ಸೈಟ್ ಮೇಲೆ ಸೈಟು ಹೊಡೆದಿದ್ದ ಕಾಳೇಗೌಡನ ಆಸ್ತಿ ವಿವರ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಫೆಬ್ರವರಿ 08 : ಫಾರ್ಟಿ ಬೈ ಸಿಕ್ಸ್‌ಟಿ ಸೈಟಿರಲಿ ಟ್ವೆಂಟಿ ಬೈ ಥರ್ಟಿ ಸೈಟು ಕೊಳ್ಳುವುದೆಂದರೆ ಮಧ್ಯಮ ವರ್ಗದವರಿಗೆ ಗಗನ ಕುಸುಮ. ಅಂಥದ್ದರಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ತಲಾ ಮೂರ್ನಾಲ್ಕು ದೊಡ್ಡ ಸೈಟುಗಳನ್ನು ಕೊಂಡಿದ್ದನೆಂದರೆ ಈತನ ಹಸಿವು ಎಷ್ಟಿರಬೇಕು ಊಹಿಸಿಕೊಳ್ಳಿ!

ಇಷ್ಟು ಮಾತ್ರವಲ್ಲ ಕೋಟಿಗಟ್ಟಲೆ ಕಿಸಾನ್ ವಿಕಾಸ್ ಪತ್ರ, ಕೆಜಿಗಟ್ಟಲೆ ಚಿನ್ನ ಬೆಳ್ಳಿ ಆಭರಣಗಳು ಈ ಕಾಳೇಗೌಡ ಎಂಬ ಸಹಾಯಕ ಇಂಜಿನಿಯರ್ ಪೇರಿಸಿಟ್ಟುಕೊಂಡಿರುವ ಆಸ್ತಿಗಳು. ಪ್ರಾಮಾಣಿಕತೆಯ ಕಪಾಳಕ್ಕೆ ಬಿಗಿಯುವಂತೆ ಆಸ್ತಿಪಾಸ್ತಿ ಮಾಡಿಟ್ಟುಕೊಂಡಿದ್ದಾರೆ. ಮಿಸ್ಟರ್ ಕಾಳೇಗೌಡ.[PWD ಎಂಜಿನಿಯರ್ ಮನೆಮೇಲೆ ದಾಳಿ, ಸಿಕ್ಕಾಪಟ್ಟೆ ವಶ!]

Illegal property amassed by Kalegowda from Mandya

ಮಂಡ್ಯದ ವಿ.ವಿ ನಗರದ 23ನೇ ಕ್ರಾಸ್‌ನಲ್ಲಿ ವಾಸವಿದ್ದಾರೆ ಕಾಳೇಗೌಡ. ಪ್ರಸ್ತುತ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸಹಾಯಕ ಇಂಜೀನಿಯರ್ ಆಗಿದ್ದಾರೆ. ಅಂದ ಹಾಗೆ ಅಷ್ಟೊಂದು ಸೈಟು, ಚಿನ್ನ ಮಾಡಿಟ್ಟಿದ್ದು ಯಾರಿಗಾಗಿಯೋ?

ನ್ಯಾಯಾಲಯದ ಅನುಮತಿ ಪಡೆದು ಮಂಡ್ಯದಲ್ಲಿರುವ ಕಾಳೇಗೌಡನ ಮನೆ, ಕಚೇರಿ, ಮಂಡ್ಯದ ಮಾರಗೌಡನಹಳ್ಳಿಯಲ್ಲಿರುವ ಕಾಳೇಗೌಡನ ಅತ್ತೆ ಜಯಮ್ಮ, ಮೈಸೂರಿನಲ್ಲಿ ಕಾಳೇಗೌಡ ರವರ ಭಾವಮೈದುನನಾದ ಎಂ.ಎಂ.ಸುರೇಶ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಅಕ್ರಮವಾಗಿ ಸಂಪಾದಿಸಿರುವ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ತಮ್ಮ ಹೆಸರಿನಲ್ಲಿರುವ ಹಾಗೂ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿ ಸದರಿ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

1. ಮೈಸೂರು ತಾಲ್ಲೂಕು ಜಯಪುರದಲ್ಲಿ 60*40 ಅಳತೆಯ ನಿವೇಶನ
2. ಮೈಸೂರು, ಕಾವೇರಿ ನಗರದಲ್ಲಿ 30*60 ಅಳತೆಯ ನಿವೇಶನ
3. ಬೆಂಗಳೂರು ನಗರ ತಾವರೆಕೆರೆಯಲ್ಲಿ 30*40 ಅಳತೆಯ ನಿವೇಶನ
4. ಮೈಸೂರಿನಲ್ಲಿ 60*40 ಅಳತೆಯ ನಿವೇಶನ
5. ವಿವಿ ನಗರ, ಮಂಡ್ಯದಲ್ಲಿ 40*60 ಅಳತೆಯ ನಿವೇಶನ
6. ವಿವೇಕಾನಂದ ನಗರದಲ್ಲಿ 40*60 ಅಳತೆಯ ನಿವೇಶನ
7. ಮಂಡ್ಯ ನಗರ ವಿವಿ ನಗರದಲ್ಲಿ ಎರಡು ಅಂತಸ್ತಿನ ನಿವೇಶನ 40*60ರಲ್ಲಿ
8. ಸುಮಾರು 1 ಕೋಟಿ 39 ಲಕ್ಷದಷ್ಟು ಕಿಸಾನ್ ವಿಕಾಸ್ ಪತ್ರ
9. ಸುಮಾರು 1/2 ಕೆ.ಜಿ ಚಿನ್ನದ ಆಭರಣ
10. ಸುಮಾರು 1 ಕೆ.ಜಿ 300 ಗ್ರಾಂ ಬೆಳ್ಳಿ ಆಭರಣ
11. ಸುಮಾರು 15 ಲಕ್ಷ ರೂಗಳ ಠೇವಣಿ
12. ಎಲ್‌ಐಸಿ ಪಾಲಿಸಿ ಸುಮಾರು 25 ಲಕ್ಷ
13. 1 ಕಾರು ಹಾಗೂ 3 ಮೋಟಾರ್ ಸೈಕಲ್‌

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anti Corruption Bureau has raided assistant engineer in Mandya. Here is the list of illegal property amassed by the corrupt government servant. Well done ACB.
Please Wait while comments are loading...