ಮುರುಡೇಶ್ವರದಲ್ಲಿ ಕೆಆರ್ ಪೇಟೆಯ ಮೂವರು ಸಮುದ್ರ ಪಾಲು

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಅಕ್ಟೋಬರ್ 13 : ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ತೆರಳಿದ್ದ ಕೆಆರ್ ಪೇಟೆಯ ಮೂವರು ಯುವಕರು ಸಮುದ್ರ ಪಾಲಾಗಿರುವ ಘಟನೆ ಗುರುವಾರ ನಡೆದಿದೆ.

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿಯ ಕುಮಾರ್ (20), ಬೇಲದಕೆರೆ ಕಾರ್ತಿಕ್ (19) ಮತ್ತು ಗುಡ್ಡೇನಹಳ್ಳಿಯ ಪುನೀತ್ (26) ದುರಂತ ಸಾವಿಗೀಡಾದ ಯುವಕರು.


ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಕೆ.ಆರ್.ಪೇಟೆಯಿಂದ 9 ಮಂದಿ ತೆರಳಿದ್ದರು. ಗುರುವಾರ ಬೆಳಗ್ಗೆ ಮುರುಡೇಶ್ವರ ತಲುಪಿದ ಈ ತಂಡ, ಸಮುದ್ರದಲ್ಲಿ ಈಜಲೆಂದು ನೀರಿಗೆ ಇಳಿದಿದೆ. ಈ ಸಂದರ್ಭ ಕುಮಾರ್, ಕಾರ್ತಿಕ್ ಹಾಗೂ ಪುನೀತ್ ಅಲೆಯ ಸೆಳೆತಕ್ಕೆ ಸಿಲುಕಿ ಸಮುದ್ರದ ಪಾಲಾಗಿದ್ದಾರೆ.

ಸ್ಥಳಕ್ಕೆ ಮುರುಡೇಶ್ವರ ಠಾಣೆಯ ಪೊಲೀಸರು ಹಾಗೂ ನುರಿತ ಈಜು ತಜ್ಞರು ತೆರಳಿದ್ದು, ಯುವಕರ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮುರುಡೇಶ್ವರ ಬೀಚ್ ಸುಂದರವಾಗಿದ್ದರೂ ಸ್ನಾನ ಮಾಡಲು ಅತ್ಯಂತ ಅಪಾಯಕಾರಿ ಎಂದು ತಿಳಿದಿದ್ದರೂ ಹಲವಾರು ಪ್ರವಾಸಿಗರು ಸಾಹನಕ್ಕಿಳಿದು ಪ್ರಾಣ ತೆತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three youth from KR Pet in Mandya district drowned in sea in Murudeshwar beach on Thursday. 9 people from KR Pet had gone to many tourist places in Uttara Kannada district. While taking bath 3 were pulled by huge waves. Search is on the bodies.
Please Wait while comments are loading...