ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ತಜ್ಞರ ತಂಡಕ್ಕೆ ಕಾವೇರಿ ಕೊಳ್ಳದ ವಸ್ತುಸ್ಥಿತಿ ಮನವರಿಕೆ'

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ಕಾವೇರಿ ಕೊಳ್ಳದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕೇಂದ್ರದ ತಾಂತ್ರಿಕ ತಂಡಕ್ಕೆ ಸಂಪೂರ್ಣ ಮನವರಿಕೆ ಮಾಡಿಕೊಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಅವರು ತಿಳಿಸಿದರು.

ಕಾವೇರಿ ಕೊಳ್ಳದ ವಸ್ತು ಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಜಿ. ಎಸ್. ಝಾ ನೇತೃತ್ವದ ಕೇಂದ್ರದ ತಾಂತ್ರಿಕ ತಂಡಕ್ಕೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ದೃಶ್ಯ ಶ್ರವ್ಯ ಪ್ರಸ್ತುತಿಯ ಮೂಲಕ ಕಾವೇರಿ ಕೊಳ್ಳದ ಸ್ಥಿತಿಯನ್ನು ಮನವರಿಕೆ ಮಾಡಿ ಕೊಡಲಾಯಿತು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್ ಅವರು ಸಭೆಯ ವಿವರಗಳನ್ನು ನೀಡಿದರು.[ಕಾವೇರಿಗೆ ಸಮಸ್ಯೆಗೆ ಜಲತಜ್ಞ ರಾಜೇಂದ್ರ ಸಿಂಗ್ ಪರಿಹಾರ ಸೂತ್ರಗಳು]

"ರಾಜ್ಯದ ಕಾವೇರಿ ಕೊಳ್ಳದಲ್ಲಿನ ಮಳೆ ಕೊರತೆ, ಬೆಳೆ ಪರಿಸ್ಥಿತಿ ಹಾಗೂ ರೈತರ ಸಂಕಷ್ಟಗಳನ್ನು ವಿವರಿಸಲಾಯಿತು. ಇದಲ್ಲದೆ ಮುಂಗಾರು ವೈಫಲ್ಯದಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರು ಸಮಸ್ಯೆಯನ್ನೂ ತಂಡದ ಗಮನಕ್ಕೆ ತರಲಾಯಿತು". "ಮುಂದಿನ ಬೇಸಿಗೆಯವರೆಗೆ ಈ ಭಾಗದ ಜನರಿಗೆ ಕುಡಿಯುವ ನೀರು ಹಾಗೂ ಬೆಳೆದಿರುವ ಬೆಳೆಗೆ 67 ಟಿ ಎಂ ಸಿ ನೀರಿನ ಅಗತ್ಯವಿದೆ. [ಅ.18ರ ತನಕ ಕಾವೇರಿ ನಿರ್ವಹಣಾ ಮಂಡಳಿ ರಚನೆ ಇಲ್ಲ]

ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ?

ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ?

ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ 25 ಟಿ ಎಂ ಸಿ ಮಾತ್ರ. ಅದರಲ್ಲೂ, ನೀರಿನ ಲಭ್ಯತೆಯನ್ನು ಆಧರಿಸಿ ಅರೆ ಮಿಶ್ರಿತ ಬೆಳೆ ಬೆಳೆಯುವಂತೆ ನೀರಾವರಿ ಸಮಾಲೋಚನಾ ಸಮಿತಿಯಲ್ಲಿ ರೈತರಿಗೆ ಸಲಹೆ ಹಾಗೂ ಮನವಿ ಮಾಡಲಾಗಿದೆ" ಎಂದು ಸಚಿವರು ತಿಳಿಸಿದರು.[ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿದ ಕೇಂದ್ರ ಸರ್ಕಾರ]

18.5 ಎಕರೆ ಪ್ರದೇಶದ ಕೃಷಿ ಕ್ಷೇತ್ರ

18.5 ಎಕರೆ ಪ್ರದೇಶದ ಕೃಷಿ ಕ್ಷೇತ್ರ

"ಕಾವೇರಿ ಕೊಳ್ಳದ ಭಾಗದಲ್ಲಿ 18.5 ಎಕರೆ ಪ್ರದೇಶದ ಕೃಷಿ ಕ್ಷೇತ್ರವಿದ್ದರೂ, ಮಳೆ ಕೊರತೆಯಿಂದ ಪ್ರಸ್ತುತ ಬಿತ್ತನೆಯಾಗಿರುವ ಪ್ರದೇಶ ಕೇವಲ ಮೂರನೇ ಒಂದರಷ್ಟು. ಅಂದರೆ, 6.15 ಲಕ್ಷ ಎಕರೆ ಮಾತ್ರ. ಇದರಲ್ಲಿ 1.88 ಎಕರೆ ಬಿತ್ತನೆ ಪ್ರದೇಶದ ಬೆಳೆಗಳು ಒಣಗಿ ಹೋಗಿವೆ.

ಬೆಳೆಗಳಿಗೆ ನೀರು ಒದಗಿಸುವ ಜವಾಬ್ದಾರಿ

ಬೆಳೆಗಳಿಗೆ ನೀರು ಒದಗಿಸುವ ಜವಾಬ್ದಾರಿ

ಅಲ್ಲದೆ, 4.27 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ".ಎಂದು ಸಚಿವ ಎಂ ಬಿ ಪಾಟೀಲ್ ವಿವರಿಸಿದರು.

ಎರಡನೇ ಸಾಂಬಾ ಬೆಳೆಗೆ ನೀರು ಕೇಳುತ್ತಿದ್ದಾರೆ

ಎರಡನೇ ಸಾಂಬಾ ಬೆಳೆಗೆ ನೀರು ಕೇಳುತ್ತಿದ್ದಾರೆ

"ಕರ್ನಾಟಕದಲ್ಲಿರುವ ಇಂತಹ ಗಂಭೀರ ಪರಿಸ್ಥಿತಿ ತಮಿಳುನಾಡಿನಲ್ಲಿ ಇಲ್ಲ. ಅಲ್ಲಿನ ಮೆಟ್ಟೂರು ಜಲಾಶಯದಲ್ಲಿ ಎರಡನೇ ಸಾಂಬಾ ಬೆಳೆಗೆ ಅಗತ್ಯವಿರುವ ನೀರು ಸಂಗ್ರಹವಿದೆ. ಅಲ್ಲದೆ, ಆ ಭಾಗದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳೂ ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂಬ ಅಂಶಗಳನ್ನು ಕೇಂದ್ರ ತಾಂತ್ರಿಕ ತಂಡಕ್ಕೆ ಗಮನಕ್ಕೆ ತರಲಾಗಿದೆ" ಎಂದು ಸಚಿವ ಎಂ ಬಿ ಪಾಟೀಲ್ ವಿವರಿಸಿದರು.

English summary
Minister M B Patil said that the team is detailed about the shortage of drinking water, withering of farmers standing crops due to lack of water, and on the depleting water levels in the four reservoirs in the Cauvery basin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X