Breaking; ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ
ಮಂಡ್ಯ, ಫೆಬ್ರವರಿ 06; ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮ ಬೆಚ್ಚಿಬಿದ್ದಿದೆ. ಒಂದೇ ಕುಟುಂಬದ ಐವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಹಿಳೆ ಸೇರಿ ನಾಲ್ವರು ಮಕ್ಕಳನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಕೊಲೆ ನಡೆದ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹತ್ಯೆಯಾದವರನ್ನು ಲಕ್ಷ್ಮೀ (26), ರಾಜ್ (12) ಕೋಮಲ್ (7), ಕುನಾಲ್ (4) ಮತ್ತು ಗೋವಿಂದ (8) ಎಂದು ಗುರುತಿಸಲಾಗಿದೆ. ಲಕ್ಷ್ಮೀ ಪತಿ ಗಂಗಾರಾಮ್ 10 ದಿನಗಳ ಹಿಂದೆ ಹೂವಿನ ವ್ಯಾಪಾರಕ್ಕಾಗಿ ಹೋಗಿದ್ದರು.

ಲಕ್ಷ್ಮೀ ಪತಿ ಗಂಗಾರಾಮ್ ಪ್ಲಾಸ್ಟಿಕ್ ಹೂವುಗಳ ಮಾರಾಟ ಮಾಡುತ್ತಿದ್ದರು. ಅಣ್ಣ ಗಣೇಶ್, ಅತ್ತಿಗೆಯ ಜೊತೆ ವ್ಯಾಪಾರ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆಂದು ಹೋದರೆ 10-15 ದಿನ ಮನೆಗೆ ಮರಳುತ್ತಿರಲಿಲ್ಲ.
ಅಣ್ಣ, ಅತ್ತಿಗೆ ಜೊತೆಗೆ ಲಕ್ಷ್ಮೀ, ಗಂಗಾರಾಮ್ ವಾಸಿಸುತ್ತಿದ್ದರು. ಶನಿವಾರ ರಾತ್ರಿ ಮನೆಗೆ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ವಿಚಾರ ಬೆಳಕಿಗೆ ಬಂದಿದೆ. ಕೆಆರ್‌ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್‌ಪಿ ಸಂದೇಶ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಸಹ ಸ್ಥಳಕ್ಕೆ ಆಗಮಿಸಿದ್ದಾರೆ.












Click it and Unblock the Notifications