ಜಲಪ್ರಳಯ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಇಸ್ರೋ ವಿಜ್ಞಾನಿಗಳು
ಮಂಗಳೂರು, ಆಗಸ್ಟ್.22: ಗುಡ್ಡ ಕುಸಿತ, ಜಲಪ್ರಳಯ ಸಂಭವಿಸಿದ ಸ್ಥಳಗಳಿಗೆ ಇಂದು ಬುಧವಾರ ಇಸ್ರೋ ವಿಜ್ಞಾನಿಗಳು ಭೇಟಿ ನೀಡುತ್ತಿದ್ದಾರೆ. ಮದೆನಾಡು, ಜೋಡುಪಾಲ, ಸಂಪಾಜೆ, ಕಲ್ಮಕಾರಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ.
4 ಮಂದಿ ವಿಜ್ಞಾನಿಗಳ ತಂಡ ಸಮಸ್ಯೆಯಾಗಿರುವ ಸ್ಥಳಗಳಿಗೆ ಭೇಟಿ ನೀಡಲಿದೆ. ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವ ವಿಜ್ಞಾನಿಗಳು, ಬಳಿಕ ದ.ಕ.ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡುವರು.

ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ನಂತರ ಸ್ಥಳಕ್ಕೆ ವಿಜ್ಞಾನಿಗಳು ಭೇಟಿ ನೀಡಲಿದ್ದಾರೆ. ಆ ನಂತರ ಭಾರೀ ಸಮಸ್ಯೆಗೀಡಾಗಿರುವ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. ಜಲಸ್ಫೋಟ, ಗುಡ್ಡಕುಸಿತದ ಕಾರಣ ತಿಳಿಯುವ ಸಲುವಾಗಿ ವಿಜ್ಞಾನಿಗಳು ಭೇಟಿ ನೀಡುತ್ತಿರುವುದು ತಿಳಿದು ಬಂದಿದೆ.












Click it and Unblock the Notifications