವಾಸಿ ಪ್ರಕಾಶ್ ಪೈ(54) ಹೊಳೆಗೆ ಹಾರಿದವರು ಎಂದು ಗುರುತಿಸಲಾಗಿದೆ.

ತೀವ್ರ ತಲೆ ನೋವಿನಿಂದ ಮನನೊಂದ ಇವರು ಭಾನುವಾರ ಸಂಜೆ ತನ್ನ ಕಾರಿನಲ್ಲಿ ಮಣಿಪುರಕ್ಕೆ ಹೊರಟು, ಅಲ್ಲಿ ಸೇತುವೆ ಬದಿ ಕಾರನ್ನು ನಿಲ್ಲಿಸಿ, ಅದರಲ್ಲಿ ತನ್ನ ಮೊಬೈಲ್, ಪರ್ಸ್, ವಾಚ್ ಹಾಗೂ ಮರಣಪತ್ರವನ್ನು ಇರಿಸಿ ಸೇತುವೆಯಿಂದ ಹೊಳೆಗೆ ಹಾರಿದರು.
ಇವರ ಪತ್ನಿ ಪೃಥ್ವಿ ಪೈ ಬ್ಯೂಟಿಪಾರ್ಲರ್ ನಡೆಸುತ್ತಿದ್ದು, ಓರ್ವ ಪುತ್ರಿ ಮಣಿಪಾಲ ದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸ್ಥಳಕ್ಕೆ ಆಗಮಿಸದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಮುಳುಗು ತಜ್ಞರು ರಾತ್ರಿ 11.30ರ ವರೆಗೆ ನಾಪತ್ತೆಯಾದ ಪ್ರಕಾಶ್ ಪೈ ಅವರ ಹುಡುಕಾಟ ನಡೆಸಿದ್ದಾರೆ ಆದರೆ ಈವರೆಗೆ ಅವರ ಮೃತದೇಹ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಮರಣ ಪತ್ರದಲ್ಲಿ 'ತಲೆನೋವಿನ ವೇದನೆ ತಾಳಲಾರದೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ' ಎಂದು ಬರೆಯಲಾಗಿದೆ.












Click it and Unblock the Notifications