ಅಭಿಮಾನಿಗಳ ಆಸೆ ಸೋಲಬಾರದು, ರಾಜಕೀಯ ಪ್ರವೇಶ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

Recommended Video

      Lok Sabha Elections 2019 : ಅಭಿಮಾನಿಗಳ ಆಸೆ ಸೋಲಬಾರದು, ರಾಜಕೀಯ ಪ್ರವೇಶ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ..!

      ಮಂಡ್ಯ, ಫೆಬ್ರವರಿ 10: ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದು, ಅವರ ಆಸೆ ಸೋಲಬಾರದು ಎಂದು ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದರು.

      ಆದಿಚುಂಚನಗಿರಿಯಲ್ಲಿ ಮಾತನಾಡಿದ ಅವರು, ಅಭಿಮಾನಿಗಳು ತುಂಬಾ ಆಸೆ ಇಟ್ಟುಕೊಂಡು ಒತ್ತಡ ಹಾಕುತ್ತಿದ್ದಾರೆ. ಅಭಿಮಾನಿಗಳ ಆಸೆ ಸೋಲಬಾರದು ಎನ್ನುವ ಮೂಲಕ ತಮ್ಮ ರಾಜಕೀಯ ಪ್ರವೇಶವನ್ನು ಸಮರ್ಥಿಸಿಕೊಂಡರು.

      ನಾನು ಸ್ಪರ್ಧೆ ಮಾಡಿದರೆ ಮಂಡ್ಯದಿಂದ ಮಾತ್ರ. ಬೇರೆ ಇನ್ಯಾವ ಕ್ಷೇತ್ರಕ್ಕೂ ಹೋಗಲ್ಲ.ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಗೊಂದಲ ಇದೆ. ನಿರ್ಧರಿಸಿ ಅಂತಿಮ ತೀರ್ಮಾನ ಹೇಳುತ್ತೇನೆ ಎಂದರು.

      Sumalatha Ambareesh spoke about political entry

      ಶ್ರೀಕಂಠೇಗೌಡ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿ, ಆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಶ್ರೀಗಳೊಂದಿಗೆ ಬೇರೇನೂ ಚರ್ಚೆ ಮಾಡಿಲ್ಲ. 2 ತಿಂಗಳ ಹಿಂದೆಯೇ ಭೇಟಿ ಕೊಡಬೇಕಿತ್ತು. ಇವತ್ತು ಕಾಲ ಕೂಡಿ ಬಂದಿದೆ. ಅಭಿಷೇಕ್ ನಟಿಸಿದ ಚಿತ್ರದ ಫಸ್ಟ್ ಟೀಸರ್ ಇದೇ ತಿಂಗಳ 14ರಂದು ರಿಲೀಸ್ ಆಗುತ್ತಿದೆ.‌‌ ಹೀಗಾಗಿ ದೇವರ ದರ್ಶನ, ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+