ಜೀವನ ಶೈಲಿ ಬದಲಾಯಿಸಿಕೊಳ್ಳದಿದ್ದರೆ ಪರಿಸರದಿಂದ ಅಪಾಯ: ಎಸ್.ಎಂ.ಕೃಷ್ಣ
ಮಂಡ್ಯ, ಡಿಸೆಂಬರ್ 20: ನಾವು ಪ್ರಕೃತಿಯನ್ನು ಲಘುವಾಗಿ ಪರಿಗಣಿಸಿದ್ದೇವೆ. ನಮ್ಮ ಪರಿಸರದ ಮೇಲೆ ಆಗುತ್ತಿರುವ ಒತ್ತಡ ಗಮನಿಸಿ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರದಿದ್ದರೆ ದೊಡ್ಡ ಅಪಾಯ ಕಾದಿದೆ. ಎಂದು ಮಾಜಿ ಮುಖ್ಯಮಂತ್ರಿ,ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಎಚ್ಚರಿಸಿದರು.
ಡಾ.ಬಿ.ಶಿವಲಿಂಗಯ್ಯ ಅಭಿನಂದನಾ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಡಾ.ಬಿ.ಶಿವಲಿಂಗಯ್ಯ ಗೌರವ ಗ್ರಂಥ 'ಹೃದಯಿ ಶಿವ' ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿನಿಧಿಯಾಗಿ ಶಿವಲಿಂಗಯ್ಯನವರು ಮಾಡಿರುವ ಅಪ್ರತಿಮ ಸೇವೆಗಾಗಿ ನಡೆಸಿರುವ ಸಮಾರಂಭ ಸುಂದರವಾಗಿದೆ. ಶಿವಲಿಂಗಯ್ಯನವರು ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷರಾಗಿ ಜನತೆಯ ಗಮನವನ್ನು ಅದರೆಡೆಗೆ ಸೆಳೆದು ದೊಡ್ಡ ಉಪಕಾರ ಮಾಡಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಹೆಸರು ಮಾಡಿದೆ. ಪರಿಸರದ ಬಗ್ಗೆ ಜನರಿಗೆ ತಿಳಿವಳಿಕೆ ಇನ್ನೂ ಮೂಡಿಲ್ಲ.
ಗ್ರಾಮಾಂತರ ಮತ್ತು ಪಟ್ಟಣ ಎರಡೂ ಕಡೆ ಪರಿಸರ ಪ್ರಜ್ಞೆ ಬಗ್ಗೆ ಹೆಚ್ಚು ಕಾಳಜಿ ಮೂಡಿಲ್ಲ.ಹಿಂದಿನವರ ರೀತಿ ಬದುಕು ಎಂಬ ಭ್ರಮೆಯಿಂದ ನಾವು ಹೊರಬರಬೇಕು.ನೈಸರ್ಗಿಕ ಬದಲಾವಣೆ ಹೆಚ್ಚು ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ನಾವು.ಈಗಾಗಲೇ ಅಪಾಯದ ಗಂಟೆ ಮೊಳಗುತ್ತಿದೆ. ಪರಿಸರದ ಬಗ್ಗೆ ಹೆಚ್ಚು ಶ್ರದ್ಧೆ ಕಾಳಜಿ ವಹಿಸಬೇಕು ಎಂಬುದನ್ನು ಒತ್ತಾಯ ಪೂರ್ವಕವಾಗಿ ಹೇಳುತ್ತೇನೆ. ಅದರ ಬಗೆಗಿನ ಕಾಳಜಿ ಮುಂದಿನ ಪೀಳಿಗೆಗೆ ನಾವು ಕೊಡುವ ಗೌರವವಾಗಿದೆ ಎಂದರು.
ಸ್ಪಷ್ಟನೆ: ಪದ್ಮವಿಭೂಷಣ ಪ್ರಶಸ್ತಿ ಬಂದಾಗ ತಮ್ಮನ್ನು ಯಾರೂ ಅಭಿನಂದನೆಗಾಗಿ ಕರೆದಿಲ್ಲ ಎನ್ನುವುದರಲ್ಲಿ ಹುರುಳಿಲ್ಲ. ಕರ್ನಾಟಕ ಸಂಘದವರು, ಸಿ.ಎಸ್.ಪುಟ್ಟರಾಜು ಕರೆದಿದ್ದರು.ನಾನು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.ನಂತರ ಕೊರೊನಾ, ಚುನಾವಣೆ ಬಂದಿದ್ದರಿಂದ ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆಲ್ಲಾ ಮಂಡ್ಯ ಜನತೆ ಕಾರಣಕರ್ತರು. ಅವರ ಋಣ ನನ್ನ ಮೇಲಿದೆ. ಅದಕ್ಕಾಗಿ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಮಚಿತ್ತದ ಮುತ್ಸದ್ದಿ:ಪ್ರೊ॥ ಕೃಷ್ಣೇಗೌಡ
ಅಭಿನಂದನಾ ಭಾಷಣ ಮತ್ತು ಗೌರವಗ್ರಂಥ ಕುರಿತು ಪ್ರಧಾನ ಸಂಪಾದಕ ಪ್ರೊ. ಎಂ.ಕೃಷ್ಣೇಗೌಡ ಮಾತನಾಡಿ ಸಮಕಾಲೀನ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣರಂತಹ ಮುತ್ಸದ್ದಿ ರಾಜಕಾರಣಿಗಳು ವಿರಳ ಬೆರಳೆಣಿಕೆಯಷ್ಟಿದ್ದಾರೆ.ಇವರು ಸಮಚಿತ್ತದ ಸಂಯಮದ ರಾಜಕೀಯ ಮುತ್ಸದ್ದಿ.ಮಂಡ್ಯದ ಗೌರವ ಹೆಚ್ಚಿಸಿದ್ದಾರೆ.ಪ್ರಧಾನಿಯಾಗುವ ಅವಕಾಶ ಬಂದಿತ್ತು ಎಂದು ಸ್ಮರಿಸಿದರು.
ಬಿ.ಶಿವಲಿಂಗಯ್ಯನವರಿಗೆ ಇನ್ನೂ ಅವಕಾಶಗಳು ಸಿಗಬೇಕಿತ್ತು.ವಿಭಿನ್ನ ಆಸಕ್ತಿಗಳ ವ್ಯಕ್ತಿ. ಹಲವಾರು ಪ್ರಥಮ ಗಳನ್ನು ಮಾಡಿದರು. ಯಾವ ಸೋಲಿಗೂ ನಷ್ಟಕ್ಕೂ ಹೆದರುವವರಲ್ಲ.ಗ್ರಂಥದಲ್ಲಿ ಶಿವಲಿಂಗಯ್ಯನವರ ಬಹುಮುಖಿ ವ್ಯಕ್ತಿತ್ವ ಅನಾವರಣಗೊಂಡಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ಡಾ.ಬಿ.ಶಿವಲಿಂಗಯ್ಯ ಎಲ್ಲರಿಗೂ ತಮ್ಮ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಎಸ್.ಬಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ದಂಪತಿಗಳನ್ನು ಗಣ್ಯರು ಅಭಿನಂದಿಸಿದರು. ಸಮಾರಂಭದಲ್ಲಿ 80 ಕ್ಕೂ ಹೆಚ್ಚು ಲೇಖಕರು ಬರದಿರುವ ಲೇಖನಗಳನ್ನು ಒಳಗೊಂಡಂತೆ 400 ಪುಟಗಳ ಗೌರವಗ್ರಂಥ 'ಹೃದಯಿ ಶಿವ' ಬಿಡುಗಡೆ ಮಾಡಲಾಯಿತು. ಬಿ.ಶಿವಲಿಂಗಯ್ಯನವರ ಪ್ರಮುಖ ಜೀವನ ಘಟ್ಟಗಳ ವಿಡಿಯೋ ಪ್ರದರ್ಶಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ,ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ವಹಿಸಿದ್ದರು. ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ನಾಗವಲ್ಲಿ ಮಠದ ಸ್ವಾಮೀಜಿ,ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ರಾಮಲಿಂಗಯ್ಯ, ಮಂಡ್ಯ ಶಾಸಕರಾದ ಪಿ.ರವಿಕುಮಾರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸಿ.ಎಸ್.ಪುಟ್ಟರಾಜು,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಎಸ್‌ಬಿಇಟಿ ಕಾರ‌್ಯದರ್ಶಿ ಮೀರಾ ಶಿವಲಿಂಗಯ್ಯ,ಗ್ರಂಥ ಸಮಿತಿ ಸಂಪಾದಕರಾದ ಡಾ.ಸಿ.ಶಿವಕುಮಾರ್,ಡಾ.ಹೆಚ್.ವಿ.ಶಿಲ್ಪಶ್ರೀ,ನಿರೂಪಕಿ ಎಂ.ಯು.ಶ್ವೇತಾ, ಡಾ.ಬಿ.ಶಿವಲಿಂಗಯ್ಯ ಅವರ ಕುಟುಂಬ ವರ್ಗದವರು ಹಾಗೂ ಅಭಿನಂದನಾ ಸಮಿತಿ ಸದಸ್ಯರು,ಅಭಿಮಾನಿಗಳು,ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.
ಅಭಿನಂದನಾ ಸಮಾರಂಭ ಕಿರಿಯರಿಗೆ ಸ್ಫೂರ್ತಿ:
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಬಿ. ಶಿವಲಿಂಗಯ್ಯನವರ ಪರಿಸರ ಮಾಲಿನ್ಯ ಮಂಡಳಿಯಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಪರಿಸರ ಇಲಾಖೆಗೆ ಮಹತ್ವ ಬಂದಿರುವುದರಿಂದಾಗಿ ಆ ಮಂಡಳಿಗೆ ಇಂದಿನ ದಿನಗಳಲ್ಲಿ ಪೈಪೋಟಿ ನಡೆಯುತ್ತಿದೆ.ಇದರಿಂದ ಪರಿಸರಕ್ಕೆ ಎಷ್ಟು ಮಹತ್ವವಿದೆ ಎಂಬುದನ್ನು ತಿಳಿಯಬೇಕು.
ಇವರು ವಿದೇಶಗಳಲ್ಲೂ ಒಳ್ಳೆಯ ಸಾಧನೆ ಮಾಡಿ ತವರಿಗೆ ವಾಪಸ್ ಬಂದಿರುವುದರಿಂದ ಅವರ ಜ್ಞಾನ ಪಡೆದು ಅಭಿವೃದ್ಧಿಯ ಕಡೆ ಸಾಗಬೇಕು. ಇವರ ಅಭಿನಂದನೆ ಸಮಾರಂಭ ಏರ್ಪಡಿಸಿರುವುದು ಕಿರಿಯರಿಗೆ ಸ್ಫೂರ್ತಿಯಾಗಿದೆ. ಅವರ ಹಿಂದಿನ ಶಕ್ತಿಯಾಗಿ ಮೀರಾ ಅವರು ಇದ್ದಾರೆ. ಶಿವಲಿಂಗಯ್ಯನವರ ಒಲವು ತಾಂತ್ರಿಕತೆ ಕಡೆಗಾದರೆ ಅದಕ್ಕೆ ಹೊಳಪು ತಂದಿರುವುದು ಶ್ರೀಮತಿ ಮೀರಾ ಅವರ ಸಮಾಜ ಸೇವೆಯಾಗಿದೆ ಎಂದು ಬಣ್ಣಿಸಿದರು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications