• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ರೌಡಿ ಸಾಮ್ರಾಜ್ಯ ಕಟ್ಟಲು ಹೊರಟವರು ಅಂದರ್

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 6: ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ತಂಡ ಹೆಡೆಮುರಿ ಕಟ್ಟಿದೆ. ಈ ಮೂಲಕ ಡಿ ಸ್ಕ್ವ್ಯಾಡ್ ಹೆಸರಲ್ಲಿ ಮಂಗಳೂರು-ಕೇರಳ ಗಡಿ ಭಾಗದಲ್ಲಿ ರೌಡಿಸಂ ಮಾಡುತ್ತಿದ್ದ ತಂಡ ಅಂದರ್ ಆಗಿದೆ.

ಪ್ರಕರಣದ ಹಿನ್ನಲೆ

ಇತ್ತೀಚೆಗೆ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಮಿಯಪದವು ಪರಿಸರದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಕೆಲವು ಯುವಕರು D Squad ಎಂಬ ಹೆಸರಿನಲ್ಲಿ ಮಾರಕಾಸ್ತ್ರಗಳಾದ ಪಿಸ್ತೂಲ್‌ಗಳನ್ನು ಗುರಿ ಅಭ್ಯಾಸ ಮಾಡುವ ರೀತಿಯಲ್ಲಿ ವಿಡಿಯೋ ಚಿತ್ರೀಕರಣಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು.

ಕೇರಳ ರಾಜ್ಯದ ಪ್ರಮುಖ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಮೀಯಾಪದವು ಪರಿಸರವು ವಿಟ್ಲ ಠಾಣಾ ಗಡಿ ಭಾಗದಲ್ಲಿ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೂಡ ಕಟ್ಟು ನಿಟ್ಟಿನ ನಿಗಾ ಇಡುವಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು.

ಕಳೆದ ಮಾರ್ಚ್ 25ರಂದು ಮಿಯಪದವು D squad ಗ್ಯಾಂಗ್ ರೌಡಿಗಳು ಮಂಜೇಶ್ವರದ ಉಪ್ಪಳ ಹಿದಾಯತ್ ನಗರ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದು ಕ್ಲಬ್ ಮೇಲೆ ಫೈರಿಂಗ್ ನಡೆಸಿದ್ದರು. ಕಾಸರಗೋಡು ಜಿಲ್ಲಾ ಪೊಲೀಸರು ಈ ಗ್ಯಾಂಗ್ ಅನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭ ಪೊಲೀಸರ ಮೇಲೆಯೇ ಆರೋಪಿಗಳು ಗುಂಡು ಹಾರಿಸಿ ತಪ್ಪಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗಡಿ ಭಾಗದ ಕಡೆಗೆ ಸಂಚರಿಸಿದ್ದರು.

ಈ ವೇಳೆ ವಿಟ್ಲ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಕೋಡಂಗೆ ಎಂಬಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ಬೆಳಗಿನ ಜಾವ 4 ಘಂಟೆಗೆ ಕಾರ್ ವೊಂದನ್ನು ತಡೆದು ನಿಲ್ಲಿಸಿದಾಗ ಪೊಲೀಸರ ಮೇಲೆಯೇ ರೌಡಿಗಳು ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಈ ವೇಳೆ ತಕ್ಷಣ ಕಾರ್ಯಪೃವೃತ್ತರಾದ ಪೊಲೀಸ್ ತಂಡವು ಆಸ್ಫಾಕ್, ಶಾಕಿರ್, ಲತೀಫ್ ಎಂಬುವವರನ್ನು ವಶಕ್ಕೆ ಪಡೆದು ಒಂದು ಪಿಸ್ತೂಲ್ ಮತ್ತು ಮದ್ದು ಗುಂಡುಗಳು ಮತ್ತು ಕೊಡಲಿ, ಡ್ರ್ಯಾಗರ್, ಮಾದಕ ದ್ರವ್ಯ ಹೊಂದಿದ ಕಾರು ಸಮೇತ ವಶಕ್ಕೆ ಪಡೆದಿದ್ದರು. ಈ ವೇಳೆ ಕಾರ್‌ನಲ್ಲಿದ್ದ ಆರೋಪಿಗಳಾದ ರಹೀಂ ಮತ್ತು ರಾಕೇಶ್ ಪರಾರಿಯಾಗಿದ್ದರು.

ಮತ್ತೆ ತನಿಖೆಯನ್ನು ಮುಂದುವರೆಸಿದ ವಿಟ್ಲ ಠಾಣಾ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳು ಸೇರಿದಂತೆ ಮತ್ತಿಬ್ಬರನ್ನು ಬಂಧನ ಮಾಡಿದ್ದಾರೆ.

ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಬಂಧನ ಮಾಡಲಾಗಿದ್ದು, ಅವರನ್ನು ಅಸ್ಫಾಖ್ ಮಿಯಾಪದವು, ಶಾಕಿರ್ ಮಿಯಾಪದವು, ಲತೀಫ್ ಮಿಯಾಪದವು, ರೆಹಮಾನ್ ಮೀಯಾಪದವು, ರಾಕೇಶ್ ಜಲಾಗಾವ್ ಮಹಾರಾಷ್ಟ್ರ, ಕೂವಾ ಫಯಾಜ್, ಹೈದರ್ ಆಲಿ ಅಲಿಯಾಸ್ ಹೈದರ್ ಎಂದು ಗುರುತಿಸಲಾಗಿದೆ.

   #Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

   ಆರೋಪಿಗಳಿಂದ 4 ಪಿಸ್ತೂಲುಗಳು, 27 ರೌಂಡ್ಸ್ ಬುಲೆಟ್, 1 SBML ಕೋವಿ, ಕೊಡಲಿ, ಡ್ರ್ಯಾಗರ್, ಹ್ಯಾಂಡ್ ಪಂಚ್, MDMA ಮಾದಕ ದ್ರವ್ಯ, LSD ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

   English summary
   The Dakshina Kannada District Police has arrested a 7 rowdy sheeters in connection with firing on policemen.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X