ಕೊಡಗು ಜಿಲ್ಲೆಗೆ ಬಂತು ಮೊಬೈಲ್ ಆರೋಗ್ಯ ತಪಾಸಣಾ ವಾಹನ, ವಿಶೇಷತೆಗಳು

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಕೊಡಗು ರೆಡ್‍ಕ್ರಾಸ್ ಘಟಕದ ಕೋರಿಕೆಯಂತೆ 75 ಲಕ್ಷ ರೂ. ವೆಚ್ಚದ ವೈದ್ಯಕೀಯ ತಪಾಸಣಾ ಮೊಬೈಲ್ ವಾಹನವನ್ನು ನೀಡಿದೆ.

ಮಡಿಕೇರಿ, ಫೆಬ್ರವರಿ 03; ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಕೊಡಗು ರೆಡ್‍ಕ್ರಾಸ್ ಘಟಕದ ಕೋರಿಕೆಯಂತೆ 75 ಲಕ್ಷ ರೂ. ಮೌಲ್ಯದ ಸುಸಜ್ಜಿತವಾದ ವೈದ್ಯಕೀಯ ತಪಾಸಣೆ ಮೊಬೈಲ್ ವಾಹನವನ್ನು ನೀಡಿದೆ. ಕರ್ನಾಟಕ ರಾಜ್ಯಕ್ಕೆ ಎರಡು ಮೊಬೈಲ್ ಘಟಕವನ್ನು ಭಾರತೀಯ ರೆಡ್‍ಕ್ರಾಸ್ ನೀಡಿದ್ದು, ಕೊಡಗು ಜಿಲ್ಲೆಗೆ 1 ಘಟಕ ಸಿಕ್ಕಿದೆ.

ಶಾಸಕರಾದ ಕೆ. ಜಿ. ಬೋಪಯ್ಯ ರೆಡ್‍ಕ್ರಾಸ್‍ನ ನೂತನ ಆರೋಗ್ಯ ತಪಾಸಣಾ ಮೊಬೈಲ್ ಘಟಕಕ್ಕೆ ಚಾಲನೆ ನೀಡಿದರು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಜನತೆಗೆ ಹೆಚ್ಚಿನ ರೀತಿಯಲ್ಲಿ ಇದರ ಪ್ರಯೋಜನ ದೊರಕುವಂತಾಗಲಿ ಎಂದು ಹಾರೈಸಿದರು. ರೆಡ್‍ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್. ಟಿ., ಕಾರ್ಯದರ್ಶಿ ಎಚ್. ಆರ್. ಮುರಳೀಧರ್, ಯೂತ್ ರೆಡ್‍ಕ್ರಾಸ್ ನಿರ್ದೇಶಕ ಎಂ. ಧನಂಜಯ್ ಮುಂತಾದವರು ಉಪಸ್ಥಿತರಿದ್ದರು.

Redcross Mobile Testing Van For Kodagu Know About Vehicle

ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೆಡ್‍ಕ್ರಾಸ್ ಕೊಡಗು ಜಿಲ್ಲೆಯನ್ನು ಗುರುತಿಸಿ ಮೊಬೈಲ್ ಆರೋಗ್ಯ ತಪಾಸಣಾ ಘಟಕವನ್ನು ನೀಡಿದೆ. ವೈದ್ಯಕೀಯ ಕಾಲೇಜಿನ ವೈದ್ಯರ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಔಷಧಿ ಮತ್ತು ತಾಂತ್ರಿಕ ನೆರವನ್ನು ಮೊಬೈಲ್ ಘಟಕಕ್ಕೆ ನೀಡಲಿದೆ. ಮೊಬೈಲ್ ಘಟಕದ ಸದುಪಯೋಗವನ್ನು ಯೋಜಿತ ರೀತಿಯಲ್ಲಿ ಪಡೆಯಲು ಯೋಜನೆ ರೂಪಿಸಲಾಗಿದೆ.

ಮೊಬೈಲ್ ಘಟಕಕ್ಕೆ ಚಾಲನೆ; ಭಾರತೀಯ ರೆಡ್‍ಕ್ರಾಸ್‍ನ ಕೊಡಗು ಘಟಕಕ್ಕೆ 75 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಮೀಸಲಿರಿಸಿದ ಸುಸಜ್ಜಿತ ಮೊಬೈಲ್ ಚಿಕಿತ್ಸಾ ಘಟಕಕ್ಕೆ ನಗರದ ಗಾಂಧಿ ಮಂಟಪದ ಮುಂದೆ ನಡೆದ ಸರಳ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ರೆಡ್‍ಕ್ರಾಸ್ ಕೊಡಗು ಜಿಲ್ಲೆಗೆ ನೀಡಿರುವ ಸುಸಜ್ಜಿತ ಆರೋಗ್ಯ ತಪಾಸಣಾ ಮೊಬೈಲ್ ಘಟಕವು ಆರೋಗ್ಯ ಇಲಾಖೆಗೆ ಮಹತ್ವದ ಕೊಡುಗೆಯಾಗಿದ್ದು, ಇದರ ಪ್ರಯೋಜನವನ್ನು ವಿವಿಧ ಇಲಾಖೆಗಳ ಸಹಕಾರದಲ್ಲಿ ಪಡೆಯಲಾಗುತ್ತದೆ.

Redcross Mobile Testing Van For Kodagu Know About Vehicle

ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್‍ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ. ಕೆ. ರವೀಂದ್ರ ರೈ, "ಕರ್ನಾಟಕಕ್ಕೆ ಎರಡು ಮೊಬೈಲ್ ಘಟಕವನ್ನು ಭಾರತೀಯ ರೆಡ್‍ಕ್ರಾಸ್ ನೀಡಿದ್ದು, ಕೊಡಗು ಜಿಲ್ಲೆಗೆ 1 ಘಟಕ ನೀಡಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಬೇರೆ ಕಡೆ ರಕ್ತ ಸಂಗ್ರಹ ಸೇರಿದಂತೆ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಘಟಕವನ್ನು ಬಳಸಿಕೊಳ್ಳಲಾಗುತ್ತದೆ" ಎಂದು ಹೇಳಿದರು.

ಈ ಮೊಬೈಲ್ ಘಟಕ ಸುಸಜ್ಜಿತವಾದ ವೈದ್ಯಕೀಯ ತಪಾಸಣೆಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಮೊಬೈಲ್ ಘಟಕವು ಗ್ರಾಮೀಣ ಭಾಗಗಳೂ ಸೇರಿದಂತೆ ಜಿಲ್ಲೆಯಾದ್ಯಂತ ಜನತೆಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಮಾತನಾಡಿ, "ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೆಡ್‍ಕ್ರಾಸ್ ಕೊಡಗು ಜಿಲ್ಲೆಯನ್ನು ಗುರುತಿಸಿ ಮೊಬೈಲ್ ಘಟಕವನ್ನು ನೀಡಿದ್ದು ಪ್ರಶಂಸನೀಯ. ವೈದ್ಯಕೀಯ ಕಾಲೇಜಿನ ವೈದ್ಯರ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಔಷಧಿ ಮತ್ತು ತಾಂತ್ರಿಕ ನೆರವನ್ನು ಮೊಬೈಲ್ ಘಟಕಕ್ಕೆ ನೀಡಲಿದೆ. ಘಟಕದ ಸದುಪಯೋಗವನ್ನು ಯೋಜಿತ ರೀತಿಯಲ್ಲಿ ಪಡೆಯಲಾಗುತ್ತದೆ" ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+