ಮೇ1ರಿಂದ ಮಂಗ್ಳೂರಿನಿಂದ ಬೆಂಗ್ಳೂರು, ಮುಂಬೈಗೆ ಇಂಡಿಗೊ ವಿಮಾನಯಾನ
ಮಂಗಳೂರು, ಏಪ್ರಿಲ್ 13 : ಇಂಡಿಗೊ ವಿಮಾನಯಾನ ಸಂಸ್ಥೆ ಮಂಗಳೂರಿನಿಂದ ಬೆಂಗಳೂರು ಹಾಗೂ ಮುಂಬೈಗೆ ಮೇ 1ರಿಂದ ನಿತ್ಯ ವಿಮಾನ ಸೇವೆ ಆರಂಭಿಸಲಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ತಲಾ ಎರಡು ವಿಮಾನ ಸಂಚರಿಸಲಿವೆ ಎಂದು ಇಂಡಿಗೊ ಅಧ್ಯಕ್ಷ ಆದಿತ್ಯ ಘೋಷ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.[ಮಂಗಳೂರು ವಿಮಾನ ನಿಲ್ದಾಣ ಸ್ಮಾರ್ಟ್ ಆಗೋದು ಯಾವಾಗ?]
ಮಂಗಳೂರಿನಿಂದ ಮುಂಬೈಗೆ ಮತ್ತು ಮುಂಬೈನಿಂದ ಮಂಗಳೂರಿಗೆ ತಲಾ ಒಂದು ವಿಮಾನ ಸಂಚರಿಸಲಿದೆ. ಆರಂಭದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 1,499 ರು. ಹಾಗೂ ಮಂಗಳೂರಿನಿಂದ ಮುಂಬೈಗೆ 1,799 ರು ನಿಗದಿಪಡಿಸಲಾಗಿದೆ ಎಂದರು.
Comments
English summary
No-frills carrier IndiGo announced the launch of its services to Mangalore, which will be connected to Bengaluru and Mumbai with daily non-stop flights from May 1, 2017.
Story first published: Thursday, April 13, 2017, 8:22 [IST]