ಶಾಲಾ ಮಕ್ಕಳಿಂದ ಸಹಿ ಹಾಕಿಸಿಕೊಂಡು ಕಾಂತರಾಜು ವರದಿ ತಯಾರಿ: ಎಚ್‌ಡಿ ಕುಮಾರಸಾಮಿ
ಮಂಡ್ಯ, ನವೆಂಬರ್ 23: ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ, ಸಂಪೂರ್ಣ ಸಿದ್ದತೆಯನ್ನೂ ಮಾಡಿಲ್ಲ. ಗೊತ್ತಿಲ್ಲದೆ ಇರೋ ಶಾಲಾ ಮಕ್ಕಳಿಂದ ಸಹಿ ಹಾಕಿಸಿಕೊಂಡು ಅವರಿಗೆ ಬೇಕಾದಂತೆ ಸಿದ್ದತೆ ಮಾಡಿರುವ ಜಾತಿಗಣತಿ ವರದಿ ಅನ್ನೋದು ಜಗಜ್ಜಾಯಿರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮುಖ್ಯಮಂತ್ರಿ ಟ್ವೀಟ್ ಗಮನಿಸಿದ್ದೇನೆ, ಅವರ ಹೆಮ್ಮೆಯ ರಾಹುಲ್ ಗಾಂಧಿ ಭಾವನೆಗೆ ಸ್ಪಂಧಿಸಿ ಜಾತಿಗಣತಿ ಪಡೆಯೋದಾಗಿ ಹೇಳಿದ್ದಾರೆ. ಈಗಾಗಲೇ ಮಾಧ್ಯಮದಲ್ಲಿ ಕಾಂತರಾಜು ಅವರ ಮೂಲ ಪ್ರತಿ ಕಾಣೆಯಾಗಿದೆ ಅಂತ ಬಂದಿದೆ. ಪದೇ ಪದೇ ಕಾಂತರಾಜು ವರದಿಯನ್ನ ಕುಮಾರಸ್ವಾಮಿ ತಿರಸ್ಕರಿಸಿದರು ಅಂತ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.

ನನ್ನ ಕಾಲದಲ್ಲಿ ಕಾಂತರಾಜು ವರದಿ ಪಡಿಲಿಲ್ಲ ಸರಿ ಈ 6 ತಿಂಗಳ ಅವಧಿಯಲ್ಲಿ ಇವರು ಒಪ್ಪಿಗೆ ಕೊಡಲು ಏನಾಗಿತ್ತು? ಕಾಂತರಾಜು ವರದಿಗೆ ಅಂದಿನ ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ. ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ, ಸಂಪೂರ್ಣ ಸಿದ್ದತೆ ಮಾಡಿಲ್ಲ. ಗೊತ್ತಿಲ್ಲದೆ ಇರೋ ಶಾಲ್ಮಾಕ್ಕಳಿಂದ ಸಹಿ ಹಾಕಿಸಿಕೊಂಡು ಅವರಿಗೆ ಬೇಕಾದಂತೆ ಸಿದ್ದತೆ ಮಾಡಿರುವ ವರದಿ ಅನ್ನೋದು ಜಗಜಾಯಿರಾಗಿರುವುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಿಬಿರಿಯಲ್ಲಿ ಅವರ ರಾಷ್ಟ್ರೀಯ ನಾಯಕರ ಆಸೆ ಈಡೇರಿಸಲು ತೆಗೆದುಕೊಳ್ಳಲು ರೆಡಿ ಅಂತ ಮುಖ್ಯಮಂತ್ರಿ ಹೇಳಿದ್ದಾರೆ, ಮೂಲ ಪ್ರತಿ ಕಳ್ಳತನ ಆದಮೇಲೆ ಹೇಗೆ ಜಾರಿ ಮಾಡುತ್ತಾರೆ? ಕಾಂತರಾಜು ವರದಿ ಸಿದ್ದವಾಗಿ 10 ವರ್ಷವಾಗಿದೆ. ಈ 10 ವರ್ಷದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಕಾಂತರಾಜು ವರದಿಯನ್ನ ಮನೆಯಲ್ಲಿ ಕೂತು ವರದಿ ಮಾಡಿದ್ದಾರೋ ಅಥವಾ ಮುಖ್ಯಮಂತ್ರಿ ಅವರೇ ಕುಳಿತು ವರದಿ ಮಾಡಿಸಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.
ಇವತ್ತು ಈ ವರದಿ ಬಗ್ಗೆ ಹಲವು ಸಮಾಜದಲ್ಲಿ ಅನುಮಾನ ಇದೆ. ಅವತ್ತು ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ ಇದನ್ನ ಹೇಗೆ ಎಕ್ಸೆಪ್ಟ್ ಮಾಡೋದು? ಸಹಿ ಹಾಕದೆ ಇರಲು ಕಾರಣವೇನು. ಟ್ವೀಟ್ ಮಾಡಿರೋದು ಸಮಾಜವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಂತದ್ದಲ್ಲ. ಸಮಾಜವನ್ನ ಹೊಡೆಯುವ ಉದ್ದೇಶ ಇಟ್ಟುಕೊಂಡು ಹೊರಟಿದ್ದೀರಿ ಇದರ ಫಲ ಉಣ್ಣಬೇಕಾಗತ್ತೆ ಎಂದು ಎಚ್ಚರಿಕೆ ನೀಡಿದರು.
ಯಾವ ವರದಿ ಕೊಡುತ್ತಾರೆ, ಯಾವ ವರದಿ ವಿಧಾನಸಭೆಯಲ್ಲಿ ಇಡುತ್ತಾರೆ ವಿಧಾನ ಸಭಾ ಕಲಾಪದಲ್ಲಿ ಇದರ ಬಗ್ಗೆ ಚೆರ್ಚೆ ಮಾಡೋಣ? ಜಾತಿಯ ಹೆಸರಿನಿಂದ ನಾನು ವಿರೋಧ ವ್ಯಕ್ತಪಡಿಸಲ್ಲ, ಸುಳ್ಳೆ ನಮ್ ಮನೆ ದೇವರು ಅಂತಾರೆ, ಹಾಗಾದರೆ ಇವರೆಲ್ಲರೂ ಸತ್ಯಹರಿಶ್ಚಂದ್ರನ ವಂಶದವರಾ? ಸ್ವಾಮೀಜಿಯವರ ನೇತೃತ್ವದಲ್ಲಿ ಸಿದ್ದವಾಗಿರುವ ಮನವಿಗೆ ಪಾಪ ಎಲ್ಲರೂ ಸಹಿ ಹಾಕಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಗರು ಹೇಳಿದರೆ ಕುಮಾರಸ್ವಾಮಿ ಚೆಡ್ಡಿಯನ್ನ ಬೇಕಾದರೂ ಹಾಕುತ್ತಾರೆ, ದತ್ತಮಾಲೆಯನ್ನ ಬೇಕಾದರೂ ಹಾಕುತ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿದ್ರೆ ಚಲುವರಾಯಸ್ವಾಮಿ ಏನ್ ಹಾಕುತ್ತಾರೆ ಹೇಳಲಿ ಆನಂತರ ನನ್ನದು ಮಾತನಾಡಲಿ ಎಂದು ತಿರುಗೇಟು ನೀಡಿದರು.












Click it and Unblock the Notifications