ಬಂದೂಕು ಸದ್ದಿನ ನಡುವೆ ಮಂಗಳೂರಿನಲ್ಲಿ ಶಿಕ್ಷಣ ಪಡೆಯಲು ಅರ್ಜಿ ಹಾಕಿದ ಅಫ್ಘಾನ್ ವಿದ್ಯಾರ್ಥಿಗಳು

ಮಂಗಳೂರು, ಆಗಸ್ಟ್ 28: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದ್ದಾರೆ. ಪ್ರತಿದಿನ ಅಫ್ಘಾನಿಸ್ತಾನ ನರಕ ಸದೃಶವಾಗುತ್ತಿದೆ. ಅದರಲ್ಲೂ ಅಫ್ಘಾನಿಸ್ತಾನ ಹೆಣ್ಣುಮಕ್ಕಳ ಪಾಲಿಗೆ ತಾಲಿಬಾನಿಗಳು ಪರಮ ಕ್ರೂರಿಗಳಾಗಿ ಬದಲಾಗಿದ್ದು, ಹೆಣ್ಣುಮಕ್ಕಳು ಮನೆಯಿಂದ ಹೊರಬಾರದಾಗಿ ಕಟ್ಟಾಜ್ಞೆ ಮಾಡಿದ್ದಾರೆ.

ಇದರ ನಡುವೆ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗೆ ಮಂಗಳೂರಿನತ್ತ ಮುಖ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 156 ಮಂದಿ ವಿದ್ಯಾರ್ಥಿಗಳು ಅರ್ಜಿ ಹಾಕುವ ಮೂಲಕ ವಿದ್ಯಾರ್ಜನೆಯ ಹಸಿವನ್ನು ತೋರಿಸಿದ್ದಾರೆ.

ಗುಂಡಿನ ಸದ್ದು, ಬಾಂಬ್ ಸ್ಫೋಟ, ನೆತ್ತರ ಓಕುಳಿ, ಬೀದಿ ಬೀದಿಯಲ್ಲಿ ಸ್ಮಶಾನ‌ ಮೌನ, ಸಾವನ್ನು ಬೆನ್ನಿಗೆ ಕಟ್ಟಿಕೊಂಡೇ ಭಯಭೀತ ವಾತಾವರಣದಲ್ಲಿ ವಾಸಿಸುತ್ತಿರುವ ಅಫ್ಘಾನಿಸ್ತಾನ ಜನ. ಇದು ಸದ್ಯ ಅಫ್ಘಾನಿಸ್ತಾನದ ಪರಿಸ್ಥಿತಿ. ಅಫ್ಘಾನಿಸ್ತಾನ ಈ ಹಿಂದೆ ಎಂದೂ ಕಾಣದ ನರಕ ಕಾಣುತ್ತಿದ್ದರೂ, ಅಲ್ಲಿನ ಯುವ ಜನರಿಗೆ ಮಾತ್ರ ವಿದ್ಯಾಭ್ಯಾಸದ ಆಸಕ್ತಿ ಕಡಿಮೆಯಾಗಿಲ್ಲ ಅನ್ನುವುದು ಮತ್ತೆ ಸಾಬೀತಾಗಿದೆ.

 ಮಂಗಳೂರು ವಿಶ್ವವಿದ್ಯಾನಿಲಯ ಸೇರುವ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟು

ಮಂಗಳೂರು ವಿಶ್ವವಿದ್ಯಾನಿಲಯ ಸೇರುವ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟು

ಯುದ್ಧ ಜರ್ಝರಿತ ದೇಶದ ಯುವಕ- ಯುವತಿಯರಲ್ಲಿರುವ ಶಿಕ್ಷಣದ ಹಪಾಹಪಿ ಮಾತ್ರ ಒಂದಿನಿತು ಕಡಿಮೆಯಾಗಿಲ್ಲ ಅನ್ನುವುದು ರುಜುವಾತಾಗಿದೆ. ಹಾಗಾಗಿ ಶಿಕ್ಷಣದ ಬೆನ್ನು ಹತ್ತಿ ಹೊರಟ ಅಫ್ಘಾನಿಗರು ಮಂಗಳೂರು ವಿಶ್ವವಿದ್ಯಾಲಯವನ್ನೂ ಆಯ್ಕೆ ಮಾಡುತ್ತಿದ್ದು, ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಸೇರುವ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ.
ಉನ್ನತ ವಿದ್ಯಾಭ್ಯಾಸ ಅರಸಿ ಪ್ರಪಂಚದ ಹಲವು ದೇಶಗಳ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದತ್ತ ಮುಖ ಮಾಡುತ್ತಾರೆ. ಅದರಲ್ಲಿ ಈ ಬಾರಿ ಅಫ್ಘಾನಿಸ್ತಾನದ ವಿದ್ಯಾರ್ಥಿಗಳದ್ದೇ ಅಗ್ರಪಾಲು. ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 156 ಮಂದಿ ಅಫ್ಘಾನ್ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದ ಮೂಲಕ ಅರ್ಜಿ ಸಲ್ಲಿಸಿದ ಸಾವಿರ ವಿದ್ಯಾರ್ಥಿಗಳಲ್ಲಿ 156 ಮಂದಿ ಅಘ್ಫಾನ್ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

 ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ

ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ

156 ವಿದ್ಯಾರ್ಥಿಗಳ ಪೈಕಿ ಯು.ಜಿ ಕೋರ್ಸ್‌ಗಳಿಗೆ 33, ಪಿಎಚ್‌ಡಿಗೆ 14 ಹಾಗೂ ಪಿ.ಜಿ ಕೋರ್ಸ್‌ಗಳನ್ನು ಆಯ್ಕೆ ಮಾಡಿದವರ ಸಂಖ್ಯೆ ಶತಕ ಮೀರಿರುವುದು ವಿಶೇಷವಾಗಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವ ಪ್ರೊ.ಪಿ.ಎಲ್. ಧರ್ಮ, "ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿ ಅತೀ ಹೆಚ್ಚು ಅಫ್ಘಾನ್ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅಫ್ಘಾನ್ ವಿದ್ಯಾರ್ಥಿಗಳೂ ತುಂಬಾ ಖುಷಿಯಿಂದ ವಿಶ್ವವಿದ್ಯಾನಿಲಯಕ್ಕೆ ಬರುತ್ತಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ,'' ಎಂದು ಹೇಳಿದ್ದಾರೆ.‌

 ಮಂಗಳೂರು ವಿವಿ ಬಗ್ಗೆ ಉತ್ತಮ ಅಭಿಪ್ರಾಯ

ಮಂಗಳೂರು ವಿವಿ ಬಗ್ಗೆ ಉತ್ತಮ ಅಭಿಪ್ರಾಯ

"ಹಿಂದಿನ ಶೈಕ್ಷಣಿಕ ವರ್ಷದಲ್ಲಿ 53 ಮಂದಿ ಅಪ್ಘಾನ್ ವಿದ್ಯಾರ್ಥಿಗಳಿದ್ದು, ಮಂಗಳೂರು ವಿವಿ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಅಲ್ಲದೇ ಇಲ್ಲಿನ ಸಂಸ್ಕೃತಿ, ವಾತಾವರಣವು ಅಫ್ಘಾನ್ ವಿದ್ಯಾರ್ಥಿಗಳಿಗೆ ಹೆಚ್ಚು ಇಷ್ಟವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅಫ್ಘಾನ್ ವಿದ್ಯಾರ್ಥಿಗಳ ನೋಂದಣಿ ಜಾಸ್ತಿಯಾಗಲು ಕಾರಣವಾಗಿದೆ. ಹೀಗಾಗಿಯೇ ಇಲ್ಲಿ ಕಲಿತು ಹೋಗುತ್ತಿರುವ ವಿದ್ಯಾರ್ಥಿಗಳೇ ತಮ್ಮ ದೇಶದ ಸ್ನೇಹಿತರಿಗೆ ಮಂಗಳೂರು ವಿವಿ ಆಯ್ಕೆ ಮಾಡುವಂತೆ ಸಲಹೆಯನ್ನೂ ನೀಡುತ್ತಿದ್ದಾರೆ," ಅನ್ನುವುದು ಅಫ್ಘಾನ್ ವಿದ್ಯಾರ್ಥಿ ಮುಖಂಡ ಸೈಯದ್ ಅನ್ವರ್ ಮಾತು.

 ಅಹವಾಲು ಸ್ವೀಕರಿಸಿದ್ದ ಪೊಲೀಸ್ ಕಮೀಷನರ್

ಅಹವಾಲು ಸ್ವೀಕರಿಸಿದ್ದ ಪೊಲೀಸ್ ಕಮೀಷನರ್

ಮಂಗಳೂರಿನಲ್ಲಿ ಅಫ್ಘಾನ್ ವಿದ್ಯಾರ್ಥಿಗಳ ಒಕ್ಕೂಟ ಮಾಡಲಾಗಿದೆ. ಇತ್ತೀಚೆಗಷ್ಟೇ ತಮ್ಮ ದೇಶದಲ್ಲಾದ ದಿಢೀರ್ ಬದಲಾವಣೆ ಬಗ್ಗೆ ಅಫ್ಗಾನ್ ವಿದ್ಯಾರ್ಥಿಗಳು ಗೊಂದಲಕ್ಕೊಳಗಾದಾಗ ನಗರ ಪೊಲೀಸ್ ಕಮೀಷನರ್ ತಮ್ಮ ಕಚೇರಿಗೆ ಕರೆದು ಅವರ ಅಹವಾಲು ಸ್ವೀಕರಿಸಿದ್ದರು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಿಟ್ಟುಸಿರುವ ಬಿಡುವಂತಾಗಿತ್ತು. ಇದೇ ಬೆನ್ನಿಗೆ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಅಪ್ಘಾನ್ ವಿದ್ಯಾರ್ಥಿಗಳ ದಾಖಲೆಯ ಅರ್ಜಿ ಸಲ್ಲಿಕೆಯಾಗಿದ್ದು, ತನ್ನ ದೇಶದಲ್ಲಿ ಬಂದೂಕಿನ ಸದ್ದು ನಿತ್ಯ ನಿರಂತರವಾಗಿ ಮೊಳಗುತ್ತಿದ್ದರೂ, ಜ್ಞಾನವನ್ನು ಹೆಚ್ಚಿಸುವುದಕ್ಕೆ ಅಫ್ಘಾನ್ ವಿದ್ಯಾರ್ಥಿಗಳು ಮಂಗಳೂರಿನತ್ತ ಮುಖ ಮಾಡಿರೋದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+