ಮಂಗಳೂರು; ಬೋಟ್ ಮುಳುಗಡೆ, ನಾಲ್ವರಿಗಾಗಿ ಇನ್ನೂ ಶೋಧ
ಮಂಗಳೂರು, ಡಿಸೆಂಬರ್ 02 : ಮಂಗಳೂರಿನಲ್ಲಿ ಶ್ರೀ ರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ನಾಲ್ವರಿಗಾಗಿ ಇನ್ಣೂ ಹುಡುಕಾಟವನ್ನು ನಡೆಸಲಾಗುತ್ತಿದೆ.
ಮೀನುಗಾರಿಕೆಗಾಗಿ ಸೋಮವಾರ ಮುಂಜಾನೆ ತೆರಳಿದ್ದ ಬೋಳಾರದ ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಮೀನುಗಾರರ ಪೈಕಿ ಆರು ಜನರು ನಾಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಬೊಕ್ಕಪಟ್ಣ ನಿವಾಸಿಗಳಾದ ಸುವರ್ಣ ಹಾಗೂ ಪ್ರೀತಂ ಎಂಬವವರ ಮೃತದೇಹ ಪತ್ತೆಯಾಗಿದೆ. ಕಸಬ ಬೆಂಗ್ರೆ ನಿವಾಸಿಗಳಾದ ಚಿಂತನ್, ಮೊಹಮ್ಮದ್ ಹಸೈನಾರ್, ಮೊಹಮ್ಮದ್ ಅನ್ಸಾರ್, ಝಿಯಾವುಲ್ಲ ಅವರಿಗಾಗಿ ಹುಡುಕಾಟ ಮುಂದುವರೆದಿದೆ.

ಮಾಜಿ ಸಚಿವ, ಶಾಸಕ ಯು. ಟಿ. ಖಾದರ್ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯದ ಬಗ್ಗೆ ಮಾಹಿತಿಯನ್ನು ಪಡೆದರು. ಆರು ಮೀನುಗಾರರ ಕುಟುಂಬದವರಿಗೆ ತಲಾ 10 ಲಕ್ಷ ರೂಪಾಯಿಯ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೋಟ್ ಮುಳುಗಡೆ ಬಳಿಕ ನಾಪತ್ತೆಯಾದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಜಖಂಗೊಂಡಿದ್ದು, ಭಾಗಶಃ ಮುಳುಗಡೆಯಾಗಿದೆ.
Karnataka: Two fishermen drowned after a fishing boat capsized in the Arabian Sea off Mangaluru coast yesterday. Four fishermen still missing, 16 rescued. pic.twitter.com/pZMr0hxNpz
— ANI (@ANI) December 2, 2020












Click it and Unblock the Notifications