ಮನೆಯ ಮಹಡಿಯಲ್ಲಿ ನೀರು ಹಾಕುವಾಗ ಆಯ ತಪ್ಪಿ ಬಿದ್ದು ಸಾವು

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮಾರ್ಚ್ 17: ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ವಿದ್ಯಾರ್ಥಿಯೊಬ್ಬ ಮನೆಯ ಮೇಲೆ ನೂತನವಾಗಿ ನಿರ್ಮಿಸುತ್ತಿದ್ದ ಮಹಡಿಯಲ್ಲಿ ನೀರು ಹಾಕುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು, ಮೃತಪಟ್ಟಿದ್ದಾನೆ.

ಬಿ.ಪ್ರಸಾದ್ (22) ಮೃತ ವಿದ್ಯಾರ್ಥಿ. ಈತ ಭಾರತಿ ಕಾಲೇಜಿನಲ್ಲಿ 3ನೇ ವರ್ಷದ ಬಿ.ಕಾಂ. ವಿದ್ಯಾರ್ಥಿಯಾಗಿದ್ದು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ಸದಸ್ಯ ಆರ್.ಗೋಪಾಲ್ ಮಗನಾಗಿದ್ದಾನೆ.[ನೈಜೀರಿಯಾ ಪ್ರಜೆಯನ್ನು ಹೊಡೆದು ಕೊಂದರಾ ಬೆಂಗಳೂರು ಪೊಲೀಸರು?]

Young man dies after fell from upstairs

ಕೆ.ಎಂ.ದೊಡ್ಡಿ 3ನೇ ಬ್ಲಾಕ್ ನಲ್ಲಿ ನೂತನವಾಗಿ ನಿರ್ಮಿಸುತ್ತಿದ್ದ ಮನೆಯ 3ನೇ ಮಹಡಿಗೆ ನೀರು ಹಾಕಲೆಂದು ಪ್ರಸಾದ್ ಹೋಗಿದ್ದ. ನೀರು ಹಾಕುವ ಸಂದರ್ಭದಲ್ಲಿ ಕಾಲು ಜಾರಿದ್ದು, ಇದರಿಂದ ಆಯ ತಪ್ಪಿದ ಆತ ನೆಲಕ್ಕೆ ಬಿದ್ದಿದ್ದಾನೆ.[ಬದುಕಿ ಅಚ್ಚರಿ ಹುಟ್ಟಿಸಿದ್ದ ಹುಬ್ಬಳ್ಳಿಯ ಹುಡುಗ ಸತ್ತೇ ಹೋದ!]

ಗಂಭೀರ ಗಾಯಗೊಂಡಿದ್ದ ಆತನನ್ನು ಕೂಡಲೇ ಮೈಸೂರಿಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
B Prasad- A 22 year young man dies after fell from upstairs at KM Doddi, Mandya district.
Please Wait while comments are loading...