ಸುಳ್ಯದಲ್ಲಿ ಪೊಲೀಸರ ಕಣ್ತಪ್ಪಿಸಿ ಕುಖ್ಯಾತ ಆರೋಪಿ ಎಸ್ಕೇಪ್

ಮಂಗಳೂರು, ಸೆಪ್ಟೆಂಬರ್.14: ಕುಖ್ಯಾತ ಆರೋಪಿಯೊಬ್ಬ ಪೋಲೀಸರ ಕೈಯಿಂದ ತಪ್ಪಿಸಿಕೊಂಡ ಘಟನೆ ಶುಕ್ರವಾರ ಸುಳ್ಯದಲ್ಲಿ ನಡೆದಿದೆ. ಆರೋಪಿಯ ಹೆಸರು ಅಬ್ದುಲ್ ಅಜೀಜ್ ( 40). ಈತನನ್ನು ಕೇರಳದ ಕಾಞಂಗಾಡ್ ಸಬ್ ಜೈಲಿನಲ್ಲಿ ಇರಿಸಲಾಗಿತ್ತು.

ಸುಳ್ಯದಲ್ಲಿ ನಡೆದ ಬಿಎಸ್ಎನ್ಎಲ್ ಕಛೇರಿ ಕಳವು ಪ್ರಕರಣದಲ್ಲಿ ಅಬ್ದುಲ್ ಅಜೀಜ್ ನನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಸುಳ್ಯ ನ್ಯಾಯಾಲಯಕ್ಕೆ ಕರೆತಂದ ಸಂದರ್ಭದಲ್ಲಿ ಆತ ಬಸ್ ನಿಲ್ದಾಣದಿಂದ ಎಸ್ಕೇಪ್ ಆಗಿದ್ದಾನೆ.

ಅಬ್ದುಲ್ ಅಜೀಜ್ ಸುಳ್ಯದ ಅಜ್ಜಾವರ ನಿವಾಸಿಯಾಗಿದ್ದು, ಕೇರಳದಲ್ಲಿ ನಡೆದ ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಸುಳ್ಯದ ಪ್ರಕರಣ ಸಂಬಂಧ ಸುಳ್ಯದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ ಪೊಲೀಸರ ಕೈಯ್ಯಿಂದ ಈತ ತಪ್ಪಿಸಿಕೊಂಡಿದ್ದಾನೆ.

Abdul Aziz Sullia

ಆರೋಪಿ ಹುಡುಕಾಟಕ್ಕಾಗಿ ಸುಳ್ಯದಾದ್ಯಂತ ನಾಕಾಬಂಧಿ ಹಾಕಲಾಗಿದೆ.

ಒಡವೆ ಕಳ್ಳತನ

ಬೈಕ್ ಅಡ್ಡಗಟ್ಟಿ ದಂಪತಿ ಕಣ್ಣಿಗೆ ಖಾರದ ಪುಡಿ ಎರಚಿ ಮೈಮೇಲಿದ್ದ ಒಡವೆ ಕಳ್ಳತನ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಬಳಿ ನಡೆದಿದೆ. ತೊರಗನದೊಡ್ಡಿ ಗ್ರಾಮದ ವೆಂಕಟೇಶಪ್ಪ ಹಾಗೂ ಲಕ್ಷ್ಮಿದೇವಮ್ಮ ದಂಪತಿಯ ಒಡವೆಯನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಮದುವೆ ಮುಗಿಸಿಕೊಂಡು ರಾತ್ರಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಅಪರಿಚಿತರು ಗಾಡಿ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಒಡವೆ ದೋಚಿದ್ದಾರೆ. ಸುಮಾರು ಮೂರು ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಬಂಗಾರಪೇಟೆ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+