ಸುಳ್ಯ : ಭಗ್ನ ಪ್ರೇಮಿಯಿಂದ ಕಾಲೇಜು ವಿದ್ಯಾರ್ಥಿನಿ ಭೀಕರ ಹತ್ಯೆ

ಮಂಗಳೂರು, ಫೆಬ್ರವರಿ 20 : ಸುಳ್ಯದಲ್ಲಿ ದ್ವಿತೀಯ ಬಿಎಸ್‌ಸಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸಹಪಾಠಿಯೇ ಈ ಹತ್ಯೆ ಮಾಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಹತ್ಯೆಯಾದವರು. ಅಕ್ಷತಾ ಸಹಪಾಠಿ ಕಾರ್ತಿಕ್ ಮಂಗಳವಾರ ಸಂಜೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

BSC student murdered in Sullia, Dakshina Kannada

ಮಂಗಳವಾರ ಸಂಜೆ ಸುಳ್ಯದ ಚನ್ನಕೇಶ್ವರ ರಥಬೀದಿ ರಸ್ತೆಯಲ್ಲಿ ಕಾರ್ತಿಕ್ ಅಕ್ಷತಾ ಮೇಲೆ ಹಲ್ಲೆ ಮಾಡಿದ್ದು, ಚಾಕುವಿನಿಂದ 6 ಬಾರಿ ಇರಿದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಕ್ಷತಾ ಸಾವನ್ನಪ್ಪಿದ್ದಾಳೆ.

ಅಕ್ಷತಾ ಮತ್ತು ಕಾರ್ತಿಕ್ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್‌.ಸಿ ವ್ಯಾಸಂಗ ಮಾಡುತ್ತಿದ್ದರು. ಕಾರ್ತಿಕ್ ಅಕ್ಷತಾಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ನಿರಾಕರಿಸಿದ ಹಿನ್ನಲೆಯಲ್ಲಿ ಹತ್ಯೆ ಮಾಡಿದ್ದಾನೆ.

ಜನರು ಕಾರ್ತಿಕ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರ್ತಿಕ್ ಸದ್ಯ ಸುಳ್ಯ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಮಂಗಳವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿ ಕಾರ್ತಿಕ್ ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬುವವರ ಪುತ್ರ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರ ನಿವಾಸಿಯಾಗಿದ್ದ ಅಕ್ಷತಾ ನೆಹರು ಮೆಮೂರಿಯಲ್ ಕಾಲೇಜಿನಲ್ಲಿ ಓದುತ್ತಿದ್ದಳು. ಕಾರ್ತಿಕ್ ಚಾಕುವಿನಿಂದ ಇರಿದ ಬಳಿಕ ಕೈಗೆ ಗಾಯ ಮಾಡಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+