ಲವ್ ಸೆಕ್ಸ್ ದೋಖಾ; ಆರೋಪಿಯ ರಕ್ಷಣೆಗೆ ನಿಂತ್ರಾ ರಮಾನಾಥ ರೈ?
ಮಂಗಳೂರು, ಏಪ್ರಿಲ್ 30: ಪ್ರೀತಿಸಿದ ಯುವಕನ ಜತೆ ಮದುವೆ ಕನಸು ಕಂಡು, ಅದೇ ಕನಸು ಕಣ್ಣೆದುರು ನುಚ್ಚು ನೂರಾಗಿ ನೋವಿನಿಂದ ಬಳಲುತ್ತಿರುವ ಬಂಟ್ವಾಳದ ಯುವತಿಯ ಕಥೆಯಿದು. ಮೂಲತಃ ಬಂಟ್ವಾಳದವಳಾಗಿರುವ ಯುವತಿ ಮಂಗಳೂರಿನ ಎನ್ಎಂಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಳು.
ಕಾರ್ಯಕ್ರಮ ಒಂದರಲ್ಲಿ ನೋಡಿದ್ದ ಈಕೆಯನ್ನು ನೋಡಿ, ನಾಟಕ ಕಂಪನಿಯಲ್ಲಿ ಅವಕಾಶ ಕೊಡುತ್ತೇನೆಂದು ಹೇಳಿ, ಕೊನೆಗೆ ತನ್ನದೇ ನಾಟಕ ತಂಡದಲ್ಲಿ ಪಾತ್ರ ನೀಡಿದ್ದ ಕಾಂಗ್ರೆಸ್ ಮುಖಂಡ ಪುರುಷೋತ್ತಮ ಕೊಯಿಲ.
ಬಳಿಕ ಪ್ರೇಮದ ನಾಟಕವಾಡಿದ್ದ ಆತ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ. ಅಶ್ಲೀಲ ವಿಡಿಯೋ ಮಾಡಿ ಜಾಲತಾಣಕ್ಕೆ ಹರಿಬಿಟ್ಟು ಯುವತಿಯ ಮಾನ ಹರಾಜು ಹಾಕಿದ್ದ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಬಹುದು ಎಂದುಕೊಂಡ ಆತ ಕೊನೆಗೆ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡ. ಕಳೆದ ಮಾರ್ಚ್ 4ರಂದು ಮದುವೆಗೆ ದಿನಾಂಕ ಫಿಕ್ಸ್ ಮಾಡಿ ಆತ ಮದುವೆ ಕಾಗದವನ್ನೂ ಮುದ್ರಿಸಿದ್ದ.

ಆದರೆ, ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಆರೋಪಿ ಪುರುಷೋತ್ತಮ, ಮದುವೆಗೆ ನಿರಾಕರಿಸಿ ವಂಚಿಸಿದ್ದಲ್ಲದೇ, ತಲೆ ಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಡ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಾಮತೃಷೆ ತೀರಿಸಿಕೊಂಡು ವಂಚಿಸಿದ ಈ ಕಾಂಗ್ರೆಸ್ ಮುಖಂಡನ ವಿರುದ್ಧ ಯುವತಿಯು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾಳೆ. ಇನ್ನು ಕಾಂಗ್ರೆಸ್ ಮುಖಂಡನ ರಕ್ಷಣೆಗೆ ಸಚಿವ ರಮಾನಾಥ ರೈಯವರ ಆಪ್ತ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಕೊಯ್ಲ ನಿಂತಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿ ತನ್ನ ದೂರಿನಲ್ಲಿ ಜಗದೀಶ, ಪುರುಷೋತ್ತಮ ಮತ್ತು ಪ್ರವೀಣ ಎಂಬ ಮೂವರ ವಿರುದ್ಧ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾಳೆ. ಮೊದಲು ಮದುವೆಗೆ ನಕಾರ ವ್ಯಕ್ತಪಡಿಸುತ್ತಿದ್ದ ಆರೋಪಿ, ಇದೀಗ ರಮಾನಾಥ ರೈ ಚುನಾವಣೆ ಗೆದ್ದರೆ ಮಾತ್ರ ಮದುವೆಯಾಗ್ತೀನಿ ಎಂದಿದ್ದಾನಂತೆ.

"ಪ್ರಾರಂಭದಲ್ಲೇ ತನಗಾದ ಮೋಸದ ಕುರಿತು ಪೊಲೀಸರಿಗೆ ದೂರು ನೀಡಿದ್ದೆ. ಈ ವೇಳೆ ರೈ ಆಪ್ತರಿಂದ ಪೊಲೀಸರಿಗೂ ಸಾಕಷ್ಟು ಒತ್ತಡ ಬಂದಿತ್ತು. ಇದರಿಂದಾಗಿ ಪ್ರಕರಣ ದಾಖಲಿಸಲು ಪೊಲೀಸರು ಹಿಂಜರಿದಿದ್ದರು," ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾಳೆ.
ತನ್ನ ನೋವಿನ ಕತೆ ಸಚಿವ ರಮಾನಾಥ ರೈಯವರಿಗೆ ಗೊತ್ತಿದ್ದರೂ ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರೆಂಬ ನೆಲೆಯಲ್ಲಿ ಸಚಿವ ರಮಾನಾಥ್ ರೈ ರಕ್ಷಣೆ ಮಾಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಾಗಿ 3 ದಿನವಾದ್ರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications