ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್; ಗಮನ ಸೆಳೆದ ಮಂಡ್ಯ ಪೊಲೀಸರ ಕಾರ್ಯ ವೈಖರಿ

|
Google Oneindia Kannada News

ಮಂಡ್ಯ, ಏಪ್ರಿಲ್ 21 : ಕೊರೊನಾ ಹರಡದಂತೆ ತಡೆಯಲು ವೈದ್ಯರು, ಪೊಲೀಸರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ.

ಮಂಡ್ಯ ಪೊಲೀಸರು ತಮ್ಮ ವಿಶಿಷ್ಟ ಶೈಲಿಯ ಕರ್ತವ್ಯದಿಂದ ಜನರ ಗಮನ ಸೆಳೆಯುತ್ತಿದ್ದಾರೆ. ಜನರಿಗೆ ನೆರವಾಗುವ ಜೊತೆಗೆ ನಿಯಮಗಳನ್ನು ಪಾಲನೆ ಮಾಡಿ ಎಂದು ಅರಿವು ಮೂಡಿಸುತ್ತಿದ್ದಾರೆ.

 ಮಂಡ್ಯ ರೈತರಿಂದಲೂ ತರಕಾರಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್ ಮಂಡ್ಯ ರೈತರಿಂದಲೂ ತರಕಾರಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್

ಪೊಲೀಸರು ಹೊಡೆಯುತ್ತಾರೆ, ಜನರಿಗೆ ತೊಂದರೆ ಕೊಡುತ್ತಾರೆ ಎಂಬ ಆರೋಪಗಳ ನಡುವೆಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಅವರು ತಾವು ಮಾಡುವ ಯಾವುದೇ ಕಾರ್ಯಕ್ಕೂ ಪ್ರಚಾರ ಬಯಸುವುದಿಲ್ಲ. ಜನರ ಸುರಕ್ಷತೆಯೇ ಅವರಿಗೆ ಮುಖ್ಯ.

ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್ ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್

Please Support For Police During Lock Down

ಮಂಡ್ಯದ ಮಹಿಳಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಆನಂದೇಗೌಡ ತಮ್ಮ ತೋಟದಲ್ಲಿ ಬೆಳೆದ ತರಕಾರಿಯನ್ನು ಮಂಡ್ಯ ನಗರದ ಎಸ್. ಡಿ. ಜಯರಾಮ್‌ ಬಡಾವಣೆಯ ಬಡ ಜನರಿಗೆ ವಿತರಣೆ ಮಾಡಿದರು.

ಲಾಕ್ ಡೌನ್; ಬೆರಗುಗೊಳಿಸುವ ಬೆಂಗಳೂರಿನ ಚಿತ್ರಗಳು ಲಾಕ್ ಡೌನ್; ಬೆರಗುಗೊಳಿಸುವ ಬೆಂಗಳೂರಿನ ಚಿತ್ರಗಳು

ಕೆ.ಆರ್.ಪೇಟೆ ಪಟ್ಟಣದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಹಿಡಿದಿದ್ದಾರೆ. ಅವರಿಂದ ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಏರಿಯ ಸೋಪಾನಕಟ್ಟೆ ಬಳಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು.

Please Support For Police During Lock Down

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿ, ಬೈಕ್ ಸವಾರರಿಗೆ ಅವರ ತಪ್ಪನ್ನು ಮನವರಿಕೆ ಮಾಡಿಸಿ ಅವರುಗಳು ಮತ್ತೆ ಈ ರೀತಿಯ ತಪ್ಪು ಮಾಡದಂತೆ ಸೂಚನೆ ನೀಡಿ ಕಳುಹಿಸಿದರು.

English summary
Mandya police getting people support for their work during the lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X