ತುರ್ತು ಕರ್ತವ್ಯಕ್ಕೆ ಮರಳಿದ ವಿಂಗ್ ಕಮಾಂಡರ್ ಬೆಳ್ತಂಗಡಿಯ ಪ್ರೀತಂ ಶೆಟ್ಟಿ
ಮಂಗಳೂರು, ಫೆಬ್ರವರಿ 28 : ಪಾಕಿಸ್ತಾನ - ಭಾರತದ ಗಡಿಯಲ್ಲಿ ಯುದ್ಧದ ಕಾರ್ಮೋಡ ಗೋಚರಿಸ ತೊಡಗಿದೆ. ಈ ಹಿನ್ನೆಲೆಯಲ್ಲಿ ರಜೆಗೆ ಆಗಮಿಸಿದ್ದ ರಕ್ಷಣಾ ಪಡೆಗಳ ಯೋಧರನ್ನು ತುರ್ತಾಗಿ ಬೆಟಾಲಿಯನ್ ಗೆ ವಾಪಸ್ ಮರಳುವಂತೆ ಸೂಚನೆ ನೀಡಲಾಗಿದೆ .
ದಕ್ಷಿಣ ಕನ್ನಡ ಜಿಲ್ಲೆಗೆ ರಜೆಯ ಮೇಲೆ ಆಗಮಿಸಿದ್ದ ಯೋಧರಿಗೆ ತುರ್ತು ಕರೆ ಬಂದಿದ್ದು ಬೇಸ್ ಗೆ ಈ ಕೂಡಲೇ ಮರಳುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಜಲೋಡಿ ನಿವಾಸಿ ಮಜಲೋಡಿ ಚಂದ್ರಹಾಸ ಶೆಟ್ಟಿ, ಶ್ರೀಮತಿ ಶಾರದಾ ರವರ ಪುತ್ರ ಏರ ವಿಂಗ್ ಕಮಾಂಡರ್ ಪ್ರೀತಂ ಶೆಟ್ಟಿ ಅವರಿಗೂ ತುರ್ತು ಕರೆ ಬಂದಿದ್ದು ಕರ್ತವ್ಯಕ್ಕೆ ಮರಳಿದ್ದಾರೆ.
ಬೆಂಗಳೂರಿನಲ್ಲಿ ಏರ್ ಶೋ ವೇಳೆ ರಜೆ ಪಡೆದು ಊರಿಗೆ ಬಂದಿದ್ದ ಪ್ರೀತಂ ಶೆಟ್ಟಿ ಅವರಿಗೆ ಏರ್ ಬೇಸ್ ನಿಂದ್ ಕರ್ತವ್ಯಕ್ಕೆ ಮರಳುವಂತೆ ತುರ್ತು ಕರೆ ಬಂದಿದೆ. ಪಾಕಿಸ್ಥಾನ ಗಡಿಯಲ್ಲಿ ಯುದ್ದದ ಪರಿಸ್ಥತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ತುರ್ತು ಕರೆ ಬಂದಿದೆ. ಈ ಪರಿಣಾಮ ಕರ್ತವ್ಯದ ಕರೆಗೆ ಓಗೊಟ್ಟು ಸೇನೆಗೆ ಪ್ರೀತಂ ಶೆಟ್ಟಿ ಮರಳಿದ್ದಾರೆ.

ತುರ್ತು ಕರೆಗೆ ಓ ಗೊಟ್ಟು ಕರ್ತವ್ಯಕ್ಕೆ ಮರಳಿದ ವಿಂಗ್ ಕಮಾಂಡರ್ ಪ್ರಿತಂ ಶೆಟ್ಟಿ ಅವರಿಗೆ ಊರ ಹಿರಿಯರು ಶುಭ ಹಾರೈಸುತ್ತಾ, ಶೌರ್ಯ ಸಾಹಸ ದ ಮೂಲಕ ಶತ್ರು ಗಳನ್ನು ಸದೆ ಬಡಿದು ದೇಶದ ಕೀರ್ತಿ ಯನ್ನು ಬಾನೆತ್ತರಕ್ಕೆ ಹಾರಿಸಿ ಎಂದು ಹಾರೈಸಿದ್ದಾರೆ.












Click it and Unblock the Notifications