ಕೆಆರ್‌ಎಸ್‌ಗೆ ಶತಕದ ಸಂಭ್ರಮ, 100 ಅಡಿ ತಲುಪಿದ ನೀರಿನ ಮಟ್ಟ

Posted By: Gururaj
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 05 : ಕಾವೇರಿ ನದಿ ಪಾತ್ರದ ಜನರಿಗೆ ಸಂತಸದ ಸುದ್ದಿ. ಕೃಷ್ಣರಾಜ ಸಾಗರ (ಕೆಆರ್‌ಎಸ್) ನೀರಿನ ಮಟ್ಟ 100 ಅಡಿಗೆ ತಲುಪಿದೆ. ಒಂದು ಬೆಳೆ ಬೆಳೆದುಕೊಳ್ಳಲು ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ

ಮರುಕಳಿಸಲಿದೆಯೇ ಕಾವೇರಿ ಕಣಿವೆಯಲ್ಲಿ ಬರಗಾಲ ಪರ್ವ!

ಸೋಮವಾರ ಸಂಜೆ ಕೆಆರ್‌ಎಸ್ ನೀರಿನ ಮಟ್ಟ 100.20 ಅಡಿಗೆ ತಲುಪಿತು. ಜಲಾಶಯಕ್ಕೆ 9,853 ಕ್ಯುಸೆಕ್ ಒಳ ಹರಿವು ಇದ್ದು, 6 ಸಾವಿರ ಕ್ಯುಸೆಕ್ ಹೊರಹರಿವಿದೆ. ಕೊಡಗು ಜಿಲ್ಲೆಯಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.

Water level at KRS dam reaches 100 feet

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿ. ಎರಡು ವರ್ಷಗಳಿಂದ ಜಲಾಶಯ ತುಂಬಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೂ ನೀರು ಹರಿಸಬೇಕಾಗುವುದರಿಂದ ಜಲಾಶಯ ಸಂಪೂರ್ಣವಾಗಿ ಬರಿದಾಗಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿ 93 ಅಡಿ ನೀರಿತ್ತು.

ಆಗಸ್ಟ್ 15ರಿಂದ 20 ದಿನಗಳ ಕಾಲ ನಾಲೆಯಲ್ಲಿ ನೀರು ಹರಿಸಲಾಗಿದೆ. ಆದರೆ, ಭತ್ತ ಮತ್ತು ಕಬ್ಬು ಬೆಳೆಯಬಾರದು ಎಂದು ಷರತ್ತು ವಿಧಿಸಲಾಗಿದೆ. ಈಗ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಿದ್ದು, ರೈತರು ನಾಲೆಗಳಲ್ಲಿ ನೀರು ಹರಿಸಿ ಎಂದು ಒತ್ತಾಯಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heavy rain in Cauvery river catchment area. Water level in Krishnaraja Sagar reservoir, Srirangapatna reached the 100 feet on September 4, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ