ತಂದೆಯ ಉತ್ತರಾದಿ ಕ್ರಿಯೆಗಾಗಿ ಮಂಗಳೂರಿಗೆ ಬಂದ ಐಶ್ವರ್ಯಾ ರೈ
ಮುಂಬೈನಿಂದ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ನಟಿಯೊಂದಿಗೆ ಪುತ್ರಿ ಆರಾಧ್ಯಾ, ತಾಯಿ ಹಾಗೂ ಕುಟುಂಬ ಸದಸ್ಯರ ಜೊತೆಗಿದ್ದಾರೆ. ನಂತರ ಉಪ್ಪಿನಂಗಡಿಯತ್ತ ಪಯಣ ಬೆಳೆಸಿದರು.
ಮಂಗಳೂರು :ಮಂಗಳೂರು ಮೂಲದ ಐಶ್ವರ್ಯಾ ರೈ ಅವರು ಇಂದು ಬೆಳಗ್ಗೆ ತಮ್ಮ ಮಗಳು ಹಾಗೂ ತಾಯಿ ಜೊತೆಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಮುಂಬೈನಿಂದ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ನಟಿಯೊಂದಿಗೆ ಪುತ್ರಿ ಆರಾಧ್ಯಾ, ತಾಯಿ ಹಾಗೂ ಕುಟುಂಬ ಸದಸ್ಯರ ಜೊತೆಗಿದ್ದಾರೆ. ನಂತರ ಉಪ್ಪಿನಂಗಡಿಯತ್ತ ಪಯಣ ಬೆಳೆಸಿದರು.

ಮೂಲತಃ ಕರಾವಳಿ ಭಾಗದವರಾದ ಐಶ್ವರ್ಯ ಅವರ ತಂದೆ ಕೃಷ್ಣಪ್ರಸಾದ್ ರೈ(78) ಅಲ್ಪಕಾಲದ ಅಸೌಖ್ಯದಿಂದ ಮುಂಬಯಿಯ ಬಾಂದ್ರದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಮಾ.18ರಂದು ನಿಧನರಾಗಿದ್ದರು.

ಅವರ ಅಂತಿಮ ವಿಧಿವಿಧಾನಗಳನ್ನು ಈಗಾಗಲೇ ಪೂರೈಸಿದ್ದ ಐಶ್ವರ್ಯ ಕುಟುಂಬ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಕುಮಾರಧಾರಾ ಸಂಗಮ ಕ್ಷೇತ್ರದಲ್ಲಿ ಅವರು ತಂದೆಯ ಪಿಂಡ ಪ್ರದಾನ ಮಾಡಲಿದ್ದಾರೆ.

Click it and Unblock the Notifications