ಕಾಂಗ್ರೆಸ್‌ ಶಾಸಕ ಕೆ.ಎಂ. ಉದಯ್ ನಿವಾಸಕ್ಕೆ ನಟ ದರ್ಶನ್‌ ಭೇಟಿ: ಕಾರಣವೇನು..?

ಮಂಡ್ಯ, ನವೆಂಬರ್‌ 15: ಚಲನಚಿತ್ರ ನಟ ದರ್ಶನ್ ಹಾಗೂ ನನ್ನ ನಡುವಿನ ಭೇಟಿ ಕೇವಲ ಭೋಜನಕೂಟಕ್ಕಷ್ಟೇ ಸೀಮಿತವಾಗಿದೆಯೇ ಹೊರತು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.

ಮದ್ದೂರು ತಾಲೂಕಿನ ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಚಿತ್ರನಟ ದರ್ಶನ್ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಬಗ್ಗೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ.

darshan-visits-congress-mla-k-m-uday-residency

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಂತರ ನನ್ನ ರಾಜಕೀಯ ಜಂಜಾಟದಿಂದಾಗಿ ಬ್ಯುಸಿಯಾಗಿದ್ದೆ, ಹೀಗಾಗಿ ದರ್ಶನ್ ಮತ್ತು ನನ್ನ ಇಬ್ಬರ ನಡುವೆ ಭೇಟಿ ಸಾಧ್ಯವಾಗಿಲ್ಲ.

ಮಂಗಳವಾರ ರಾತ್ರಿ ನನ್ನ ಸ್ವಗ್ರಾಮಕ್ಕೆ ಭೇಟಿ ನೀಡಿದ್ದ ದರ್ಶನ್, ಚುನಾವಣೆ ಗೆಲುವು ಮತ್ತು ದೀಪಾವಳಿ ಶುಭಾಶಯ ಕೋರಿದರು. ನಂತರ ಭೋಜನ ಸ್ವೀಕರಿಸಿ ತೆರಳಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

ದರ್ಶನ್ ಮತ್ತು ನನ್ನ ನಡುವೆ ಬಹಳ ವರ್ಷಗಳಿಂದ ಆತ್ಮೀಯತೆ ಇದೆ. ನಾನು ರಾಜಕೀಯಕ್ಕೆ ಬರುವ ಹಿಂದಿನಿಂದಲೂ ನನ್ನ ಸ್ನೇಹಿತರಾಗಿದ್ದಾರೆ ಎಂದು ಉದಯ್ ಹೇಳಿದರು.

ಅನುಮೋದನೆ ಇಲ್ಲದೆ ಗುದ್ದಲಿ ಪೂಜೆ ನೆರವೇರಿಸಲು ತೆಲೆಕೆಟ್ಟಿಲ್ಲ

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದ ಅನುಮೋದನೆ ಇಲ್ಲದೆ ಗುದ್ದಲಿಪೂಜೆ ನಡೆಸಲು ನನಗೆ ತಲೆಕೆಟ್ಟಿಲ್ಲ ಎಂದು ಶಾಸಕ ಕೆ.ಎಂ. ಉದಯ್ ಮಾಜಿ ಶಾಸಕ ಡಿ.ಸಿ ತಮ್ಮಣ್ಣ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ತಾಲೂಕಿನ ಆತಗೂರು ಹೋಬಳಿಯ ಕಲದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದ ಕಾರ‌್ಯಕ್ರಮವೊಂದರಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಹಿಂದೆ ಮೂರು ಬಾರಿ ಆಯ್ಕೆಯಾಗಿದ್ದ ಶಾಸಕರೊಬ್ಬರು ಸರ್ಕಾರದ ಅನುದಾನ ಇಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನಡೆಸುವುದರೊಂದಿಗೆ ಅಭಿವೃದ್ಧಿ ಹೆಸರಿನಲ್ಲಿ ಅಗ್ಗದ ಪ್ರಚಾರ ಪಡೆದಿದ್ದಾರೆ. ಒಂದು ವೇಳೆ ಇವರ ಬಳಿ ಅನುಮೋದನೆ ಅಥವಾ ಅನುದಾನದ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಶಾಸಕ ಕೆ.ಎಂ. ಉದಯ್ ಪಂಥಾಹ್ವಾನ ನೀಡಿದರು.

ನಾನು ಮಾಡಿದ ಅಭಿವೃದ್ಧಿ ಕಾಮಗಾರಿಗಳಿಗೆ ಈಗಿನ ಶಾಸಕರು ಭೂಮಿಪೂಜೆ ಮಾಡಿದ್ದಾರೆ ಎಂದು ಡಿ.ಸಿ. ತಮ್ಮಣ್ಣ ಆರೋಪಿಸಿದ್ದಾರೆ. ತಮ್ಮಣ್ಣ ಪರ ಚೇಲಾಗಿರಿ ಮಾಡುವ ಕೆಲವರು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮದ್ದೂರು ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಮುಂದಿನ ಒಂದು ವಾರದಲ್ಲಿ ಚಾಲನೆ ನೀಡಲಾಗುವುದು. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸಲು ವಿಳಂಬವಾಗಿದೆ. ಸರ್ಕಾರದೊಂದಿಗೆ ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದೇನೆ. ಆತಗೂರು ಹೋಬಳಿ ಸೇರಿದಂತೆ ಕ್ಷೇತ್ರದ 16 ಕೆರೆಗಳಿಗೆ ಶಿಂಷಾ ನದಿ ಮೂಲಕ ನೀರು ತುಂಬಿಸುವ ಕೆಲಸಕ್ಕೆ ಸಧ್ಯದಲ್ಲೇ ಚಾಲನೆ ದೊರಕಲಿದೆ ಎಂದು ಹೇಳಿದರು.

ಬನ್ನಹಳ್ಳಿ ಏತ ನೀರಾವರಿ ಯೋಜನೆ ವಿದ್ಯುತ್ ಪೂರೈಕೆ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದೆ. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರೊಂದಿಗೆ ಮಾತುಕತೆ ನಡೆಸಿದ್ದೇನೆ. ಅದಕ್ಕೆ ಶೀಘ್ರದಲ್ಲೇ ವಿದ್ಯುತ್ ದೊರೆತು ಚಾಲನೆಯಾಗುತ್ತದೆ ಎಂದು ಶಾಸಕ ಉದಯ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+