ನಾಗಮಂಗಲ ಗಲಭೆ: ಸಂತ್ರಸ್ತರಿಗೆ ಪರಿಹಾರ ಘೋಷಸಿದ ಹೆಚ್‌ಡಿ ಕುಮಾರಸ್ವಾಮಿ

ಮಂಡ್ಯ ಸೆಪ್ಟೆಂಬರ್ 13: ನಾಗಮಂಗಲ ಗಲಭೆ ಸಂತ್ರಸ್ತರಿಗೆ ಎರಡು ಲಕ್ಷ ರೂಪಾಯಿವರೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪರಿಹಾರ ಘೋಷಣೆ ಮಾಡಿದರು. ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ನಡೆದ ಪ್ರದೇಶಕ್ಕೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. ಈ ಗಲಭೆಯಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ವೈಯಕ್ತಿಕ ನೆಲೆಯಿಂದ ಪರಿಹಾರ ವಿತರಣೆ ಮಾಡಿದರು.

ಬುಧವಾರ ರಾತ್ರಿ ನಡೆದ ನಾಗಮಂಗಲ ಗಲಭೆ ಪ್ರಕರಣದಲ್ಲಿ ವಾಹನ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದಾಗಿ ಆಸ್ತಪಾಸ್ತಿ ಕಳೆದುಕೊಂಡವರಿಗೆ ತಲಾ 25 ಸಾವಿರ ರೂಪಾಯಿಂದ 2 ಲಕ್ಷ ರೂಪಾಯಿವರೆಗೂ ಪರಿಹಾರ ವಿತರಣೆ ಮಾಡಿದರು. ಇದೇ ವೇಳೆ ಕಷ್ಟ ಹೇಳಿಕೊಂಡವರಿಗೂ ಹೆಚ್‌ಡಿಕೆ ನೆರವು ನೀಡಿದರು.

Nagamangala riot HD Kumaraswamy announced compensation for the victims

ಈ ಘಟನೆಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಅವರು ಕಿಡಿ ಕಾರಿದರು. ಗಲಾಟೆಯಲ್ಲಿ ಹಾನಿಯಾದ ಅಂಗಡಿ ಮಾಲೀಕರಿಗೆ ಪರಿಹಾರ ನೀಡುತ್ತಿದ್ದೇವೆ. ವೈಯಕ್ತಿವಾಗಿಯೂ ಆರ್ಥಿಕ ನೆರವು ನೀಡುತ್ತೇವೆ ಎಂದಿದ್ದಾರೆ. ಬಂಧನಕೊಳಗಾದವರ ಕುಟುಂಬಸ್ಥರು ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ವಿಡಿಯೋದಲ್ಲಿ ಇಲ್ಲ ಅಂದರೆ ವಾಪಸ್ ಕಳುಹಿಸುತ್ತೇವೆ ಎಂದಿದ್ದಾರೆ ಎಂದವರ ಅಳಲು ಆಳಿಸಿ ಎಲ್ಲವನ್ನೂ ಪರಿಶೀಲಿಸುವ ಭರವಸೆಯನ್ನು ಹೆಚ್‌ಡಿ ಕುಮಾರಸ್ವಾಮಿ ನೀಡಿದರು.

ಬಿಜೆಪಿ ನಾಯಕರ ಆರೋಪ

ಇನ್ನೂ ಗಲಭೆ ಬಳಿಕ ಗುರುವಾರ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಆರ್ ಅಶೋಕ್, ಅಶ್ವತ್ಥನಾರಾಯಣ, ಸಿಟಿ ರವಿ, ನಾರಾಯಣ ಗೌಡ, ಪ್ರತಾಪ್ ಸಿಂಹ ಸೇರಿ ಹಲವು ಕೆಲವು ಕಮಲ ನಾಯಕರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು. ಗಣೇಶ ಉತ್ಸವ ಆಯೋಜಕರು, ಸಾರ್ವಜನಿಕರು, ಗಾಯಗೊಂಡವರ ಕುಟುಂಬಸ್ಥರನ್ನು ಭೆಟಿ ಮಾಡಿ ಮಾತುಕತೆ ಬಳಿಕ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು.

ನಾಗಮಂಗಲ ಗಲಭೆ ಪ್ರಕರಣದಲ್ಲಿ ಹಿಂದಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಆರೋಪಿಗಳ ಪೈಕಿ ಎ1ರಿಂದ ಎ23ವರೆಗಿನ ಆರೋಪಿಗಳು ಹಿಂದೂಗಳೇ ಆಗಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಗಣೇಶನನ್ನು ಕೂರಿಸಿದ್ದು ಹಿಂದೂ ಯುವಕರು, ಕಲ್ಲು ತೂರಿದ್ದು ಮುಸ್ಲಿಂ ಯುವಕರು. ಆದರೆ ಪೊಲೀಸರು ವೈಫಲ್ಯ ಮುಚ್ಚಿಕೊರ್ಲಳಲು ಹಿಂದೂಗಳನ್ನು ಬಂಧನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಲ್ಲು ತೂರಿದವರನ್ನು ಆರೋಪಿಗಳನ್ನಾಗಿ ಮಾಡುವುದನ್ನು ಬಿಟ್ಟು ಗಣೇಶೋತ್ಸವ ಮಾಡಿದವರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಅಲ್ಪಸಂಖ್ಯಾತರ ಒಲೈಕೆಗಾಗಿ ಹಿಂದೂ ಯುವಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಮೆರವಣಿಗೆ ತಡೆದು ಗಲಾಟೆ ಮಾಡಿದವರನ್ನು ಬಿಟ್ಟು ಗಣೇಶೋತ್ಸವ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿರುವುದು ಅನ್ಯಾಯ. ಕಾಂಗ್ರೆಸ್‌ನವರು ವೋಟ್‌ ಬ್ಯಾಂಕ್ ಉಳಿಸಿಕೊಳ್ಳಲು ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ.

ಶಿವಮೊಗ್ಗ : ನಾಗಮಂಗಲ ಘಟನೆ ಹಾಗೂ ಗೃಹ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

ನಾಗಮಂಗಲ ಘಟನೆ ಹಾಗೂ ಗೃಹ ಸಚಿವರ ಹೇಳಿಕೆ ಖಂಡಿಸಿ ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಶಿವಮೊಗ್ಗ ನಗರ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಸರ್ಕಾರದ ವಿರುದ್ದ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಹಿಂದೂಗಳನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಘೋಷಣೆ ಕೂಗಲಾಯಿತು. ಕೂಡಲೇ ನಾಗಮಂಗಲ ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಗೃಹಸಚಿವರು ಘಟನೆ ಕುರಿತು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಈ ವೇಳೆ ಪ್ರತಿಭಟನಾಕಾರರು ಆಕ್ರೋಶಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+