ಪ್ರಚೋದನಕಾರಿ ಪೋಸ್ಟ್, 'ವೀರ ಕೇಸರಿ' ಫೇಸ್ಬುಕ್ ಪೇಜ್ ವಿರುದ್ಧ ಕೇಸ್
ಜಗದೀಶ್ ಸುವರ್ಣ ಸಾವಿನ ಬಗ್ಗೆ ವೀರ ಕೇಸರಿ ಎನ್ನುವ ಫೇಸ್ಬುಕ್ ಪೇಜಿನಲ್ಲಿ ಪ್ರಚೋದನಕಾರಿ ಬರವಣಿಗೆಗಳು ಹಾಗೂ ಕಮೆಂಟ್ ಮಾಡಲಾಗಿದೆ. ಈ ಕುರಿತು ಅಕೌಂಟ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಏಪ್ರಿಲ್ 25: ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ ಭಜರಂಗದಳ ಕಾರ್ಯಕರ್ತ ಜಗದೀಶ್ ಸುವರ್ಣ ಸಾವಿನ ಕುರಿತಾಗಿ ಪ್ರಚೋದನಕಾರಿ ಬರವಣಿಗೆ ಹಾಗೂ ಕಮೆಂಟ್ ಪೋಸ್ಟ್ ಮಾಡಿರುವ ವೀರ ಕೇಸರಿ ಹೆಸರಿನ ಫೇಸ್ಬುಕ್ ಪೇಜ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟಬೆಂಗ್ರೆ ನಿವಾಸಿ ಜಗದೀಶ್ ಸುವರ್ಣ ಎಂಬವರ ಮೃತದೇಹ ಶುಕ್ರವಾರ ಗುರುಪುರ ನದಿಯ ಅಳಿವೆ ಬಾಗಿಲಿನ ಬಳಿ ಪತ್ತೆಯಾಗಿತ್ತು. ಸಹೋದರ ಶಿವಾನಂದ ಸಾವಿನ ವಿಚಾರದಲ್ಲಿ ಅನುಮಾನ ಕಾಡುತ್ತಿದೆ ಎಂದು ದೂರು ನೀಡಿದ್ದರು. ಹೀಗಾಗಿ ಪಣಂಬೂರು ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು.[ಮಂಗಳೂರಿನಲ್ಲಿ ಭಜರಂಗ ದಳ ನಾಯಕನ ಅನುಮಾನಾಸ್ಪದ ಸಾವು]

ಈ ನಡುವೆ ಹಿಂದೂ ಸಂಘಟನೆಗಳ ವಿಚಾರಗಳನ್ನು ಬೆಂಬಲಿಸುವ ವೀರ ಕೇಸರಿ ಎನ್ನುವ ಫೇಸ್ಬುಕ್ ಪೇಜಿನಲ್ಲಿ ಪ್ರಚೋದನಕಾರಿ ಬರವಣಿಗೆಗಳು ಹಾಗೂ ಕಮೆಂಟ್ ಮಾಡಲಾಗಿದೆ.

ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ದುರುದ್ದೇಶದಿಂದ ಈ ರೀತಿ ಪ್ರಚೋದನಕಾರಿ ಚಟುವಟಿಕೆ ನಡೆಸುತ್ತಿರುವ ಪೇಜ್ ವಿರುದ್ಧ ಇದೀಗ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]












Click it and Unblock the Notifications