ನಾನು ಈಶ್ವರಪ್ಪ ಅವರನ್ನು ಬೆಂಬಲಿಸುತ್ತೇನೆ: ಐವನ್ ಡಿಸೋಜಾ

ಬಿಜೆಪಿ ರಾಷ್ಟ್ರೀಯ ನಾಯಕರಲ್ಲೂ ಇರಿಸುಮುರಿಸುಂಟುಮಾಡಿರುವ ಬಿಎಸ್ ವೈ ಮತ್ತು ಈಶ್ವರಪ್ಪ ನಡುವಿನ ಹಗ್ಗಜಗ್ಗಾಟದ ಕುರಿತು ಪ್ರತಿಕ್ರಿಯಿಸಿದ ಐವನ್ ಡಿ ಸೋಜಾ , ಈಶ್ವರಪ್ಪ ಅವರ ನಡೆಯನ್ನು ಬೆಂಬಲಿಸುವುದಾಗಿ ಹೇಳಿದರು.

ಮಂಗಳೂರು, ಏಪ್ರಿಲ್ 28: 'ಬಿಜೆಪಿಯಲ್ಲಿ ಈಗ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಬಿಜೆಪಿ ನಾಯಕತ್ವ ಯಡಿಯೂರಪ್ಪ ಕೈಯಿಂದ ಬದಲಿಸಬೇಕು. ಇದಕ್ಕೆ ಈಶ್ವರಪ್ಪ ಮಾಡುತ್ತಿರುವ ಹೋರಾಟ ಸರಿಯಾಗಿದೆ' ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ ಹೇಳಿದರು.

ಬಿಜೆಪಿ ರಾಷ್ಟ್ರೀಯ ನಾಯಕರಲ್ಲೂ ಇರಿಸುಮುರಿಸುಂಟುಮಾಡಿರುವ ಬಿಎಸ್ ವೈ ಮತ್ತು ಈಶ್ವರಪ್ಪ ನಡುವಿನ ಹಗ್ಗಜಗ್ಗಾಟದ ಕುರಿತು ಪ್ರತಿಕ್ರಿಯಿಸಿದ ಅವರು, ತಾನು ಈಶ್ವರಪ್ಪ ಅವರನ್ನು ಬೆಂಬಲಿಸುತ್ತೇನೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರೂ ಉಪ ಚುನಾವಣೆಯಲ್ಲಿ ಪಕ್ಷ ಸೋತಿರುವುದು ಅವರನ್ನು ಅವರ ಸಾಮರ್ಥ್ಯವನ್ನು ತೋರಿಸಿದೆ ಎಂದು ಅವರು ವ್ಯಂಗ್ಯವಾಗಿ ಹೇಳಿದರು.[ಬಿಜೆಪಿ ಬಿಕ್ಕಟ್ಟಿಗೆ ಸಂತೋಷ್ ಜೀ ಮೇಲೆ ಗೂಬೆ ಕೂರಿಸಿದ ಯಡಿಯೂರಪ್ಪ]

I will support K.S.Eshwarappa: congress leader Ivan D'souza

ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಯಡಿಯೂರಪ್ಪ, 'ಇದು ಸೆಮಿಫೈನಲ್, ಬಿಜೆಪಿಯನ್ನು ಗೆಲ್ಲಿಸಿ, ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಗೆಲ್ಲಲೇಬೇಕು ಎಂದು ಗ್ರಾಮ ಗ್ರಾಮಗಳಲ್ಲಿ ಹೇಳಿದ್ದರು. ಆದರೆ ಈಗ ಬಿಜೆಪಿ ಸೋತಿದೆ. ಯಡಿಯೂರಪ್ಪ ನಾಯಕತ್ವದ ಬದಲಾವಣೆ ಆಗಲೇ ಬೇಕು.[ಬಿಜೆಪಿಯಲ್ಲಿ ಒಳಜಗಳ ಎಲ್ಲಿದೆ, ಬಿಎಸ್ ವೈ ಮುಖ್ಯಮಂತ್ರಿ ಕ್ಯಾಂಡಿಡೇಟು: ಈಶ್ವರಪ್ಪ]

ರಾಜ್ಯದಲ್ಲಿ ಶೇ.18 ರಷ್ಟು ಅಲ್ಪಸಂಖ್ಯಾತರಿದ್ದರೂ ಅವರನ್ನು ಯಡಿಯೂರಪ್ಪ ಕಡೆಗಣಿಸಿ ಹಿಂದೂ ವೋಟ್ ಬ್ಯಾಂಕ್ ಗೆ ಬಲಪಡಿಸಲು ಯತ್ನಿಸಿದರು. 2008 ರಿಂದ ಇಲ್ಲಿಯವರೆಗೆ ಅವರು ಮಾಡುತ್ತಿರುವುದೂ ಇದನ್ನೇ' ಯಡಿಯೂರಪ್ಪ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+