ಮಂಗಳೂರು : ರನ್ ವೇ ವಿಸ್ತರಣೆಗೆ ಭೂಮಿಯೇ ಅಡ್ಡಿ
ಮಂಗಳೂರು, ಸೆಪ್ಟೆಂಬರ್ 04 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆ ಪ್ರಸ್ತಾಪ ತಿರಸ್ಕೃತವಾಗಿದೆ. ಸಕಾಲದಲ್ಲಿ ಜಮೀನು ಒದಗಿಸಲು ಸರ್ಕಾರ ವಿಫಲವಾಗಿದೆ.
ರನ್ ವೇ ವಿಸ್ತರಣೆಗೆ ಬೇಕಾಗಿರುವ ಜಾಗವನ್ನು ಒದಗಿಸಿ ಕೊಡುವುದು ಸರ್ಕಾರದ ಕೆಲಸ. ಆದರೆ, ಅದನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾದ ಕಾರಣ ರನ್ ವೇ ವಿಸ್ತರಣೆ ಭಾಗ್ಯವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದುಕೊಂಡಿದೆ.

ತಜ್ಞರು ಪ್ರಕಾರ ಮಂಗಳೂರು ವಿಮಾನ ನಿಲ್ದಾಣದಕ್ಕೆ 3050ಮೀಟರ್ ರನ್ ವೇ ಸಾಕಾಗುತ್ತದೆ. ಆದರೆ, ಮಹತ್ವಾಕಾಂಕ್ಷೆ ಇಟ್ಟುಕೊಂಡು 3,450 ಮೀಟರ್ ರನ್ ವೇ ಪ್ರಸ್ತಾಪವಿಡಲಾಗಿತ್ತು. ಇದರಿಂದಾಗಿ ಭೂಸ್ವಾಧೀನಕ್ಕೂ ತೊಂದರೆ ಆಗಿದೆ. ಆದರೆ ಇದು ಅಂತಿಮವಲ್ಲ ಇನ್ನೊಮ್ಮೆ ಪರಿಷ್ಕೃತ ಪ್ರಸ್ತಾಪ ಕಳುಹಿಸಲು ಅವಕಾಶವಿದೆ.
ಮಂಗಳೂರು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಹೇಳುವಂತೆ, ಭೂ ಸ್ವಾಧೀನ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಪ್ರಸ್ತಾಪವನ್ನು ಸದ್ಯಕ್ಕೆ ಪರಿಗಣಿಸದಿರಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.
ಇನ್ನಷ್ಟು ವಿಮಾನಗಳು ಇಳಿಯಲು ಅವಕಾಶ ನೀಡುವುದಕ್ಕೆ ಬೈ ಲ್ಯಾಟರಲ್ ಲ್ಯಾಂಡಿಂಗ್ ಎನ್ನುತ್ತಾರೆ. ಆದರೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ಬೈ ಲ್ಯಾಟರಲ್ ಲ್ಯಾಂಡಿಂಗ್ ರೈಟ್ ನೀಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಒಪ್ಪಿಗೆ ನೀಡುತ್ತಿಲ್ಲ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಒಪ್ಪಿಗೆ ಸೂಚಿಸಿದರು ವಿಮಾನಯಾನ ಸಚಿವಾಲಯ ಮಾತ್ರ ಇದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications