ಮಂಡ್ಯಕ್ಕೆ ಮತ್ತೆ ಬರ್ತಾರೆ ನಿಖಿಲ್ ! ವಿಡಿಯೋ ಸಖತ್ ವೈರಲ್
Recommended Video
ಮಂಡ್ಯ, ಜೂನ್ 4: ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಸರು ಮಾಡಿದ ಕ್ಷೇತ್ರ ಮಂಡ್ಯ. ಇಲ್ಲಿ ನಿಖಿಲ್ ಹಾಗೂ ಸುಮಲತಾ ಎದುರಾಳಿಗಳಾಗಿ ಸ್ಪರ್ಧಿಸಿ, ಸುಮಲತಾ ಭರ್ಜರಿ ಗೆಲುವು ಸಾಧಿಸಿದರು. ಆದರೆ ಸೋತ ನಿಖಿಲ್ ಕುಮಾರಸ್ವಾಮಿ ಈಗೇನು ಮಾಡುತ್ತಿದ್ದಾರೆ ಅನ್ನೋ ಕುತೂಹಲ ಮಾತ್ರ ಜನರನ್ನು ಬಿಡಲಿಲ್ಲ. ಅವರಿಗೆ ಮಂಡ್ಯ ಮರೆತುಹೋಯ್ತ ? ಚುನಾವಣೆ ವೇಳೆ ಕೊಟ್ಟ ಭರವಸೆಗಳೆಲ್ಲವೂ ಸುಳ್ಳೇ ? ಹೀಗೆ ಕಾರ್ಯಕರ್ತರ ನೂರಾರು ಪ್ರಶ್ನೆಗಳಿಗೆ ಖುದ್ದು ಅವರೇ ಉತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ನಾನು ಮಂಡ್ಯ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಸುಮ್ಮನೆ ಕೂರುವುದಿಲ್ಲ. ನಾನು ಮೊದಲಿಗಿಂತ ತುಂಬಾ ಬದಲಾಗಿದ್ದೇನೆ. ನಾವು ಜನರನ್ನು ಮುಖತಃ ಭೇಟಿ ಮಾಡಿದರೆ ಮಾತ್ರ ವಾಸ್ತವ ಏನು ಎಂಬುದು ಗೊತ್ತಾಗುತ್ತದೆ. 8 ತಾಲ್ಲೂಕುಗಳನ್ನು 45-50 ದಿನ ಸುತ್ತಿದ ನಂತರ ಈ ವಿಚಾರ ನನಗೆ ಗೊತ್ತಾಗಿದೆ. ಬೇರೆ ಜಿಲ್ಲೆಗಳನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗ ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಮಂಡ್ಯದಲ್ಲಿ ಎರಡೂವರೆ ಎಕರೆ ನೀರಾವರಿ ಜಮೀನು ಖರೀದಿಸುತ್ತೇನೆ ಎಂದು ಹೇಳಿರುವ ನಿಖಿಲ್, ಮನೆ ಕಟ್ಟಿ ಮುಗಿಯುವವರೆಗೂ ಕಾಯುವುದಿಲ್ಲ, ಅಲ್ಲೇ ಶೆಡ್ ಹಾಕಿ ವಾಸಿಸುತ್ತೇನೆ. ಇದರ ಮೂಲಕ ನಾನು ಜನರ ಜೊತೆ ಒಡನಾಟ ಬೆಳೆಸಿಕೊಳ್ಳುತ್ತೇನೆ. ನಾನು ಹಿಂದೆ ಇದ್ದಿದ್ದಕ್ಕೂ, ಈಗ ಇರೋದಕ್ಕೂ ವ್ಯತ್ಯಾಸವಿದೆ. ಇಂದು ಮಂಡ್ಯದಲ್ಲಿ ಸೋಲು ಕಂಡಿದ್ದೇನೆ. ಎಲ್ಲೋ ಒಂದು ಕಡೆ ಜನರಿಗೆ ಬೇಸರವಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ.












Click it and Unblock the Notifications