ಮಂಗಳೂರು : ಹೊತ್ತಿ ಉರಿದ ಕಲ್ಲಿದ್ದಲು ಲಾರಿ
ಮಂಗಳೂರು, ಜೂ. 30 : ಕಲ್ಲಿದ್ದಲು ಸಾಗಣೆ ಮಾಡುತ್ತಿದ್ದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಮೂಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಲಾರಿ ಚಾಲಕ ಕೆಳಗೆ ಇಳಿದು ಓಡಿದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿ ಆಕಸ್ಮಿಕಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮಂಗಳೂರು ಬಂದರಿನಿಂದ ಪಡುಬಿದ್ರಿಯಲ್ಲಿರುವ ಯುಪಿಸಿಎಲ್ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗುತ್ತಿದ್ದ ಲಾರಿಯಲ್ಲಿ, ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಿಎಸ್‌ಐ ಚರ್ಚ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೈಕ್ ಸವಾರರು ನೀಡಿದ ಎಚ್ಚರಿಕೆ ಅರಿತ ಲಾರಿ ಚಾಲಕ, ಲಾರಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅದರಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.

ಲಾರಿಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿಯೇ ಮೂಲ್ಕಿಯ ಸೈಂಟ್ ಆಯನ್ಸ್ ನರ್ಸಿಂಗ್ ಕಾಲೇಜಿನ ವಸತಿನಿಲಯಕ್ಕೆ ಟ್ಯಾಂಕರ್ ಮೂಲಕ ನೀರು ತರಲಾಗುತ್ತಿತ್ತು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆ ಟ್ಯಾಂಕರನ್ನು ಕೂಡಲೇ ಘಟನಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬೆಂಕಿ ನಂದಿಸಿದರು. [ಹೊಟ್ಟೆಯಲ್ಲಿ ಕತ್ತರಿ, ಈಕೆ ಬದುಕಿದ್ದೇ ಪವಾಡ!]
ಬೈಕ್ ಚಾಲಕ ಕೊಟ್ಟ ಎಚ್ಚರಿಕೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಯ ಹಿಂಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಲಾರಿಯ ಹಿಂದೆ ಬರುತ್ತಿದ್ದ ಬೈಕ್ ಸವಾರ ಅದನ್ನು ಮೊದಲು ಗಮನಿಸಿದ್ದಾರೆ. ತಕ್ಷಣ ಲಾರಿಯನ್ನು ಓವರ್ ಟೇಕ್ ಮಾಡಿದ ಆತ, ಚಾಲಕನಿಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿಸಿದ್ದಾರೆ. ಎಚ್ಚರಿಕೆ ಅರಿತ ಚಾಲಕ ಲಾರಿನಲ್ಲಿ ರಸ್ತೆ ಬದಿ ನಿಲ್ಲಿಸಿ ಅದರಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಗೊಂದಲ ಮೂಡಿಸಿದ ಲಾರಿ : ಬೆಂಕಿ ಹೊತ್ತಿ ಉರಿಯುತ್ತಿದ್ದ ಲಾರಿ ಮುಂಭಾಗದಿಂದ ಗ್ಯಾಸ್ ಟ್ಯಾಂಕರ್ ರೀತಿ ಕಾಣುತ್ತಿತ್ತು. ಅದನ್ನು ಸರಿಯಾಗಿ ಗುರುತಿಸಿದ ಜನರು ಗಾಬರಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಗತ್ತು.












Click it and Unblock the Notifications