ಬೆಳ್ಳೂರು : ಮೇಲ್ಸೇತುವೆಯಿಂದ ಬಿದ್ದ ಕಾರು, ಇಬ್ಬರು ಸಾವು

Posted By:
Subscribe to Oneindia Kannada

ಮಂಡ್ಯ, ಅಕ್ಟೋಬರ್ 01: ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿಯ ಮೇಲ್ಸೇತುವೆಯಿಂದ ಇನ್ನೋವಾ ಕಾರೊಂದು ಕೆಳಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, 6 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಇನ್ನೊವಾ ಕಾರು ಪಲ್ಟಿ ಹೊಡೆದು ಕೆಳಗೆ ಬಿದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ. ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 48ರ ಚಲಿಸುವಾಗ ಮುಂದಿದ್ದ ಬೈಕೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ವಿಫಲವಾದಾಗ ಅಪಘಾತ ಸಂಭವಿಸಿದೆ ಎಂದು ನಾಗಮಂಗಲ ವಿಭಾಗದ ಎಸ್ ಪಿ ಎಚ್ ಎನ್ ಜನಾರ್ದನ್ ಅವರು ಹೇಳಿದ್ದಾರೆ.

Two killed, six injured SUV Falls Off Bellur Cross Flyover

ಮೃತ ಪಟ್ಟವರನ್ನು ಜಗನ್ನಾಥ್ ಶೆಟ್ಟಿ(45) ಹಾಗೂ ಶೈಲಜಾ(40) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಕುಶಲಾಕ್ಷಿ, ರಾಜಶೆಟ್ಟಿ, ಶ್ವೇತಾ, ಮನುಶಾ, ಪ್ರೇಕ್ಷಾ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಆದಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two persons were killed and six others injured after their sports-utility-vehicle fell down from the flyover near Bellur Cross, on National Highway 48 in Nagamangala taluk of Mandya district on Friday night.
Please Wait while comments are loading...