Darshan Gang Another Attack: ಪೊಲೀಸ್ ಪೇದೆ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ!
ಮಂಡ್ಯ ಜೂನ್ 20: ರೇಣುಕಾಸ್ವಾಮಿ ಕೊಲೆ ಪ್ರಕರಣ ಅಲ್ಲದೇ ದರ್ಶನ್‌ಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳು ಒಂದಾದ ಮೇಲೊಂದರಂತೆ ಹೊರಬರುತ್ತಲೇ ಇವೆ.
ಹೌದು... ದರ್ಶನ್ ಗ್ಯಾಂಗ್ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿತ್ತು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಶಾಸಕರ ಮನೆಯಲ್ಲಿ ಪೊಲೀಸ್ ಪೇದೆ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿತ್ತು ಎನ್ನಲಾಗುತ್ತಿದೆ. ಬಳಿಕ ಗನ್‌ಮ್ಯಾನ್ ಜೊತೆ ರಾಜಿ ಮಾಡಿಸಲಾಗಿದ್ದರಿಂದ ವಿಚಾರ ಹೊರಬರಲಿಲ್ಲ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆ ಸಮಯದಲ್ಲಿ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಏಪ್ರಿಲ್ 22ರಂದು ನಟ ದರ್ಶನ್ ಸ್ಟಾರ್ ಚಂದ್ರು ಪರ ಮಂಡ್ಯದಲ್ಲಿ ಪ್ರಚಾರ ಮಾಡಲು ತೆರಳಿದ್ದರು. ಈ ವೇಳೆ ಮದ್ದೂರು ಶಾಸಕ ಉದಯ್ ಅವರ ಗನ್ ಮ್ಯಾನ್ ಆಗಿದ್ದ ನಾಗೇಶ್ ಜೊತೆ ದರ್ಶನ್ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.
ದರ್ಶನ್ ಗ್ಯಾಂಗ್‌ನ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಸೇರಿ ಡಿಎಆರ್ ಪೇದೆ ನಾಗೇಶ್‌ನೊಂದಿಗೆ ಮುಂಡರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇದೇ ಜಗಳ ಪಕೋಪಕ್ಕೆ ತಿರುಗಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಅವರ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿತ್ತು.
ಹಲ್ಲೆ ವೇಳೆ ದರ್ಶನ್ ಗ್ಯಾಂಗ್ ಬಾಯಿಗೆ ಬಂದಂತೆ ಪೇದೆಗೆ ಬಾಯಿಗೆ ಬಂದಂತೆ ಮಾತನಾಡಿತ್ತು. ಪೊಲೀಸರು ನಮ್ಮನ್ನು ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್ ಅವರು ಚಿಕಿತ್ಸೆ ಸಹ ಪಡೆದುಕೊಂಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕಸ್ತೂರು ಪೊಲೀಸರು ಠಾಣೆಗೆ ನಾಗೇಶ್ ಅವರು ದೂರು ನೀಡಲು ಹೋಗಿದ್ದರಾದರೂ ಕೊಡಲಿಲ್ಲ.

ಯಾಕೆಂದರೆ ಈ ವಿಚಾರ ದೊಡ್ಡದಾಗುತ್ತಿದ್ದಂತೆ ಸಂದಾನ ಮಾಡಿಕೊಳ್ಳುವ ನಿರ್ಧಾರಕ್ಕೆ ಡಿ ಗ್ಯಾಂಗ್ ಬಂದಿದೆ. ಸ್ವತ: ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್ ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಷ್ಟೇ ಅಲ್ಲ ದರ್ಶನ್ ಟಿ ನರಸೀಪುರ ಫಾರ್ಮ್‌ಹೌಸ್‌ನಲ್ಲಿ ಕಾನೂನು ಬಾಹಿರವಾಗಿ ಪಕ್ಷಿಯೊಂದನ್ನು ಸಾಕಿದ್ದರು ಎನ್ನುವ ಪ್ರಕರಣಕ್ಕೂ ಜೀವ ಕಳೆ ಬಂದಿದೆ. ಈ ಪ್ರಕರಣದ ದಾಖಲಾಗಿದ್ದರು ದರ್ಶನ್ ವಿಚಾರಣೆ ನಡೆಸಲಾಗಿಲ್ಲ. ಇದರ ಸುತ್ತು ವಿಚಾರಣೆಗಳನ್ನೂ ನಡೆಸಲಾಗುತ್ತಿದೆ.
ದರ್ಶನ್ ಗ್ಯಾಂಗ್ ಜೈಲಿಗೆ
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್ನ ಆರೋಪಿಗಳಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ 17 ಮಂದಿಯನ್ನು ಬಂಧಿಸಿ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿದರು. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಆರೋಪಿಗಳನ್ನು ಪೊಲೀಸರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಕೋರ್ಟ್ ಇವರನ್ನ ನ್ಯಾಯಾಂಗ ಬಂಧನಕ್ಕೆ ಸೂಚಿಸಿದೆ.












Click it and Unblock the Notifications