ಮಳವಳ್ಳಿ: ಸಿಡಿಹಬ್ಬದ ಸಂಭ್ರಮಾಚರಣೆಗೆ ಸಕಲ ಸಿದ್ಧತೆ
ಇತಿಹಾಸ ಪ್ರಸಿದ್ಧ ಮಳವಳ್ಳಿ ಸಿಡಿ ಹಬ್ಬ ಜನವರಿ 31ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 4ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಲಕ್ಷಾಂತರ ಭಕ್ತರು ಈ ಸಿಡಿ ಹಬ್ಬದಲ್ಲಿ ಭಾಗಿಯಾಗಲಿದ್ದು, ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮಂಡ್ಯ ಫೆಬ್ರವರಿ 1: ಮಳವಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ದ ಗ್ರಾಮದೇವತೆ 'ಸಿಡಿಹಬ್ಬ'ವು ಜನವರಿ 31 ರಿಂದ ದಂಡಿನ ಮಾರಮ್ಮನ ಹಬ್ಬದೊಂದಿಗೆ ಆರಂಭಗೊಂಡಿದ್ದು, ಫೆಬ್ರವರಿ 4ರವರೆಗೆ 5 ದಿನಗಳ ಕಾಲ ಸಡಗರ-ಸಂಭ್ರಮದಿಂದ ನಡೆಯಲಿದೆ.
ತಾಲೂಕಿನೆಲ್ಲೆಡೆ ಹಳ್ಳಿ-ಹಳ್ಳಿಗಳಲ್ಲಿ ಈ ಹಬ್ಬದ ಸಿದ್ಧತೆ ಜೋರಾಗಿದ್ದು, ಸರ್ವ ಜನಾಂಗದವರು ಸುಮಾರು ಒಂದು ವಾರಗಳ ಕಾಲ ಸಂಪ್ರದಾಯವಾಗಿ ಬಂದ ಬಳುವಳಿಯಾಗಿದೆ. ಪ್ರತಿವರ್ಷದಂತೆ ಸಿಡಿಹಬ್ಬವನ್ನು ಮುಡುಕುತೊರೆ ಜಾತ್ರೆಯಂದು ನಿಗದಿಪಡಿಸಲಾಗುತ್ತದೆ. ಪೂರ್ಣ ಬೆಳದಿಂಗಳ ಶುಕ್ರವಾರ ಮತ್ತು ಶನಿವಾರದ ದಿನಗಳಲ್ಲಿ ಹಬ್ಬವನ್ನು ಆಚರಿಸುವುದು ವಾಡಿಕೆಯಾಗಿದೆ.
ಸಿಡಿ ಹಬ್ಬದ ಆಚರಣೆ ಮಾಡುವ ಬಗ್ಗೆ ಸಂಪ್ರದಾಯದಂತೆ ನಿಗದಿಪಡಿಸಿದ ವ್ಯಕ್ತಿಯಿಂದ ಎಂಟು ದಿನಗಳ ಮುಂಚಿತವಾಗಿ ಭಕ್ತಿಪೂರ್ವಕವಾಗಿ ಸಾರಲಾಗುವುದು. ಪ್ರತೀತಿಯಂತೆ ಹಬ್ಬದ ದಿನದಲ್ಲಿ ಈ ದೇವತೆಗಳಿಗೆ ಶ್ರದ್ಧಾ-ಭಕ್ತಿಯಿಂದ ವಿವಿಧ ಹೋಮಗಳು ಮತ್ತು ಪೂಜಾ ಕಾರ್ಯಗಳು ನಡೆಯಲಿದೆ.

ಈ ವರ್ಷದ ಸಿಡಿ ಹಬ್ಬ ಆರಂಭ
ಈಗಾಗಲೇ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ದೇವಸ್ಥಾನಗಳನ್ನು ಲಕ್ಷಾಂತರ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಇಲ್ಲಿ ನಂಬಿದ ಭಕ್ತರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವುದು ಲಕ್ಷಾಂತರ ಭಕ್ತರ ನಂಬಿಕೆಯಾಗಿದೆ. ಈ ಬಾರಿ ಇತಿಹಾಸ ಪ್ರಸಿದ್ಧ ಸ್ಮಾರಕಗಳಾದ ಕೋಟೆಯ ಹೆಬ್ಬಾಗಿಲು ಸೇರಿದಂತೆ ಹಲವು ಇತಿಹಾಸ ಮರುಕಳಿಸುವ ಕುರುಹುಗಳನ್ನು ಪುನರುಜ್ಜೀವನ ಗೊಳಿಸಿ ಹಬ್ಬಕ್ಕೆ ಸಿದ್ಧಗೊಳಿಸುವ ಕಾರ್ಯದಲ್ಲಿ ಸ್ಥಳೀಯ ಮುಖಂಡರು ಹಗಲು ರಾತ್ರಿ ಶ್ರಮವಹಿಸುತ್ತಿದ್ದಾರೆ.
ಇನ್ನು ಈ ಬಾರಿ ಜನವರಿ 31ರಂದು ದಂಡಿನ ಮಾರಮ್ಮನ ಹಬ್ಬವನ್ನು ಆಚರಿಸಲಾಗಿದೆ. ಅಂದು ಪ್ರತಿ ಮನೆ ಗೃಹಿಣಿಯರು ಮನೆಯನ್ನು ಶುಭ್ರಗೊಳಿಸಿ, ಹೊಸ ಬಟ್ಟೆ ತೊಟ್ಟು, ಸಡಗರ-ಸಂಭ್ರಮದಿಂದ ತಂಬಿಟ್ಟು ಆರತಿ ಮಾಡಿ ದಂಡಿನ ಮಾರಮ್ಮನಿಗೆ ಪೂಜೆ ಸಲ್ಲಿಸುವುದರೊಂದಿಗೆ ಸಿಡಿಹಬ್ಬ ಅರಂಭವಾಗಿದೆ.

ಪಟ್ಟಲದಮ್ಮ ದೇವರ ಮೇಲೆ ಜನರಿಗಿರುವ ನಂಬಿಕೆ ಏನು..?
ಪಟ್ಟಣದಲ್ಲಿರುವ ಪಟ್ಟಲದಮ್ಮ, ದಂಡಿನಮಾರಮ್ಮ ದೇವತೆಗಳು ಅಕ್ಕತಂಗಿಯರು. ಹಿರಿಯರ ಪ್ರಕಾರ 300 ವರ್ಷಗಳ ಹಿಂದೆ ಶ್ರಿರಂಗಪಟ್ಟಣದಿಂದ ಮಳವಳ್ಳಿಗೆ ಅಡಿಕೆ ವ್ಯಾಪಾರ ಮಾಡಲು ಬರುತ್ತಿದ್ದ ಮಂಚಟಪ್ಪನವರ ಎತ್ತಿನಗಾಡಿಯಲ್ಲಿ ಬಂದ ಈ ಅಕ್ಕತಂಗಿಯರು ಗ್ರಾಮದಲ್ಲಿ ನೆಲೆಸಿದರಂತೆ. ಇದರಂತೆ ಈ ದೇವತೆಗಳಿಗೆ ಮಂಚಟಪ್ಪನವರ ಕುಟುಂಬದಿಂದಲೇ ಪ್ರಥಮ ಪೂಜೆ ನಡೆಯುವ ಸಂಪ್ರಾದಾಯವಿದೆ. ಈ ಹಿಂದೆ ಮಳವಳ್ಳಿ ಗ್ರಾಮಕ್ಕೆ ನೆರೆಹೊರೆಯ ಪಾಳೆಯಗಾರರ ಹಾವಳಿಯಿಂದ ಜನರಲ್ಲಿ ನೆಮ್ಮದಿ ಇರಲಿಲ್ಲ ಆಗ ಜನರೆಲ್ಲ ಪಟ್ಟಲದಮ್ಮ ದೇವತೆಗೆ ಮೊರೆಹೊಕ್ಕಾಗ ದೇವತೆಯು ಅವತಾರ ತಾಳಿ ಪಾಳೇಯಗಾರರನ್ನು ಹಿಮ್ಮೇಟಿಸಿ, ಶಾಂತಿ ನೆಲೆಸುವಂತೆ ಮಾಡಿದಳು ಎನ್ನುವ ಪ್ರತೀತಿಯಿದೆ.
ಹಿರಿಯರ ಹೇಳಿಕೆಯಂತೆ ಮೈಸೂರು ರಾಜನ ಸೈನಿಕರು ದಂಡು ಗ್ರಾಮದ ಉತ್ತರಗಡಿಯಲ್ಲಿ ವಿಶ್ರಾಂತಿಯಲ್ಲಿದ್ದಾಗ (ಈಗಿನ ಮದ್ದೂರು-ಮಳವಳ್ಳಿ ರಸ್ತೆಯಲ್ಲಿರುವ ದಂಡಿನಮಾರಮ್ಮ ದೇವಸ್ಥಾನದ ಬಳಿ)ಹೊರಗಿನ ಪ್ಲೇಗ್, ಸಿಡುಬು,ಕಾಲಾರ ತಗುಲಿ ಬಳಲುತ್ತಿದ್ದಾಗ ಈ ಸೈನ್ಯದ ಅಥವಾ ದಂಡಿನ ದಳಪತಿ ಗ್ರಾಮ ದೇವತೆಗೆ ಮೊರೆ ಹೋಗಿದ್ದಾರೆ. ಪಟ್ಟಲದಮ್ಮ ದೇವತೆಯು ಇವರನ್ನು ಪೀಡಿಸುತ್ತಿದ್ದ ಕ್ಷುದ್ರ ಮಾರಿಯರನ್ನುಸಂಹರಿಸಿ ಈ ದಂಡಿನ ಸೈನಿಕರನ್ನು ರಕ್ಷಿಸಿದಳಂತೆ. ಅಂದಿನಿಂದ ದಂಡಿನಮಾರಮ್ಮ ಎಂದು ಕರೆಯಲಾಗುತ್ತಿದೆ. ಇನ್ನು ವಿಜಯದ ಸಂಕೇತವಾಗಿ ಜನರು ಸಿಡಿಹಬ್ಬವನ್ನು ಅಚರಿಸಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಸಿಡಿ ಹಬ್ಬದಲ್ಲಿನ ವಿಶೇಷತೆ ಏನು..?
ಸಿಡಿರಣವನ್ನು ಸುಮಾರು 48 ರಿಂದ 50 ಆಡಿ ಉದ್ದವಿರುವ ಒಂದೇ ಮರದಿಂದ ತಯಾರು ಮಾಡಲಾಗುವುದು. ಹಿಂದಿನ ಕಾಲದಲ್ಲಿ ಸಿಡಿರಣಕ್ಕೆ ಹರಕೆ ಹೊತ್ತ ವ್ಯಕ್ತಿಯೊಬ್ಬನ ಬೆನ್ನಿಗೆ ಹಗ್ಗವನ್ನು ಕಟ್ಟಿ ಸಿಡಿ ಕಂಬಕ್ಕೆ ನೇತುಹಾಕಿ ಉತ್ಸವ ಆಚರಿಸಲಾಗುತಿತ್ತು. ಆದರೆ ಒಂದು ಬಾರಿ ಸಿಡಿಗೆ ಕಟ್ಟಿದ್ದ ವ್ಯಕ್ತಿ ಆಕಸ್ಮಿಕವಾಗಿ ಸಾವಿಗೀಡಾದ ನಂತರದ ವರ್ಷಗಳಲ್ಲಿ ಮಾನವನ ಪ್ರತಿಮೆಯನ್ನು ಸಿಡಿರಣಕ್ಕೆ ಕಟ್ಟಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಶುಕ್ರವಾರ ರಾತ್ರಿ ಸಿಡಿರಣವನ್ನು ಶೃಂಗರಿಸಿ ಪ್ರತೀತಿಯಂತೆ ಎಲ್ಲಾ ಜನಾಂಗದ ಮುಖಂಡರ ಸಮ್ಮುಖದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾನಪದ ನೃತ್ಯ, ಕೋಲಾಟ, ಸಾಮಾಜಿಕ ನಾಟಕ, ಮೆರವಣಿಗೆ, ಸಿನಿಮಾ-ರಸಮಂಜರಿ, ನಾಟಕ, ಕುಸ್ತಿ, ಟೆನಿಸ್ ಪಂದ್ಯಾವಳಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.

ಸಿಡಿ ಹಬ್ಬಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್
ಸಿಡಿರಣವು ಪ್ರಮುಖ ಬೀದಿಗಳಲ್ಲಿ ಸಂಚರಿಸಿಕೊಂಡು ಫೆಬ್ರವರಿ 4 ರಂದು ಶನಿವಾರ ಬೆಳಗ್ಗೆ ದೊಡ್ಡಕೆರೆ ಬಳಿಯಿರುವ ಪಟ್ಟಲದಮ್ಮ ದೇವಸ್ಥಾನಕ್ಕೆ ಬರುತ್ತದೆ. ಇದನ್ನು ನೋಡಲು ಕಿಕ್ಕಿರಿದು ನಿಂತ ಜನಸ್ತೋಮ ಹಾಗೂ ನವ-ದಂಪತಿಗಳು ಬಾಳೆಹಣ್ಣನ್ನು ಸಿಡಿಗೆ ಎಸೆಯುತ್ತಾರೆ. ದೇವಿಗೆ ಪೊಜೆ ಸಲ್ಲಿಸಿ ಸಿಡಿರಣವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕುವುದರೊಂದಿಗೆ ಈ ಹಬ್ಬವು ನಡೆಯುತ್ತದೆ. ನಂತರ ಪಟ್ಟಲದಮ್ಮ ದೇವಸ್ಥಾನದ ಮುಂದೆ ಕೊಂಡೋತ್ಸವ ನಡೆಯುತ್ತದೆ. ಈ ವೇಳೆ ತಾಲೂಕಿನ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ.
ಈ ಬಾರಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಸಿಡಿ ಹಬ್ಬದ ಸಿದ್ಧತೆಗಳು ನಡೆಯುತ್ತಿದ್ದು, ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications