ಕದ್ರಿ ಉದ್ಯಾನವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಮಂಗಳೂರು, ನವೆಂಬರ್ 26: ಉದ್ಯಾನವನದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಕದ್ರಿ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಸಂಜೆ ಪಾರ್ಕ್ ಗೆ ಬಂದಿದ್ದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ.
ಸಂಜೆ ವಿಹಾರಕ್ಕೆಂದು ಬಂದಿದ್ದ ಜೋಡಿ ಕೆಲ ಕಾಲ ಸುತ್ತಾಡಿ, ಆ ನಂತರ ಪಾರ್ಕ್ ಒಳಗೆ ವಾಕಿಂಗ್ ಪಾಥ್ ಹತ್ತಿರ ಇರುವ ಬೆಂಚ್ ಮೇಲೆ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಆಸ್ವಸ್ಥಗೊಂಡಿದ್ದ ಪ್ರೇಮಿಗಳನ್ನು ಕಂಡ ಸ್ಥಳೀಯರು ಕದ್ರಿ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರೇಮಿಗಳ ಸ್ಥತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಇಬ್ಬರ ಪೋಷಕರನ್ನೂ ಆಸ್ಪತ್ರೆಗೆ ಕರೆಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದವರು ಕಾಸರಗೋಡು ಮೂಲದ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಹರ್ಷ ಕುಮಾರ್ ಹಾಗೂ ಅದೇ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿರುವ 18 ವರ್ಷದ ಯುವತಿ ಎಂದು ಗುರುತಿಸಲಾಗಿದೆ.
ಪ್ರೇಮಿಗಳಿಬ್ಬರು ಆತ್ಯಹತ್ಯೆಗೆ ಯತ್ನಿಸಿದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕದ್ರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications