ತಮಾಷೆಗಾಗಿ: ಸುಮಲತಾರನ್ನ ಯಾಕೆ ಸೋಲಿಸಲಿಲ್ಲ? ದೇವರು ಕೊಟ್ಟ ಉತ್ತರಕ್ಕೆ ನಿಖಿಲ್ ಸುಸ್ತು!
ಮಂಡ್ಯ, ಮೇ 24: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುತ್ತಿದ್ದಂತೆಯೇ ಟ್ರೋಲ್ ಹೈಕ್ಳು ಸಿಕ್ಕಾಬಟ್ಟೆ ಬ್ಯುಸಿ ಆಗ್ಬಿಟ್ಟಿದ್ದಾರೆ! 'ನಿಖಿಲ್ ಎಲ್ಲಿದಿಯಪ್ಪಾ?' ಅಂತೂ ಸಕತ್ ಟ್ರೆಂಡಿಂಗ್ ಆಗಿದೆ. ಆದರೆ 'ಸುಮಲತಾ ಅವರನ್ನು ಯಾಕೆ ಸೋಲಿಸಲಿಲ್ಲ' ಎಂಬ ನಿಖಿಲ್ ಪ್ರಶ್ನೆಗೆ ದೇವರು ಕೊಟ್ಟ ಉತ್ತರದ ಜೋಕ್ ಅಂತೂ ನಕ್ಕು ನಕ್ಕು ಸುಸ್ತಾಗಿಸುವಂತಿದೆ.
ನಿಖಿಲ್ ಕೇಳುತ್ತಾರೆ, "ದೇವರೆ, ಸುಮಲತಾನ ಸೋಲಿಸು ಅಂತ ನಿಂಗೆ ಪೂಜೆ ಮಾಡಿದೆ, ಹೋಮ ಮಾಡಿದೆ... ಆದ್ರೂ ಯಾಕಪ್ಪ ನೀನು ಸುಮಲತಾನ ಸೋಲಿಸಲಿಲ್ಲ?"

ಅದಕ್ಕೆ ದೇವರು ಕೊಟ್ಟ ಉತ್ತರ ಕೇಳಿ, ನಿಖಿಲ್ ಸುಸ್ತೋ ಸುಸ್ತು!
ದೇವರು: ಅಯ್ಯೋ, ನಾನೇನ್ ಮಾಡ್ಲಿ ಮೂರು ಸುಮಲತಾನ ಸೋಲಿಸಿದ್ದಿನಿ... ನಂಗೂ confuse ಆಗೋಯ್ತು.. ಅದ್ಕೆ ಓಬ್ಬಳನ್ನ ಬುಟ್ ಬುಟ್ಟೆ ಕಣಪ್ಪ..!
****
ಮತ್ತೊಂದು ಜೋಕು
ಬೈಕ್ ರೈಡ್
ದೆಹಲಿಗೆ ಒಂದೇ ಬೈಕ್ ನಲ್ಲಿ ಪ್ರಯಾಣ!
ಕರ್ನಾಟಕ ಮಹಾಮೈತ್ರಿ ಪಕ್ಷದ ಸಂಸದರು ಇನ್ನು ದೆಹಲಿಗೆ ಒಂದೇ ಬೈಕಿನಲ್ಲಿ ಹೋಗಬಹುದು.
(1+1)
*ಡಬಲ್ ರೈಡ್*












Click it and Unblock the Notifications