• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ; ಬಟ್ಟೆ ಒಗೆಯಲು ತೆರಳಿದ್ದ ತಾಯಿ, ಮಕ್ಕಳು ನೀರು ಪಾಲು

|

ಮಂಡ್ಯ, ಜೂನ್ 14: ಬಟ್ಟೆ ಒಗೆಯಲು ಹೋಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿಗೆ ಸಮೀಪದ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯಲ್ಲಿ ನಡೆದಿದೆ.

   ಯಡಿಯೂರಪ್ಪ ಶಾಶ್ವತ ಅಲ್ಲ ಎಂದು ಏಕವಚನದಲ್ಲಿ ರೇಗಾಡಿದ ರೇವಣ್ಣ | Revanna | Yeddiyurappa

   ಮೃತಪಟ್ಟವರನ್ನು ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38) ಮತ್ತು ಮಕ್ಕಳಾದ ಸವಿತಾ (19), ಸೌಮ್ಯ (14) ಎಂದು ಗುರುತಿಸಲಾಗಿದೆ.

   ಭದ್ರಾವತಿಯ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಎರಡು ಮೃತದೇಹಗಳು ಪತ್ತೆ

   ಗ್ರಾಮದ ಹತ್ತಿರವಿರುವ ಕೆರೆಗೆ ಇಂದು ಮಕ್ಕಳೊಂದಿಗೆ ಗೀತಾ ಅವರು ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಒಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾರೆ. ಅವರನ್ನು ಎಳೆದುಕೊಳ್ಳಲು ಹೋಗಿ ಇಬ್ಬರು ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ.

   ಗ್ರಾಮಸ್ಥರು ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದುದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ, ದಡದಲ್ಲಿ ಬಟ್ಟೆಗಳು ಬಿದ್ದಿರುವುದನ್ನು ಕಂಡಿದ್ದಾರೆ. ನಂತರದಲ್ಲಿ ಗ್ರಾಮಸ್ಥರು ಮುಳುಗು ತಜ್ಞರನ್ನು ಕರೆಸಿ ಕೆರೆಯಲ್ಲಿ ಮುಳುಗಿದ್ದ ಶವ ಪತ್ತೆ ಹಚ್ಚಿ ಹೊರಕ್ಕೆ ತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

   English summary
   Mother and two daughters died by drowning in lake while washing clothes at Beeranahalli of Nagamangala in mandya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X