ಜೆಸಿಂತಾ ಮಂಗಳೂರಿನ ನೂತನ ಮೇಯರ್

ಮಂಗಳೂರು, ಮಾ.12: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಜೆಸಿಂತಾ ವಿಜಯ್ ಅಲ್ಫ್ರೆಡ್ ಹಾಗೂ ಉಪ ಮೇಯರ್ ಆಗಿ ಅದೇ ಪಕ್ಷದ ಪುರುಷೋತ್ತಮ ಚಿತ್ರಾಪುರ ಆಯ್ಕೆಯಾಗಿದ್ದಾರೆ.

ನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾ(ಮಾ.12) ನಡೆದ ಚುನಾವಣೆ ಫಲಿತಾಂಶ ಇದೀಗ ಹೊರಬಂದಿದೆ. ಜೆಸಿಂತಾ ಕಾಂಗ್ರೆಸ್ ಪರವಾಗಿ ಹಾಗೂ ಬಿಜೆಪಿಯಿಂದ ರೂಪಾ ಡಿ.ಬಂಗೇರ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನ ನಡೆದು ಜೆಸಿಂತಾ ಅವರಿಗೆ 38 ಮತಗಳು ಹಾಗೂ ರೂಪಾ ಬಂಗೇರ ಅವರಿಗೆ 20 ಮತಗಳು ಬಿದ್ದವು.

ಅದೇ ರೀತಿ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುರುಷೋತ್ತಮ ಚಿತ್ರಾಪುರ ನಾಮಪತ್ರ ಸಲ್ಲಿಸಿದ್ದರೆ ಬಿಜೆಪಿಯಿಂದ ಕೆ.ರಾಜೇಶ್ ನಾಮಪತ್ರ ಸಲ್ಲಿಸಿದ್ದರು. ಮತದಾನ ನಡೆದಾಗ ಪುರುಷೋತ್ತಮ ಚಿತ್ರಾಪುರ ಅವರಿಗೆ 38 ಮತಗಳು ಹಾಗೂ ರಾಜೇಶ್ ಅವರಿಗೆ 20 ಮತಗಳು ಲಭಿಸಿತು.

ಶಾಸಕರಾದ ಜೆ.ಆರ್.ಲೋಬೋ, ಬಿ.ಎ.ಮೊಯ್ದೀನ್ ಬಾವಾ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಚಲಾಯಿಸಿದರು.

Jacintha Alfred new mayor of Mangaluru

ಮತದಾನ ಪ್ರಕ್ರಿಯೆ ಗೊಂದಲ:ಲೋಬೋ ಅವರು ಮತದಾನ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಸಭಾಂಗಣ ಪ್ರವೇಶಿಸಿದ ಕಾರಣ ಮತ ಚಲಾಯಿಸಲು ಅವಕಾಶ ಕೊಡಬಾರದೆಂದು ಬಿಜೆಪಿ ಆಕ್ಷೇಪ ಸಲ್ಲಿಸಿತ್ತಾದರೂ ಚುನಾವಣಾಧಿಕಾರಿಗಳು ಆಕ್ಷೇಪವನ್ನು ಮಾನ್ಯ ಮಾಡಲಿಲ್ಲ.ಬಿಜೆಪಿ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಚುನಾವಣೆಯಲ್ಲಿ ಭಾಗವಹಿಸಿದ್ದರು.

60 ಸದಸ್ಯರಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35,ಬಿಜೆಪಿ 20, ಜೆಡಿಎಸ್2, ಎಸ್ ಡಿಪಿ ಐ, ಸಿಪಿಎಂ ಹಾಗೂ ಪಕ್ಷೇತರರು ತಲಾ 1 ಸ್ಥಾನಗಳನ್ನು ಹೊಂದಿವೆ.

ಮೇಯರ್ ಆಗಿ ಆಯ್ಕೆಯಾಗಿರುವ ಜೆಸಿಂತಾ(ಫಳ್ನೀರ್ ವಾರ್ಡ್) ನಾಲ್ಕನೇ ಬಾರಿಗೆ ಪಾಲಿಕೆ ಸದಸ್ಯರಾಗಿದ್ದು ಸದನದ ಹಿರಿಯ ಸದಸ್ಯೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೂತನ ಮೇಯರ್, ಉಪ ಮೇಯರ್ ಅಧಿಕಾರ 2016 ಮಾರ್ಚ್ 12ರವರೆಗೆ ಇರುತ್ತದೆ.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ಇತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಶಾಸಕ ಜೆ.ಆರ್.ಲೋಬೋ, ಬಿ.ಎ.ಮೊಯ್ದೀನ್ ಬಾವಾ ಅವರ ಜೊತೆ ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಬಹುತೇಕ ನಿನ್ನೆಯೇ ಜೆಸಿಂತಾ ಅವರ ಹೆಸರನ್ನು ಮೇಯರ್ ಸ್ಥಾನಕ್ಕೆ ಅಂತಿಮಗೊಳಿಸಿದ್ದರಾದರೂ ಇಂದು ಮತ್ತೆ ಸಭೆ ಸೇರಿ ಜೆಸಿಂತಾ ಅವರ ಹೆಸರನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲು ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+