ಪಿಲಿಕುಳ ಜೈವಿಕ ಉದ್ಯಾನವನದ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪ್ರಾಣಿ ಪರಿಪಾಲಕನ ಅಮಾನತು
ಮಂಗಳೂರು, ಆಗಸ್ಟ್, 25: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿ ಪರಿಪಾಲಕನನ್ನು ಸುಖಾಸುಮ್ಮನೆ ಕರ್ತವ್ಯದಿಂದ ವಜಾಗೊಳಿಸಿ, ಜಾತಿನಿಂದನೆ ಮಾಡಿ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿ ವಾರ ಕಳೆದಿದೆ. ಆದರೂ ಇನ್ನೂ ಯಾವುದೇ ಕ್ರಮ ಆಗಿಲ್ಲ ಎಂದು ಸಂತ್ರಸ್ತ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಅರಣ್ಯ ರೋದನದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಸಾಮಾಜಿಕ ಕಾರ್ಯಕರ್ತರು ಆರ್‌ಟಿಐಯಿಂದ ಮಾಹಿತಿ ಪಡೆದಿದ್ದರು. ಮಾಧ್ಯಮಕ್ಕೆ ಹಾಗೂ ಆರ್‌ಟಿಐ ಕಾರ್ಯಕರ್ತರಿಗೆ ಮಾಹಿತಿ ನೀಡಿರುವ ಅನುಮಾನದಲ್ಲಿ ಪಿಲಿಕುಳ ಜೈವಿಕ ಉದ್ಯಾನವನದ ಸಿಬ್ಬಂದಿ ಅಶೋಕ್ ಬಿ. ಅವರನ್ನು ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಕರ್ತವ್ಯದಿಂದ ವಜಾಗೊಳಿಸಿದ್ದರು.

ಬಳಿಕ ನಿವೃತ್ತ ನಿರ್ದೇಶಕರ ಕ್ರಮವನ್ನು ಖಂಡಿಸಿ ಅಶೋಕ್ ಜಿಲ್ಲಾಧಿಕಾರಿ ಅವರ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಮತ್ತೆ ಪಿಲಿಕುಳದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉರಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಜಯಪ್ರಕಾಶ್ ಭಂಡಾರಿಯವರು ಅಶೋಕ್ ಮೇಲೆ ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ನಿನ್ನನ್ನು ಕೊಂದು ಪ್ರಾಣಿಗಳಿಗೆ ಆಹಾರವಾಗಿ ಹಾಕುತ್ತೇನೆಂದು ಬೆದರಿಕೆಯೊಡ್ಡಿದ್ದಾರೆ.
ಈ ಬಗ್ಗೆ ಜಯಪ್ರಕಾಶ್ ಭಂಡಾರಿ ವಿರುದ್ಧ ಅಶೋಕ್ ಅವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ. ಕಾವೂರು ಠಾಣೆಯಲ್ಲಿ ಜಯಪ್ರಕಾಶ್ ಭಂಡಾರಿ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ ಇದೀಗ ಅವರು ತಲೆಮರೆಸಿಕೊಂಡಿದ್ದಾರೆ. ಆದ್ದರಿಂದ ಶ್ರೀಘ್ರ ಅವರಿಗೆ ಕ್ರಮವಾಗಿ ಮತ್ತೆ ತನಗೆ ಪಿಲಿಕುಳದಲ್ಲಿ ಹಳೆಯ ಕೆಲಸವನ್ನೇ ಕೊಡಿಸಬೇಕೆಂದು ಸಂತ್ರಸ್ತ ಅಶೋಕ್ ಬಿ. ಅಳಲು ತೋಡಿಕೊಂಡಿದ್ದಾರೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನಿರ್ವಹಣೆ ಇಲ್ಲದೇ ಪ್ರಾಣಿಗಳ ಸಾವುಗೀಡಾಗುತ್ತಿವೆ. ಮರಗಳನ್ನು ಕಡಿದು ಕಳ್ಳಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಮಾಂಸ ತುಂಡುಗಳ ನಡುವೆ ತರಕಾರಿ ಹೆಕ್ಕುತ್ತಿರುವ ಜಿಂಕೆಗಳು ಮತ್ತು ಕೆಸರಿನ ಮೇಲೆ ಪ್ರಾಣಿಗಳಿಗೆ ಆಹಾರ ಹಾಕಿರುವ ಬಗ್ಗೆ ದೃಶ್ಯಗಳೂ ವೈರಲ್ ಆಗಿತ್ತು.
ಅಲ್ಲದೆ ನಿರ್ವಹಣೆ ಇಲ್ಲದೇ ಚರ್ಮ ರೋಗಕ್ಕೆ ಪ್ರಾಣಿಗಳು ಗುರಿಯಾಗಿದ್ದು, ಉದ್ಯಾನವನದೊಳಗೆ ಕದ್ದು ಮಾರಾಟಕ್ಕೆ ದಿಮ್ಮಿಗಳ ಜೋಡಣೆ ಪ್ರಾಣಿಗಳು ಇರುವ ಕೋಣೆಗಳಿಗೆ ರಕ್ಷಣೆಯೇ ಇಲ್ಲದಿರುವ ಬಗ್ಗೆ ಪಿಲಿಕುಳ ಜೈವಿಕ ಉದ್ಯಾನವನದ ಅವ್ಯವಸ್ಥೆ ಫೋಟೋ ವಿಡಿಯೋಗಳು ವೈರಲ್ ಆಗಿದ್ದವು.
ಸುಮಾರು 150 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿರುವ ಜೈವಿಕ ಉದ್ಯಾನವನ ಇದಾಗಿದ್ದು, ಪಿಲಿಕುಳದಲ್ಲಿ 1,440 ಪ್ರಾಣಿ-ಪಕ್ಷಿಗಳಿವೆ. ಮೃಗಾಲಯ ಅಭಿವೃದ್ಧಿಗೆ ಎಂಆರ್‌ಪಿಎಲ್, ರಿಲಾಯನ್ಸ್ ಸೇರಿದಂತೆ ಕಾರ್ಪೋರೇಟ್ ಕಂಪೆನಿಗಳು ಅನುದಾನ ನೀಡಿದೆ. ಆದರೆ ಝೂ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ.
ಮೃಗಾಲಯಕ್ಕೆ ಬಂದ ಅನುದಾನದಲ್ಲೂ ಭಾರೀ ಗೋಲ್ ಮಾಲ್ ಆಗಿದ್ದು, ಆರ್‌ಟಿಐ ಕಾರ್ಯಕರ್ತರು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಜಯಪ್ರಕಾಶ್ ಭಂಢಾರಿ ಮೇಲೆ ಆರೋಪಿಸಿದ್ದರು. ಮೃಗಾಲಯ ಅವ್ಯವಸ್ಥೆ ಬಗ್ಗೆ ಸೆಂಟ್ರಲ್ ಝೂ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ಕೂಡ ನೀಡಲಾಗಿತ್ತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications