ಮಂಡ್ಯದಲ್ಲಿ ಜಯಲಲಿತಾ ಸಮಾಧಿ, ಜೆಡಿಎಸ್ ಸಂಸದರ ಆಲೋಚನೆ!

Posted By:
Subscribe to Oneindia Kannada

ಮಂಡ್ಯ, ಡಿಸೆಂಬರ್ 06: ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ದಿವಂಗತ ಜಯಲಲಿತಾ ಅವರ ಸಮಾಧಿ ನಿರ್ಮಾಣ ಮಾಡಲು ಮಂಡ್ಯದ ಸಂಸದರು ಮುಂದಾಗಿದ್ದಾರೆ. ತಮಿಳರು ಒಪ್ಪಿದರೆ, ಕಾಂಗ್ರೆಸ್ ಸರ್ಕಾರದ್ದೇನು ತಕರಾರಿಲ್ಲ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಪುಟ್ಟರಾಜು ಅವರಲ್ಲದೆ ಜೆಡಿಎಸ್ ರಾಜ್ಯಸಭಾ ಸದಸ್ಯರಾದ ಕುಪೇಂದ್ರ ರೆಡ್ಡಿ ಅವರು ಮಾತನಾಡಿ ಮೇಲುಕೋಟೆಯಲ್ಲಿ ಒಂದು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಜಯಲಲಿತಾ ಅವರ ನೆನಪಲ್ಲಿ ಸ್ಮಾರಕ ನಿರ್ಮಾಣದ ಯೋಜನೆ ಇದೆ ಎಂದರು. [ಜಯಾ ವಿಧಿವಶ: ಕರ್ನಾಟಕದ ನಾಯಕರು ಹೇಳಿದ್ದೇನು?]

ಮೇಲುಕೋಟೆಯಲ್ಲಿ ಜಯಲಲಿತಾ ಅವರ ಸಮಾಧಿ ನಿರ್ಮಿಸಬೇಕೆಂಬ ಜೆಡಿಎಸ್ ಸಂಸದರ ಮನವಿಯನ್ನು ಸಚಿವ ಜಯಚಂದ್ರ ಸ್ವಾಗತಿಸಿದ್ದಾರೆ.

JD(S) MPs want Jayalalithaa to be buried in Mandya, hotbed of Cauvery agitation

ಆದರೆ, ರಾಜ್ಯ ರೈತ ಸಂಘ, ಕನ್ನಡ ಪರ ಸಂಘಟನೆಗಳು ಜೆಡಿಎಸ್ ಸಂಸದ ಆಲೋಚನೆ, ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ರೈತರ ಹಿತಕಾಯುವುದು ಮುಖ್ಯ. ಜಯಲಲಿತಾ ಅವರಿಂದ ಮಂಡ್ಯ, ಮೈಸೂರು ಭಾಗದ ರೈತರಿಗೆ ಅನ್ಯಾಯವಾಗಿದ್ದನ್ನು ಮರೆಯುವಂತಿಲ್ಲ ಎಂದು ಕನ್ನಡ ಪರ ಹೋರಾಟಗಾರರು ಗುಡುಗಿದ್ದಾರೆ.

ಆದರೆ, ಜಯಚಂದ್ರ ಅವರು ಜಯಲಲಿತಾ ಬಗ್ಗೆ ಮಾತನಾಡಿ, ಭಾರತ ರಾಜಕಾರಣದ ಧೀಮಂತ ಮಹಿಳೆ. ಕನ್ನಡ ನೆಲದಲ್ಲಿ ಜನಿಸಿ ತಮಿಳುನಾಡಿನಲ್ಲಿ ಸಾಧನೆ ಮಾಡಿದ್ದಾರೆ. ವೀರಪ್ಪನ್ ಕಾರ್ಯಾಚರಣೆ, ಕಾವೇರಿ ವಿವಾದದಲ್ಲಿ ಅವರ ಜೊತೆ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಅವರ ವಾಕ್‌ಚಾತುರ್ಯ ಮೆಚ್ಚುವಂತಿತ್ತು ಎಂದಿದ್ದಾರೆ. ಒಟ್ಟಾರೆ, ಜಯಾ ಸ್ಮಾರಕ ಯೋಜನೆ ಮತ್ತೊಂದು ವಿವಾದಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MPs of JD(S) from Karnataka said that deceased AIADMK leader J Jayalalithaa should be buried in her birthplace in Mandya. Their statement came under severe criticism by pro-kannada organisations.
Please Wait while comments are loading...