ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ
Recommended Video
ಮಂಡ್ಯ, ನವೆಂಬರ್ 27: ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಹು ದಿನಗಳ ನಂತರ ಮತ್ತೆ ಕಣ್ಣಿರಿಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಂದಿದ್ದ ಅವರ ಕಣ್ಣೀರು ಬಿಡುವಿನ ನಂತರ ಈಗ ಮತ್ತೆ ಉಪಚುನಾವಣೆ ಸಮಯದಲ್ಲಿ ಹರಿದಿದೆ.
ಮಂಡ್ಯದ ಕಿಕ್ಕೇರಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ 'ಅನರ್ಹ' ನಾರಾಯಣಗೌಡ ಹಿಂದೆ ಜೆಡಿಎಸ್ ನಲ್ಲಿದ್ದಾಗ ತಮಗೆ ಬರೆದಿದ್ದ ಪತ್ರವನ್ನು ಓದಿದರು. ಪತ್ರದಲ್ಲಿ ಕುಮಾರಸ್ವಾಮಿ ಅವರನ್ನು ನಾರಾಯಣಗೌಡ ಹಾಡಿ ಹೊಗಳಿದ್ದರು.
ಪತ್ರ ಓದಿದ ನಂತರ ಭಾವುಕರಾದ ಕುಮಾರಸ್ವಾಮಿ, 'ನಿಮ್ಮನ್ನು (ಮಂಡ್ಯದ ಜನ) ನಂಬಿದ್ದೆ ಆದರೆ ನೀವೇ ನನ್ನ ಕೈಬಿಟ್ಟಿರಿ' ಎಂದು ಭಾವುಕರಾದರು. ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ನನಗೆ ಇದೆಲ್ಲಾ ಬೇಕಿತ್ತಾ? ಎಂದ ಎಚ್‌ಡಿಕೆ ಮಂಡ್ಯದಲ್ಲಿ ಮಗನ ಸೋಲನ್ನು ನೆನೆದು ಕಣ್ಣೀರಿಟ್ಟರು.

ಎರಡು ಹೊತ್ತು ಊಟಕ್ಕೆ ರಾಜಕೀಯ ಮಾಡಬೇಕಾ?: ಎಚ್‌ಡಿಕೆ
ನನಗೆ ರಾಜಕೀಯವೇ ಬೇಡವೆಂದು ನಿರ್ಣಯ ಮಾಡಿದ್ದೆ, ಎರಡು ಹೊತ್ತು ಊಟಕ್ಕೆ ರಾಜಕೀಯ ಏಕೆ ಮಾಡಬೇಕು? ಆದರೆ ಕಾಂಗ್ರೆಸ್‌ನವರೇ ಬಂದು ಸಿಎಂ ಆಗಿ ಎಂದರು. ರಾಹುಲ್ ಗಾಂಧಿ ನನ್ನನ್ನು ಇಲ್ಲಿನ ಕಾಂಗ್ರೆಸ್‌ನವರಿಗೆ ತಗುಲಿಹಾಕಿದರು' ಎಂದರು.

ನಾನೇನು ತಪ್ಪು ಮಾಡಿದ್ದೆ: ಕುಮಾರಸ್ವಾಮಿ ಪ್ರಶ್ನೆ
ಎರಡು ಹೊತ್ತಿನ ಊಟಕ್ಕೆ ರಾಜಕೀಯ ಮಾಡಬೇಕೆ? ಎಂದು ಗದ್ಗದಿತರಾದ ಕುಮಾರಸ್ವಾಮಿ, ನಾನೇನು ತಪ್ಪು ಮಾಡಿದೆ, ನೀವು ಏಕೆ ನನ್ನ ಬಿಟ್ಟಿರಿ? ಎಂದು ಜನರನ್ನು ಪ್ರಶ್ನೆ ಮಾಡಿದರು.

ನಾರಾಯಣಗೌಡನನ್ನು ಬಾಂಬೆ ಕಳ್ಳ ಎನ್ನುತ್ತಿದ್ದರು: ಕುಮಾರಸ್ವಾಮಿ
'ನಾರಾಯಣಗೌಡ ನನ್ನು ಬಾಂಬೆ ಕಳ್ಳ ಎಂದು ಕರೆಯುತ್ತಿದ್ದರು. ಆದರೂ ನಾನು ಆತನಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ದೇವೇಗೌಡ ರ ವಿರೋಧವಿದ್ದರೂ ನಾನು ಆತನನ್ನು ಗೆಲ್ಲಿಸಿಕೊಂಡು ಬಂದೆ, ಇದರಲ್ಲಿ ನನ್ನ ತಪ್ಪೂ ಇದೆ ನನ್ನ ಕುಟುಂಬದ್ದೂ ತಪ್ಪಿದೆ, ಆತನನ್ನು ಗೆಲ್ಲಿಸಬಾರದಿತ್ತು' ಎಂದು ಕುಮಾರಸ್ವಾಮಿ ಹೇಳಿದರು.

ಆಗ ದೇವರು ಎನ್ನುತ್ತಿದ್ದವರು ಈಗ ಬೆನ್ನಿಗೆ ಇರಿದಿದ್ದಾರೆ: ಎಚ್‌ಡಿಕೆ
'ಆಗ ನನ್ನನ್ನು ದೇವರು ಎನ್ನುತ್ತಿದ್ದ ನಾರಾಯಣಗೌಡ ನನಗೇ ಬೆನ್ನಿಗೆ ಚೂರಿ ಹಾಕಿದ. ಬಾಂಬೆಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ, ಅದು ಅನಾರೋಗ್ಯದಿಂದ ಅಲ್ಲ, ಬಿಜೆಪಿಯಿಂದ ದುಡ್ಡು ತೆಗೆದುಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದ' ಎಂದು ಸಿಟ್ಟು ಹೊರಹಾಕಿದರು.

ಬಾಂಬೆ ಅಲ್ಲ ಕಾಮಾಟಿಪುರ ಮಾಡ್ತಾನೆ: ಡಿ.ಸಿ.ತಮ್ಮಣ್ಣ
ಮದ್ದೂರು ಜೆಡಿಎಸ್‌ನ ಡಿ.ಸಿ.ತಮ್ಮಣ್ಣ ಮಾತನಾಡಿ, 'ಕೆ.ಆರ್.ಪೇಟೆಯನ್ನು ಬಾಂಬೆ ಮಾಡುವುದಾಗಿ ನಾರಾಯಣಗೌಡ ಹೇಳುತ್ತಿದ್ದಾನೆ, ಅವನು ಗೆದ್ದರೆ ಕೆ.ಆರ್.ಪೇಟೆಯಲ್ಲ ಬಾಂಬೆ ಅಲ್ಲ ಕಾಮಾಟಿಪುರ ಮಾಡುತ್ತಾನೆ' ಎಂದು ವಾಗ್ದಾಳಿ ನಡೆಸಿದರು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications