ಶಿಶು ಕಚ್ಚಿಕೊಂಡು ಓಡಾಡಿದ ನಾಯಿ, ಮಗುವಿನ ತಂದೆ ವಿರುದ್ಧ ಪ್ರಕರಣ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜುಲೈ 27: ನಗರದ ಮಿಮ್ಸ್ (ಮಂಡ್ಯ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ಆವರಣದಲ್ಲಿ ನವಜಾತ ಹೆಣ್ಣು ಶಿಶುವಿನ ದೇಹವನ್ನು ನಾಯಿ ಕಚ್ಚಿಕೊಂಡು ಓಡಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಗುವಿನ ತಂದೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಡ್ಯ: ಕೆ.ಆರ್.ಪೇಟೆಯಲ್ಲಿ ತಂದೆಯನ್ನೇ ಕೊಂದ ಮಗ

ಮಗುವಿನ ತಂದೆ ಸಮೀವುಲ್ಲಾ ಎನ್ನಲಾಗಿದ್ದು, ಮದ್ದೂರು ಪಟ್ಟಣದ ನಿವಾಸಿಯಾದ ಸಮೀವುಲ್ಲಾ ಹಾಗೂ ರಿಜ್ವಾನ್ ದಂಪತಿ ನವಜಾತ ಶಿಶು ಎನ್ನುವುದು ಇದೀಗ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

Father of child arrested in Mandya government hospital case

ಗರ್ಭಿಣಿಯಾಗಿದ್ದ ಸಮೀವುಲ್ಲಾ ಪತ್ನಿ ರಿಜ್ವಾನ್ ಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮಧ್ಯರಾತ್ರಿ ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು. ಹೆರಿಗೆಯಾದ ಬಳಿಕ ಮಗುವನ್ನು ಆಸ್ಪತ್ರೆ ಸಿಬ್ಬಂದಿ ತಂದೆ ಸಮೀವುಲ್ಲಾ ಅವರಿಗೆ ಹಸ್ತಾಂತರಿಸಿದರು.

ಮಗುವನ್ನು ಪಡೆದ ಸಮೀವುಲ್ಲಾ ಅಂತ್ಯಸಂಸ್ಕಾರ ನಡೆಸದೆ ರಸ್ತೆ ಬದಿ ಬಿಸಾಡಿ ಹೋಗಿದ್ದ. ರಸ್ತೆಯ ಬದಿ ಕಸದಲ್ಲಿ ಬಿದ್ದಿದ್ದ ಮೃತ ಮಗುವಿನ ದೇಹವನ್ನು ನಾಯಿಯೊಂದು ಕಚ್ಚಿಕೊಂಡು ಆಸ್ಪತ್ರೆ ಆವರಣದಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಆತಂಕ ಮೂಡಿಸಿತ್ತು.

ಆಸ್ಪತ್ರೆ ಆವರಣದಲ್ಲಿರುವ ರಕ್ತನಿಧಿ ಕೇಂದ್ರದ ಬಳಿ ಸಾರ್ವಜನಿಕರು ನಾಯಿಯಿಂದ ಮಗುವನ್ನು ಬಿಡಿಸಿ ಬಳಿಕ ಸಿಬ್ಬಂದಿಗೆ ವಿಚಾರ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಅದನ್ನು ವಶಕ್ಕೆ ಪಡೆದರು.

ಮಂಡ್ಯ: ಜೈಲಿನಲ್ಲೇ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಶರಣು

ಆಸ್ಪತ್ರೆಯ ಮುಖ್ಯಸ್ಥರು ಎಲ್ಲಾ ವಾರ್ಡ್ ಗಳಲ್ಲೂ ಪರಿಶೀಲನೆ ನಡೆಸಿದರು. ಮಿಮ್ಸ್ ನಲ್ಲಿ ದಾಖಲಾಗಿದ್ದ ಯಾವ ಮಗುವೂ ನಾಪತ್ತೆಯಾಗಿಲ್ಲ ಎಂದು ತಿಳಿದುಬಂತು. ಹೀಗಾಗಿ ಹೊರಗಿನಿಂದ ತಂದು ಆಸ್ಪತ್ರೆ ಆವರಣದಲ್ಲಿ ಶವವನ್ನು ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿತ್ತು.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸಮೀವುಲ್ಲಾ ಮಗುವನ್ನು ಎಸೆದು ಹೋಗಿದ್ದು ಬೆಳಕಿಗೆ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಪೂರ್ವ ಠಾಣೆ ಪೊಲೀಸರು ಆತನ ವಿರುದ್ಧ 317ರ ಕಲಂನಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A case is registered against Sami Ulla- father of a child, new born child which was died in Mandya hospital, thrown away by Sami Ulla.
Please Wait while comments are loading...