ಭರತನಾಟ್ಯ ಕಲಾವಿದ ಕೆ.ಮುರಳೀಧರ ರಾವ್ ಇನ್ನಿಲ್ಲ
ಮಂಗಳೂರು, ಮೇ 01 : ಪ್ರಖ್ಯಾತ ಭರತನಾಟ್ಯ ಕಲಾವಿದ ಗುರು ಕೆ.ಮುರಳೀಧರ ರಾವ್ ಅವರು ಸೋಮವಾರ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. 93 ವರ್ಷದ ಮುರಳೀಧರ ರಾವ್ ವಯೋಸಹಜದಿಂದ ಅಸ್ವಸ್ಥರಾಗಿದ್ದರು.
2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರದ ಪ್ರತಿಷ್ಠಿತ 'ಶಾಂತಲಾ' ಪ್ರಶಸ್ತಿ ಪುರಸ್ಕೃತ ಮುರಳೀಧರ ರಾವ್, ಪಂದನಲ್ಲೂರು ಶೈಲಿಯ ಪ್ರಖ್ಯಾತ ಕಲಾವಿದರು. ಕಾಸರಗೋಡು ಮುರಳೀಧರ ರಾಯರು ಸಂಗೀತ, ಸಾಹಿತ್ಯ, ಚಿತ್ರಣ ಮತ್ತು ನರ್ತನ, ಅಧ್ಯಯನ ಹಾಗೂ ಭರತನಾಟ್ಯ ಅಲ್ಲದೇ ಕಥಕ್ಕಳಿಯನ್ನೂ ಬಲ್ಲವರಾಗಿದ್ದರು.

ಇವರ ವಿದ್ವತ್ತು ಮತ್ತು ಬೋಧನಾನುಭವ ಹಾಗೂ ಜೀವನದರ್ಶನ ನೃತ್ಯಲೋಕವನ್ನೇ ಮೈದಳೆದಿದೆ. 'ನೃತ್ಯಲೋಕ' ಎಂಬ ಕೃತಿಯನ್ನು ಇವರು ಬರೆದಿದ್ದಾರೆ.
ಇವರ ಪ್ರಮುಖ ಶಿಷ್ಯರಲ್ಲಿ ವಸುಂಧರಾ ದೊರೆಸ್ವಾಮಿ, ಕೃಪಾ ಫಡ್ಕೆ, ಶಾರದಾ ಮಣಿ ಶೇಖರ್, ಸೀತಾ ಕೋಟೆ, ಶ್ರೀ ವಿದ್ಯಾರಾಮನ್ ಈಗಾಗಲೇ ನಾಡಿನೆಲ್ಲೆಡೆ ಹೆಸರು ಗಳಿಸಿದ್ದಾರೆ.












Click it and Unblock the Notifications