ಮಳವಳ್ಳಿ ತಾಲೂಕಿನ ಮುತ್ತತ್ತಿಗೆ ಡಿಸೆಂಬರ್ 31ರಿಂದ ಪ್ರವೇಶ ನಿಷಿದ್ಧ
ಮಂಡ್ಯ, ಡಿಸೆಂಬರ್ 30: ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿಯಲ್ಲಿ ಡಿ 31 ರ ಬೆಳಿಗ್ಗೆ 6 ಗಂಟೆಯಿಂದ ಜನವರಿ ಒಂದರ ಸಂಜೆ 6 ಗಂಟೆವರೆಗೆ ಪ್ರವಾಸಿಗರಿಗೆ ಮತ್ತು ಭಕ್ತರಿಗೂ ಸಹ ಪ್ರವೇಶ ನಿಷೇಧಿಸಲಾಗಿದೆ.
ತಾಲ್ಲೂಕು ದಂಡಾಧಿಕಾರಿ ಕೆ.ಎನ್.ಲೋಕೇಶ ಆದೇಶದ ಮೇರೆಗೆ ಮುತ್ತತ್ತಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದುದರಿಂದ ಪ್ರವಾಸಿಗರು ಮುತ್ತತ್ತಿಗೆ ಬರುವ ಸಾಹಸ ಮಾಡಬೇಡಿ.ಪೊಲೀಸರು ಮತ್ತು ಅರಣ್ಯ ಇಲಾಖೆಯವರು ತಲವಾಡಿ ಚೆಕ್ ಪೋಸ್ಟ್ ನ ಬಳಿ ಕಟ್ಟೆಚ್ಚರ ವಹಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಿಂದ ಪ್ರಸಿದ್ಧ ಪ್ರೇಕ್ಷಣೀಯ ಹಾಗೂ ಯಾತ್ರಾ ಸ್ಥಳ ಮುತ್ತತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ಇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ವರ್ಷಾಚರಣೆ ವೇಳೆ ನದಿ ಅಂಚಿನಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಮುತ್ತತ್ತಿ ಪ್ರವಾಸಿ ತಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ,ಕಾನೂನು ಪಾಲನೆ ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ಎರಡು ದಿನಗಳ ಕಾಲ ಸಿಆರ್ ಪಿ ಸಿ ಸೆಕ್ಷನ್ 144 ಅನ್ವಯ ನಿಷೇದಾಜ್ಞೆಯನ್ನು ಮಳವಳ್ಳಿ ತಾಲ್ಲೂಕು ದಂಡಾಧಿಕಾರಿ ಕೆ.ಎನ್.ಲೋಕೇಶ್ ಆದೇಶ ಹೊರಡಿಸಿದ್ದಾರೆ.
ಅಚ್ಚ ಹಸಿರಿನಿಂದ ಕೂಡಿರುವ ದಟ್ಟ ಅರಣ್ಯದ ನಡುವೆ ಇರುವ ಮುತ್ತತ್ತಿಯಲ್ಲಿ ನೆಲೆಸಿರುವ ಆರಾಧ್ಯ ದೇವ ಆಂಜನೇಯ ಸ್ವಾಮಿ ಭಕ್ತರ ಇಷ್ಟಾರ್ಥವನ್ನು ನೆರವೇರಿಸುತ್ತಾ ರಾಜ್ಯ ವ್ಯಾಪ್ತಿಯಲ್ಲಿ ಈ ದೇವಸ್ಥಾನ ಹೆಸರುವಾಸಿಯಾಗಿದೆ ಅದರಲ್ಲೂ ಅಚ್ಚ ಹಸಿರಿನಿಂದ ಕೂಡಿದ ಅರಣ್ಯ ಸೌಂದರ್ಯ ಶೋಭಗನ್ನು ಹೆಚ್ಚಿಸಿ ಪ್ರವಾಸಿಗರನ್ನು ತನ್ನತ್ತ ಸೇಳೆದುಕೊಳ್ಳುತ್ತಿದೆ.
ಸರ್ಕಾರಿ ರಜಾ ದಿನಗಳಲ್ಲಿ ಹಾಗೂ ಭಾನುವಾರ ಹೆಚ್ಚು ಪ್ರವಾಸಿಗರು ಮುತ್ತತ್ತಿಗೆ ಬರುತ್ತಾರೆ ಆದರೆ ಅವರು ಸೌಂದರ್ಯ ಸೊಬಗನ್ನು ಸವಿದು ದೇವರ ದರ್ಶನ ಪಡೆದು ಹೋಗುವುದಿಲ್ಲ ಮೋಜು ಮಸ್ತಿ ಮಾಡಿ ಮಧ್ಯಪಾನ ಮಾಡಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವು ನೋವುಗಳನ್ನು ತಂದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ತಾಲ್ಲೂಕು ಆಡಳಿತ ಈ ಕ್ರಮವನ್ನು ಕೈಗೊಂಡಿದೆ.
ಆರಾಧ್ಯದೇವ ಆಂಜನೇಯ ಸ್ವಾಮಿ ಭಕ್ತರಿಗೆ ನೆರವಾಗುತ್ತಾ ದರ್ಶನ ಪಡೆಯಲು ಬರುವ ಭಕ್ತರಿಗೆ ಇದುವರೆಗೂ ಯಾವುದೇ ತೊಂದರೆ ಆಗಿಲ್ಲ ಹೆಚ್ಚು ಸಾವು ನೋವುಗಳು ಸಂಭವಿಸಿರುವುದು ಪ್ರವಾಸಿಗರ ಹೊರತು ಭಕ್ತರು ಒಬ್ಬರು ಸಾವನ್ನಪ್ಪಿಲ್ಲ . ಕಾವೇರಿ ನದಿಯ ದಡದಲ್ಲಿ ಅಪಾಯ ಸೂಚನೆ ಫಲಕವನ್ನು ಪೊಲೀಸರು ಹಾಕಿದ್ದಾರೆ ಯಾವ ಯಾವ ವರ್ಷದಲ್ಲಿ ಎಷ್ಟು ಸಾವು ಸಂಭವಿಸಿದೆ ಎಂಬುದನ್ನು ಅಂಕಿ ಅಂಶದ ಮುಖಾಂತರ ತೋರಿಸಿದರೂ ಸಹ ಅದನ್ನು ಕಡೆಗಣಿಸಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪುತ್ತಿರುವುದು ವಿಷಾದನೀಯವಾಗಿದೆ. ಆದುದರಿಂದ ಮುಂದಾದರೂ ಪ್ರವಾಸಕ್ಕೆ ಬರುವ ಪ್ರವಾಸಿಗರು ದೇವರ ದರ್ಶನ ಪಡೆಯಬೇಕೆ ಹೊರತು ಕಾವೇರಿ ನದಿಯಲ್ಲಿ ಈಜಲು ಹೋಗದೆ ಅಮೂಲ್ಯವಾದ ಪ್ರಾಣವನ್ನು ಕಾಪಾಡಿಕೊಳ್ಳಬೇಕು.
ಹಲಗೂರು ಸಮೀಪದ ಗಾಣಾಳು ಗ್ರಾಮದ ಬಳಿ ಇರುವ ಗಾಣಾಳು ಫಾಲ್ಸ್ (ಬೆಂಕಿ ಹಳ್ಳ) ಸೌಂದರ್ಯದ ಸೊಬಗನ್ನು ತುಂಬಿಕೊಂಡಿದೆ. ಗಗನಚುಕ್ಕಿ, ಬರಚುಕ್ಕಿ, ಮುತ್ತತ್ತಿ, ಬಸವನ ಬೆಟ್ಟ,ಅಂತರಹಳ್ಳಿ ಬೆಟ್ಟ ಸೇರಿದಂತೆ ಜಿಲ್ಲಾಪುರದ ಪವಾಡ ಪುರುಷ ಸಿದ್ದಪ್ಪಾಜಿ ದೇವಸ್ಥಾನ ನೋಡುವಂತಹ ಸ್ಥಳಗಳಾಗಿದ್ದು. ಹಾಗು ಹಲಗೂರಿನಿಂದ 7 ಕಿಲೋಮೀಟರ್ ದೂರದಲ್ಲಿರುವ ಗಾಣಾಳು ಫಾಲ್ಸ್ ಶಿಂಷಾ ನದಿ ಮೈದುಂಬಿ ಹರಿದಾಗ ಈ ಮನೋಹರಾದ ದೃಶ್ಯವನ್ನು ನೋಡುವುದಕ್ಕೆ ಬಹು ಸೊಗಸಾಗಿರುತ್ತದೆ.
ಮುತ್ತತ್ತಿಗೆ ಹೋಗುವ ಪ್ರವಾಸಿಗರು ಸಹ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಕೆಲವು ದಿನಗಳ ನಂತರ ಅಪರಾಧಗಳು ಹೆಚ್ಚಾಗುತ್ತಿದ್ದ ಕಾರಣ ಅರಣ್ಯಇಲಾಖೆಯವರು ಮುಂಜಾಗ್ರತೆಯ ಕ್ರಮವಾಗಿ ಪ್ರವಾಸಿಗರಿಗೆ ಈ ಸ್ಥಳವನ್ನು ಸಹ ವರ್ಸಾಚಾರಣೆಗೆ ಪ್ರವೇಶ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುತ್ತತ್ತಿ ಗ್ರಾಮದ ವಾಸಿ ಹಾಗೂ ಬ್ಯೆಟರ ಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರಾದ ರವಿ ಮಾತನಾಡಿ ಮುನ್ನೆಚ್ಚರಿಕ ಕ್ರಮವಾಗಿ ಪ್ರವಾಸಿಗರನ್ನು ನಿಷೇಧಿಸಿರುವುದು ಶ್ಲಾಘನೀಯ. ಆದರೆ ಭಕ್ತರಿಗೆ ಜನವರಿ ಒಂದನೇ ಸೋಮವಾರ ದೇವರ ದರ್ಶನ ಮಾಡಲು ಅವಕಾಶ ನೀಡಿದ್ದರೆ ಭಕ್ತರಿಗೆ ಹೊಸ ವರ್ಷ ಆಚರಣೆಗೆ ಅನುಕೂಲವಾಗುತಿತ್ತು. ಆದುದರಿಂದ ಸೋಮವಾರ ಭಕ್ತರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಕುಮಾರ್ ಮಾತನಾಡಿ ನಮ್ಮ ಗಾಣಾಳು ಗ್ರಾಮದಲ್ಲಿ ಇರುವ ಗಾಣಾಳು ಫಾಲ್ಸ್ (ಬೆಂಕಿ ಫಾಲ್ಸ್) ಎಂದೆ ಹೆಸರಾಗಿರುವ ಈ ಸ್ಥಳವನ್ನು ಪ್ರವಾಸಿಗರು ದುಶ್ಚಟಗಳಿಗೆ ಬಳಸಿಕೊಳ್ಳುತ್ತಿರುವುದು ಸರಿ ಇಲ್ಲ ಪ್ರವಾಸೋದ್ಯಮ ಇಲಾಖೆಯವರು ಇದನ್ನು ಪರಿಗಣಿಸಿ ಪ್ರವಾಸಿ ತಾಣವಾಗಿ ಮಾಡಿದರೆ ಮಂಡ್ಯ ಜಿಲ್ಲೆಯಲ್ಲಿ ಇದು ಒಂದು ಹೆಸರುವಾಸಿಯಾಗುತ್ತದೆ. ನಮ್ಮ ಶಾಸಕರಾದ ಪಿ.ಎಂ ನರೇಂದ್ರ ಸ್ವಾಮಿ ಅವರಿಗೆ ಸಹ ಮನವಿ ಸಲ್ಲಿಸಿದ್ದೇವೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಬಂದು ಬ್ತ್ ಏರ್ಪಡಿಸಿದ್ದೇವೆ. ಸಬ್ ಇನ್ಸ್ಪೆಕ್ಟರ್ ಬಿ.ಮಹೇಂದ್ರ ಮಾತನಾಡಿ ಮುತ್ತತ್ತಿ ಹೋಗುವ ಮಾರ್ಗ ಮಧ್ಯ ಸಿಗುವ ತಲವಾಡಿ ಚೆಕ್ ಪೋಸ್ಟಿನಲ್ಲಿ ಅರಣ್ಯ ಇಲಾಖೆ ಅವರ ಜೊತೆ ನಮ್ಮ ಸಿಬ್ಬಂದಿಯವರು ಸಹ ಕಾರ್ಯ ನಿರ್ವಹಿಸುತ್ತಾರೆ ಹಾಗೂ ಮುತ್ತತ್ತಿಯಲ್ಲೂ ಸಹ ನಮ್ಮ ಸಿಬ್ಬಂದಿ ನೇಮಿಸಲಾಗುವುದು ಎಂದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications