ಮರೆಯಾಗಿದ್ದ ಗೋಲಿ ಸೋಡಾ ಲಕ್ಷದೀಪೊತ್ಸವದಲ್ಲಿ ಪ್ರತ್ಯಕ್ಷ
ಸೋಡಾ ಹೆಸರು ಕೇಳಿದಾಗ ನೆನಪಾಗೋದು ಗೋಲಿ ಸೋಡಾ ಒಂದೇ. ಆ ಗೋಲಿ ಸೋಡಾವನ್ನು ತೆರೆಯುವುದೇ ಒಂದು ಮಜಾ. ಈಗಲೂ ಗೋಲಿ ಸೋಡಾ ತೆರೆಯುವುದು ಒಂದು ಟ್ರೆಂಡ್ ಆಗಿ ಉಳಿದುಕೊಂಡಿದೆ.ಆದರೆ ಈಗ ಅದೊಂದು ಕಲ್ಪನೆ ಮಾತ್ರ.
ಈಗಿನವರಿಗೆ ಈ ಗೊಲಿ ಸೋಡಾ ಯಾವ ಅಂಗಡಿಯಲ್ಲಿ ಕೇಳಿದರು ಸಿಗುವುದಿಲ್ಲ. ಇದು ಅಪರೂಪದ ಪಾನೀಯವಾಗಿ ಬಿಟ್ಟಿದೆ. ಈಗಿನ ಹೊಸ ರೆಡಿಮೆಡ್ ಸೋಡಾಗಳ ನಡುವಿನಲ್ಲಿ ಗೋಲಿ ಸೋಡ ಮರೆಯಾಗಿಬಿಟ್ಟಿತ್ತು. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]
ಹೆಚ್ಚಿನವರಿಗೆ ಅದರ ಬಗ್ಗೆ ಗೊತ್ತಿಲ್ಲದೇ ಇರುವುದರಿಂದ ಹಾಗೂ ಅದರ ಮಾರುಕಟ್ಟೆಯೂ ಮರೆಯಾಗಿರುವುದರಿಂದ ಗೋಲಿ ಸೋಡಾದ ಹೆಸರೇ ಗೊತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಆಗಿ ಬಿಟ್ಟಿದೆ. [ಲಕ್ಷದೀಪೋತ್ಸವ: ಧರ್ಮಸ್ಥಳಕ್ಕೆ ಭಕ್ತರಿಂದ ಪಾದಯಾತ್ರೆ]
ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ನೀವು ಇನ್ನೊಮ್ಮೆ ಗೋಲಿ ಸೋಡಾದ ಆ ರುಚಿಯನ್ನು ಆಸ್ವಾದಿಸಬಹುದು. ಪರಮೇಶ್ವರ್ ಮತ್ತು ವಿಮಲಾ ದಂಪತಿ ಜನರಿಗೆ ಪುನಃ ಗೋಲಿ ಸೋಡಾದ ನೆನಪನ್ನು ತರುತ್ತಿದ್ದಾರೆ. [ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವ]
ದೇವಸ್ಥಾನದ ಎದುರಿನ ದಾರಿಯಲ್ಲಿ ನೇರ ಮುಂದಕ್ಕೆ ಕೊನೆಯಲ್ಲಿ ಇವರ ಗೋಲಿ ಸೋಡಾದ ಒಂದು ಚಿಕ್ಕ ಮಳಿಗೆ ಇದೆ. ಪ್ರತಿ ವರ್ಷವೂ ಗೋಲಿ ಸೋಡಾದ ಮಳಿಗೆ ಹಾಕುವ ಇವರು ತುಂಬಾ ಸಮಯಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. [ತಮಿಳುನಾಡಿನ ನಷ್ಟ, ಕರ್ನಾಟಕದ ಲಾಭ, ಏನಿದು ಬಿಜಿನೆಸ್?]
ವ್ಯಾಪಾರದ ಬಗ್ಗೆ ವಿಮಲಾ ಅವರ ಮಕ್ಕಳಿಗೂ ಖುಷಿ ಇದೆ. ಸೋಡಾ ಬಾಟಲಿಗೆ ತುಂಬಿಸುವುದು ಹಾಗೂ ಅದನ್ನು ತೆರೆಯುವ ಬಗ್ಗೆ ಮಕ್ಕಳು ಕಲಿತುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಲಕ್ಷದೀಪದ ಸಂಧರ್ಭದಲ್ಲಿ ಹೆತ್ತವರಿಗೆ ಸಹಾಯ ಮಾಡುತ್ತಿದ್ದಾರೆ.

ಗೋಲಿ ಸೋಡಾ: ಖರ್ಚು ಕಡಿಮೆ ಲಾಭವೂ ಹೆಚ್ಚು
ವಿಮಲಾ ಹಾಗೂ ಪರಮೇಶ್ವರ್ ಅವರ ಸ್ವಂತ ಉದ್ಯಮವಾದ ಇದನ್ನು ಲಕ್ಷದೀಪೋತ್ಸವದ ಸಂಧರ್ಭದಲ್ಲಿ ಮಾತ್ರ ವ್ಯಾಪಾರ ಮಾಡುತ್ತಾರೆ. ಈ ಸೋಡಾ ಬಾಟಲಿಗೆ ಸೋಡಾ ಹಾಕುವ ಯಂತ್ರವು ಇವರಲ್ಲಿಯೇ ಇರುವುದರಿಂದ ಇವರಿಗೆ ಖರ್ಚು ಕಡಿಮೆ ಲಾಭವೂ ಹೆಚ್ಚು.

ಸೋಡಾವನ್ನು ತುಂಬಿಸುವುದು ಅಪಾಯದ ಕೆಲಸ
ಈ ಗೋಲಿ ಸೋಡಾದಲ್ಲಿ ಅಪಾಯವೂ ಇರುವುದರಿಂದ ಇದರ ಬೇಡಿಕೆ ಕಡಿಮೆಯಾಗಿತ್ತು ಆದರೆ ಪರಮೇಶ್ವರ್ ಪ್ರಕಾರ "ಬಾಟಲಿಗೆ ಸೋಡಾವನ್ನು ತುಂಬಿಸುವುದರ ಮೇಲೆ ಅಪಾಯವನ್ನು ಪರಿಗಣಿಸಬಹುದಷ್ಟೇ. ಅದಕ್ಕೆ ಇಂತಿಷ್ಟೇ ಸೋಡಾವನ್ನುವನ್ನು ತುಂಬಿಸಬೇಕೆಂಬ ನಿಯಮವಿದೆ ಅಷ್ಟನ್ನು ಮಾತ್ರವೇ ತುಂಬಿಸಬೇಕು ಅದಕ್ಕಿಂತ ಹೆಚ್ಚಾದರಷ್ಟೇ ಬಾಟಲಿ ಒಡೆಯುವ ಸಂದರ್ಭವಿರುತ್ತದೆ. ಹಾಗು ಸೋಡಾ ಬಾಟಲಿಯನ್ನು ತೆರೆಯುವಾಗಲೂ ಅಷ್ಟೇ ಅಪಾಯವೇನು ಇರುವುದಿಲ್ಲ

ಗೋಲಿಸೋಡಾದಲ್ಲಿ ಹಲವಾರು ವೆರೈಟಿಗಳಿವೆ
ಗೋಲಿಸೋಡಾದಲ್ಲಿ ಹಲವಾರು ವೆರೈಟಿಗಳಿವೆ ಆರೆಂಜ್, ಪೈನಾಪಲ್, ಲಿಂಬೂ, ಸಿಹಿ ಹೀಗೆ ಹಲವಾರು ವೆರೈಟಿಗಳಲ್ಲಿ ದೊರಕುತ್ತದೆ.ಆರೋಗ್ಯದ ಮೇಲೆ ಇದು ಯಾವುದೇ ದುಷ್ಪರಿಣಾಮಗಳನ್ನು ಬೀರುವುದಿಲ್ಲ ಎಂದು ಪರಮೇಶ್ವರ್ ಹೇಳುತ್ತಾರೆ

ಆರೋಗ್ಯವರ್ಧಕ ಪಾನೀಯ
ಪಿತ್ತ, ಅಜೀರ್ಣ, ಗ್ಯಾಸ್ ಟ್ರಬಲ್ ನಂಥ ಎಲ್ಲಾ ಸಮಸ್ಯೆಗಳಿಗೂ ಇದು ರಾಮಬಾಣ. ಜನರಿಗೆ ಇದರ ಬಾಟಲ್ ಹಾಗು ಇದೊಂದು ಬ್ರಾಂಡೆಡ್ ಸೋಡಾ ಅಲ್ಲ ಎಂಬಂತಹ ಅಭಿಪ್ರಾಯ ಇರುವುದರಿಂದ ಈಗ ಬೇಡಿಕೆ ಕಡಿಮೆಯಾಗಿದೆ.

ಹೆಗ್ಗಡೆಯವರ ಅಣತಿಯಂತೆ ಮಳಿಗೆ ಹಾಕಿದೆವು
ಧರ್ಮಸ್ಥಳದ ಹೆಗ್ಗಡೆಯವರೇ ಈ ಮಳಿಗೆಯನ್ನು ಲಕ್ಷದೀಪದಲ್ಲಿ ಹಾಕಬೇಕೆಂದು ಹೇಳಿದ್ದರೆ.ಹಾಗು ಸ್ವತಃ ಅವರೇ ಗೋಲಿ ಸೋಡಾವನ್ನು ನಮ್ಮಲ್ಲಿಂದ ತರಿಸಿ ಗೋಲಿ ಸೋಡಾ ಕುಡಿಯುತ್ತಾರೆ ಎನ್ನುತ್ತಾರೆ ಪರಮೇಶ್ವರ್ ದಂಪತಿ.
ಗೋಲಿ ಸೋಡಾವನ್ನು ನೋಡದವರು, ಸೇವಿಸದವರು, ಹಾಗು ಇದರ ಬಗ್ಗೆ ತಿಳಿಯದವರಿಗೆ ಲಕ್ಷದೀಪೋತ್ಸವ ಒಂದು ಒಳ್ಳೆಯ ಅವಕಾಶ ಎನ್ನಬಹುದು.-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications