ಫ್ಲಾಪ್ ಆದ ಮಂಗಳೂರು ಕಾಂಗ್ರೆಸ್ ಸಮಾವೇಶ: ನಾಯಕರಿಗೆ ಇರುಸು ಮುರುಸು

Recommended Video

      Lok Sabha Elections 2019 : ಕಾಂಗ್ರೆಸ್ ಲೆಕ್ಕಾಚಾರ ಆಯ್ತು ಫುಲ್ ಉಲ್ಟಾ | Oneindia Kannada

      ಮಂಗಳೂರು, ಏಪ್ರಿಲ್ 15:ಮಂಗಳೂರಿನ‌ಲ್ಲಿ ಕಳೆದ ಶನಿವಾರ ನಗರದ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಕೇಸರಿ ಪಾಳಯದ ಜನಸಾಗರವೇ ಹರಿದು ಬಂದಿತ್ತು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಒಂದು ಅಂದಾಜಿನ ಪ್ರಕಾರ 1.50 ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಈ ಸಮಾವೇಶಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ ಅವರನ್ನು ಕರೆಸಲಾಗಿತ್ತು.

      ಇತ್ತೀಚೆಗಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ 'ಖಾಮೋಶ್ ' ಡೈಲಾಗ್ ಖ್ಯಾತಿಯ ಶತ್ರುಘ್ನ ಸಿನ್ಹಾ ಅವರನ್ನು ಕರೆಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಉದ್ದೇಶ ಕಾಂಗ್ರೆಸ್ ನದ್ದಾಗಿತ್ತು. ಆದರೆ ಆದದ್ದೇ ಬೇರೆ.

      Empty chairs at congress election rally photo viral

      ಕಾಂಗ್ರೆಸ್ ಪಕ್ಷ ತರಾತುರಿಯಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶ ಫ್ಲಾಪ್ ಶೋ ಆಗಿದೆ. ಈ ಕಾರ್ಯಕ್ರಮದ ಖಾಲಿ ಕುರ್ಚಿಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

      ಮಂಗಳೂರಿನ ಕದ್ರಿ ಮೈದಾನದಲ್ಲಿ ನಿನ್ನೆ ಸಂಜೆ 6.30 ಕಾರ್ಯಕ್ರಮಕ್ಕೆ ಆರಂಭವಾಗಬೇಕಿತ್ತು. ಶತ್ರುಘ್ನ ಸಿನ್ಹಾ ಕದ್ರಿ ಮೈದಾನದ ಸಭೆಯಲ್ಲಿ ಮಾತನಾಡಿ, ಬಳಿಕ ಮುಡಿಪು ಸಭೆಗೆ ತೆರಳಬೇಕಿತ್ತು. ಆದರೆ ಆದದ್ದೇನು? ಇಲ್ಲಿದೆ ವಿವರ...

      ಮುಡಿಪುವಿಗೆ ಹೋದ ಶತ್ರುಘ್ನ ಸಿನ್ಹಾ

      ಮುಡಿಪುವಿಗೆ ಹೋದ ಶತ್ರುಘ್ನ ಸಿನ್ಹಾ

      ಕದ್ರಿಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳ ಇದ್ದಿದ್ದನ್ನು ಮನಗಂಡು ಸಚಿವ ಯು.ಟಿ. ಖಾದರ್ ವಿಮಾನ ನಿಲ್ದಾಣದಿಂದ ನೇರವಾಗಿ ಮುಡಿಪುವಿಗೆ ಶತ್ರುಘ್ನ ಸಿನ್ಹಾ ಅವರನ್ನು ಕರೆದೊಯ್ದಿದ್ದರು.

      ಮುಡಿಪುವಿನಲ್ಲಿ ಉತ್ತಮ ಸ್ಪಂದನೆ

      ಮುಡಿಪುವಿನಲ್ಲಿ ಉತ್ತಮ ಸ್ಪಂದನೆ


      ಮುಡಿಪುವಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಭೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಅಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶತ್ರುಘ್ನ ಸಿನ್ಹಾ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿ ಚಪ್ಪಾಳೆ ಗಿಟ್ಟಿಸಿದರು.

      ಗಮನ ಸೆಳೆದ ಖಾಲಿ ಕುರ್ಚಿಗಳು

      ಗಮನ ಸೆಳೆದ ಖಾಲಿ ಕುರ್ಚಿಗಳು

      ಮುಡಿಪು ಕಾರ್ಯಕ್ರಮ ಮುಗಿಸಿ ಕದ್ರಿ ಮೈದಾನಕ್ಕೆ ಬಂದು ಚುನಾವಣಾ ಪ್ರಚಾರ ಸಭೆಯಲ್ಲಿ ಶತ್ರುಘ್ನ ಸಿನ್ಹಾ ಮಾತನಾಡುವವರಿದ್ದರು. ಆದರೆ ರಾತ್ರಿ 8:30 ಕಳೆದರೂ ಕದ್ರಿ ಮೈದಾನದಲ್ಲಿ ಜನ ಸೇರದೆ ಜಾಸ್ತಿ ಖಾಲಿ ಕುರ್ಚಿಗಳೇ ಗಮನ ಸೆಳೆಯುತ್ತಿದ್ದವು.

      ಕಾಂಗ್ರೆಸ್ ನಾಯಕರಿಗೆ ಇರುಸು ಮುರುಸು

      ಕಾಂಗ್ರೆಸ್ ನಾಯಕರಿಗೆ ಇರುಸು ಮುರುಸು

      ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರಕ್ಕೆ ಬರಬೇಕಿದ್ದ ಶತ್ರುಘ್ನ ಸಿನ್ಹಾ ಕದ್ರಿ ಮೈದಾನಕ್ಕೆ ಬರದೇ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಇರುಸುಮುರುಸು ಉಂಟುಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+